ಕೃಷ್ಣ ಬಜೆಟ್ಗೆ ನಂಜುಂಡಪ್ಪ- ಬ್ರಹ್ಮಾನಂದ ಶಹಭಾಶ್ಗಿರಿ
ಬೆಂಗಳೂರು : ಆರ್ಥಿಕ ತಜ್ಞರಾದ ಡಾ. ನಂಜುಂಡಪ್ಪ ಹಾಗೂ ಡಾ.ಬ್ರಹ್ಮಾನಂದ ಮುಖ್ಯಮಂತ್ರಿ ಕೃಷ್ಣ ಮಂಡಿಸಿರುವ ಬಜೆಟ್ಟನ್ನು ಶ್ಲಾಘಿಸಿದ್ದಾರೆ.
ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷರೂ ಆದ ಡಾ.ನಂಜುಂಡಪ್ಪ , ಮುಖ್ಯಮಂತ್ರಿ ಕೃಷ್ಣ ಮಂಡಿಸಿರುವ ಬಜೆಟ್ ರೈತಾಪಿ ವರ್ಗದ ಕಣ್ಣೊರೆಸುವುದರ ಜೊತೆಗೆ ಪ್ರಾದೇಶಿಕವಾರು ಅಸಮತೋಲನವನ್ನೂ ತಪ್ಪಿಸುವ ಅಂಶಗಳಿಂದ ಕೂಡಿದೆ. ವ್ಯಯದ ಪ್ರಮಾಣದಲ್ಲಿ ಇನ್ನೂ ಸ್ವಲ್ಪ ದೊಡ್ಡ ಕೈ ತೋರಿದ್ದರೆ ಚೆನ್ನಿತ್ತು. ಪ್ರಸ್ತುತ ಪ್ರಸ್ತಾಪಿಸಿರುವ ವ್ಯಯದ ಒಟ್ಟು ಹಣ 8 ಸಾವಿರದ 588 ಕೋಟಿ ರುಪಾಯಿ. ಅದನ್ನು 10 ಸಾವಿರ ಕೋಟಿ ರುಪಾಯಿವರೆಗೆ ವಿಸ್ತರಿಸಿದ್ದರೆ ಇದೊಂದು ಅತ್ಯತ್ತಮ ಬಜೆಟ್ ಆಗ್ತುತಿತ್ತು ಎಂದಿದ್ದಾರೆ.
ಒಟ್ಟಾರೆ ವ್ಯತ್ಯಯವನ್ನು ತಗ್ಗಿಸಲು ಕೃಷ್ಣ ಇಟ್ಟಿರುವ ಹೆಜ್ಜೆ ಸರಿಯಿದೆ. ಹೆಚ್ಚು ಸುಂಕ ವಸೂಲಿ ಹಾಗೂ ವಿಶ್ವ ವಾಣಿಜ್ಯ ಒಪ್ಪಂದದ ಹೊಡೆತ ತಿಂದಿರುವ ಮಂದಿಯ ಹಿತ ರಕ್ಷಣೆಗೆ ಒತ್ತು ನೀಡಿದೆ. ಕೇಂದ್ರ ಬಜೆಟ್ನಲ್ಲಿ ಕಾರು ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಸುಂಕ ಕಡಿಮೆ ಮಾಡಿರುವುದನ್ನು ನಮ್ಮ ಸರ್ಕಾರ ಜಾಣ್ಮೆಯಿಂದ ಮನಗಂಡು, ಇಲ್ಲಿ ಅವುಗಳ ಮೇಲೆ ಸುಂಕ ಹೆಚ್ಚಿಸಿರುವುದು ಸ್ವಾಗತಾರ್ಹ. ಜೊತೆಗೆ ಸಕ್ಕರೆ ಮೇಲಿನ ಆಮದು ತೆರಿಗೆ ಹೆಚ್ಚಿಸಿರುವ ಸ್ಥಳೀಯ ಉತ್ಪಾದಕರ ಹಿತಾಸಕ್ತಿ ಕಾಪಾಡಲಿದೆ ಎಂದು ಆರ್ಥಿಕ ತಜ್ಞ ಡಾ.ಬ್ರಹ್ಮಾನಂದ ಹೇಳಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications