Get Updates
Get notified of breaking news, exclusive insights, and must-see stories!

ಬೆಳ್ತಂಗಡಿಯ ಸುರೇಶ್‌ಗೆ ಗೋಪಾಲಕೃಷ್ಣಪತ್ರಿಕೋದ್ಯಮ ಪ್ರಶಸ್ತಿ

ಮಂಗಳೂರು : ಗ್ರಾಮೀಣ ಪ್ರದೇಶದ ಅತ್ಯುತ್ತಮ ವರದಿಗಾರಿಕೆಗಾಗಿ ನೀಡುವ ಪಿ. ಗೋಪಾಲ ಕೃಷ್ಣ ಪತ್ರಿಕೋದ್ಯಮ ಪ್ರಶಸ್ತಿ ಯನ್ನು ಬೆಳ್ತಂಗಡಿಯ ಸುರೇಶ್‌ ಬಳಗಜೆ ಪಡೆದಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸುರೇಶ್‌ ಬೆಳಗಜೆ ಅವರಿಗೆ , ಸಾಹಿತಿ, ಪ್ರೊ. ಅಮೃತ ಸೋಮೇಶ್ವರ ಅವರು ಎರಡು ಸಾವಿರ ರೂಪಾಯಿ ನಗದು ಹಣ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಸುರೇಶ್‌ ಬೆಳಗಜೆ ಅವರು ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಪಿ. ಗೋಪಾಲ ಕೃಷ್ಣ ಪ್ರಶಸ್ತಿಯಯನ್ನು ಪತ್ರಕರ್ತರಾಗಿದ್ದ ದಿವಂಗತ ಗೋಪಾಲ ಕೃಷ್ಣ ಅವರ ಸ್ಮರಣಾರ್ಥವಾಗಿ ಸ್ಥಾಪಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಯು. ನರಸಿಂಹ ರಾವ್‌ ಮತ್ತು ದಿವಂಗತ ಗೋಪಾಲ ಕೃಷ್ಣ ಅವರ ಪತ್ನಿ ಸಾವಿತ್ರಿ ಹಾಜರಿದ್ದರು.

(ಮಂಗಳೂರು ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+