ಬೆಂಗಳೂರಲ್ಲಿ ಲೋಕಕಲ್ಯಾಣಾರ್ಥ ಚತುರ್ವೇದ ಮಹಾಯಾಗ
ಬೆಂಗಳೂರು : ಹನುಮಂತನಗರದ ಶ್ರೀಕುಮಾರ ಸ್ವಾಮಿ ದೇವಾಲಯದ ಆವರಣದಲ್ಲಿರುವ ಉದ್ಭವ ಆದಿಶೇಷನ ಸನ್ನಿಧಿಯಲ್ಲಿ ಮಾರ್ಚ್ 31ರಿಂದ ಏಪ್ರಿಲ್ 8ರವರೆಗೆ ಲೋಕ ಕಲ್ಯಾಣಾರ್ಥ ಚತುರ್ವೇದ ಸಂಹಿತಾ ಮಹಾಯಾಗ, ಸಂಗೀತೋತ್ಸವವೇ ಮೊದಲಾದ ಕಾರ್ಯಕ್ರಮಗಳು ಜರುಗಲಿವೆ.
ದೇಗುಲದ ರಜತ ಮಹೋತ್ಸವದ ಅಂಗವಾಗಿ ಈ ಮಹಾಯಾಗ ಏರ್ಪಡಿಸಲಾಗಿದ್ದು, ಈ ಸಂದರ್ಭದಲ್ಲಿ ಗಣಪತಿ ಹೋಮ, ನವಗ್ರಹ ಹವನ, ಚಂಡಿಕಾಯಾಗ, ರುದ್ರಯಾಗ, ಸುದರ್ಶನ ಹೋಮ, ಲಲಿತಾ ಹೋಮ, ಲಕ್ಷ್ಮೀನಾರಾಯಣ ಹೃದಯ ಯಾಗ, ಪಾಶುಪತಾಸ್ತ್ರ ಹವನ, ಧನ್ವಂತರಿಯಾಗ, ಶ್ರೀಸೂಕ್ತ, ಪುರುಷಸೂಕ್ತ ಹವನವೇ ಮೊದಲಾದ ಧಾರ್ಮಿಕ ವಿಧಿಗಳು ವೇದ ಪರಿಣಿತರ ನೇತೃತ್ವದಲ್ಲಿ ನಡೆಯಲಿವೆ.
ಬೆಂಗಳೂರಿನ ಬಸವನಗುಡಿ ರಸ್ತೆಯ ದೊಡ್ಡಗಣಪನ ದೇವಾಲಯದ ಹತ್ತಿರದಲ್ಲೇ ಇರುವ, ನರಹರಿರಾಯನ ಗುಡ್ಡ ಪ್ರದೇಶವೆಂದೇ ಹೆಸರಾಗಿದ್ದ ಈ ಪ್ರದೇಶದಲ್ಲಿ 25 ವರ್ಷಗಳ ಹಿಂದೆ ಉದ್ಭವ ಆದಿಶೇಷನ ಮೂರ್ತಿ ಮೊದಲ ಬಾರಿಗೆ ಕಂಡುಬಂತು. ಹಲವು ಭಕ್ತಾದಿಗಳು ಇಲ್ಲಿ ಪ್ರಾಕಾರ ನಿರ್ಮಿಸಿದರು. ಆನಂತರ ಮುಜರಾಯಿ ಇಲಾಖೆ ಅನುಮತಿಯ ಮೇರೆಗೆ ಪ್ರಾಕಾರ, ಪಾಕಶಾಲೆ, ಯಾಗಶಾಲೆ ನಿರ್ಮಿಸಲಾಯಿತು. 1987ರಲ್ಲಿ ಇಲ್ಲಿ ಮಹಾಕುಂಭಾಭಿಷೇಕವೂ ನಡೆದಿತ್ತು.
ಈ ದೇವಾಲಯದ ಮೇಲ್ಭಾಗದಲ್ಲಿರುವ ಕುಮಾರ ಸ್ವಾಮಿಯ ದೇವಾಲಯದಲ್ಲಿ ಪ್ರತಿವರ್ಷ ಕಾವಡಿ, ಹರೋಹರೋ ಜಾತ್ರೆ ನಡೆದರೆ, ದೇವಾಲಯದ ಕೆಳಭಾಗದಲ್ಲಿರುವ ಸಂಕಷ್ಟ ಹರ ಪಂಚಮುಖಿ ಗಣಪನ ಗುಡಿಯಲ್ಲಿ ಪ್ರತಿತಿಂಗಳೂ ಸಂಕಷ್ಟ ಚತುರ್ಥಿ ಬಹಳ ವೈಭವದಿಂದ ಜರುಗುತ್ತದೆ. ಕುಮಾರ ಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಜಾತ್ರೆಯೂ ನಡೆಯುತ್ತದೆ.
ಮಾರ್ಚ್ 31ರಿಂದ ನಡೆಯಲಿರುವ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ರಂಗಪ್ರಿಯ ಮಹಾಸ್ವಾಮಿಗಳು, ಹೆಬ್ಬೂರು ನಾರಾಯಣಾಶ್ರಮದ ಮಹಾಸ್ವಾಮಿಗಳು ಪಾಲ್ಗೊಳ್ಳುತ್ತಿದ್ದಾರೆ. ಉಪನ್ಯಾಸ, ಪ್ರವಚನ, ಸಂಗೀತೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮ : 31ರ ಶನಿವಾರ ಸಂಜೆ 6 ಗಂಟೆಗೆ ವಿದ್ವಾನ್ ಕೆ. ಗುರುರಾಜ್ ಅವರಿಂದ ಭಕ್ತಿಗೀತೆ, ಏಪ್ರಿಲ್ 1ರಂದು ಸಂಜೆ ಶ್ರೀರಂಗಪ್ರಿಯ ಮಹಾಸ್ವಾಮಿಗಳಿಂದ ಪ್ರವಚನ, ಏ. 2ರಂದು ರಾಮಾವತಾರ ಮಹಿಮೆ ಪ್ರವಚನ, 3ರಂದು ಶ್ರೀ ವಿದ್ಯಾಭೂಷಣರಿಂದ ಸಂಗೀತ ಕಚೇರಿ, 4ರಂದು ಪ್ರೊ. ಸಾ.ಕೃ. ರಾಮಚಂದ್ರರಾವ್ ಅವರಿಂದ ಉಪನ್ಯಾಸ, 5ರಂದು ಸಂಜೆ ಭಜನೆ, 6ರಂದು ಗಿರಿಜಾ ಕಲ್ಯಾಣೋತ್ಸವ ಹಾಗೂ ಭಜನೆ, 7ರಂದು ಶ್ರೀಧರಕೋಟೆ ಹಾಗೂ ತಂಡದವರಿಂದ ಭಕ್ತಿಗೀತೆ ಹಾಗೂ ಭಾವಗೀತೆ ಕಾರ್ಯಕ್ರಮ, 8ರಂದು ಕುಮಾರಿ ದಾಕ್ಷಾಯಿಣಿ ತಂಡದವರಿಂದ ಭಕ್ತಿಗೀತೆ ಹಾಗೂ ಶ್ರೀ ವಿಶ್ವೇಶ್ವರ ಸೋಮಯಾಜಿ ತಂಡದವರಿಂದ ಚಂದ್ರಹಾಸ ಚರಿತೆ ಯಕ್ಷಗಾನ ಪ್ರಸಂಗ ನಡೆಯಲಿದೆ.
(ಇನ್‌ಫೋ ವರದಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications