ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರು ಕೋಟಿಗೆ ಅಧಿಕೃತ ಮೊಹರು,ಮೇರಾ ಭಾರತ್‌ ಮಹಾನ್‌!

By Staff
|
Google Oneindia Kannada News

ನವದೆಹಲಿ : ಈವರೆಗೆ ಗಾಳಿಯಲ್ಲೇ ತೇಲುತ್ತಿದ್ದ ಭಾರತದ ಜನಸಂಖ್ಯೆ 100 ಕೋಟಿ ದಾಟಿರುವ ಸುದ್ದಿಗೀಗ ಅಧಿಕೃತ ಮೊಹರು ಬಿದ್ದಿದೆ. ಜನಗಣತಿ - 2001 ರ ಅಂಕಿಅಂಶಗಳು ಭಾರತದ ಜನಸಂಖ್ಯೆ 102 ಕೋಟಿ ಇರುವುದಾಗಿ ತಿಳಿಸಿವೆ. ಅಲ್ಲಿಗೆ ಇಡೀ ವಿಶ್ವದ ಜನಸಂಖ್ಯೆಯಲ್ಲಿ ಶೇ. 16.7 ಜನಸಂಖ್ಯೆ ಭಾರತದಲ್ಲೇ ಇದೆ ಎಂದಾಯಿತು . ಚೀನಾದ ನಂತರ ನೂರು ಕೋಟಿ ಜನಸಂಖ್ಯೆಯನ್ನು ದಾಖಲಿಸುತ್ತಿರುವ ಎರಡನೇ ರಾಷ್ಟ್ರ ನಮ್ಮದು. ಮೇರಾ ಭಾರತ್‌ ಮಹಾನ್‌ !

ಮಾರ್ಚ್‌ 1, 2001 ರ ವೇಳೆಗೆ ದೇಶದಲ್ಲಿದ್ದ ಒಟ್ಟು ಜನಸಂಖ್ಯೆ 1,027,015,247. ಇದರಲ್ಲಿ ಗಂಡಸರ ಸಂಖ್ಯೆ 531, 277,078 . ಮಹಿಳೆಯರ ಪಾಲು 495,738,169. ಈ ವಿಷಯವನ್ನು ಸೆನ್ಸಸ್‌ ಕಮೀಷನರ್‌ ಜೆ.ಕೆ. ಬಂಥಿಯಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

2001 ಸಾಲಿನ ಜನಗಣತಿ ಹೊರಗೆಡವಿರುವ ಅಂಶಗಳಲ್ಲಿ ಸಮಾಧಾನಕರವಾದುದೆಂದರೆ - ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಲಿಂಗ ಅನುಪಾತದ ಅಂತರ ಹಾಗೂ ಸಾಕ್ಷರತೆಯ ಪ್ರಮಾಣದಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ.

ಉತ್ತರ ಪ್ರದೇಶದ ನಿರಾಯಾಸ ಮುನ್ನಡೆ : ಯಥಾಪ್ರಕಾರ, ಅಧಿಕ ಜನಸಂಖ್ಯೆಯ ಅಗ್ರೇಸರ ರಾಜ್ಯವಾಗಿ ಉತ್ತರ ಪ್ರದೇಶ (ಶೇ. 16.17) ಮುಂದುವರಿದಿದೆ. ಎರಡು ಹಾಗೂ ಮೂರನೇ ಸ್ಥಾನಗಳು ಕ್ರಮವಾಗಿ ಮಹಾರಾಷ್ಟ್ರ (9.42) ಹಾಗೂ ಬಿಹಾರ್‌ (8.07)ಗೆ.

ಅತ್ಯಧಿಕ ಜನದಟ್ಟಣೆ ಹೊಂದಿರುವ ರಾಜ್ಯಗಳಲ್ಲಿ ಪ್ರತಿ ಚದರ ಕಿಮೀಗೆ 904 ಮಂದಿ ವಾಸಿಸುತ್ತಿರುವ ಪಶ್ಚಿಮ ಬಂಗಾಳ ಮುಂದಿದೆ. ನಂತರದ ಸ್ಥಾನ ಪ್ರತಿ ಚ.ಕಿಮೀಗೆ 880 ಮಂದಿ ವಾಸಿಸುತ್ತಿರುವ ಬಿಹಾರ್‌ಗೆ.

ಲೈಂಗಿಕ ಅನುಪಾತದ ಸಂಖ್ಯೆ 1991 ರ ಜನಗಣತಿ ಕಾಲಕ್ಕಿಂಥ ಸುಧಾರಿಸಿದೆ. 1991 ರಲ್ಲಿ ಸಾವಿರ ಪುರುಷರಿಗೆ ಪ್ರತಿಯಾಗಿ 927 ಮಹಿಳೆಯರಿದ್ದರೆ, ಈ ಸಲ ಆ ಸಂಖ್ಯೆ 933 ಕ್ಕೇರಿದೆ. 1991 ರಲ್ಲಿ ಶೇ. 52.21 ರಷ್ಟಿದ್ದ ಸಾಕ್ಷರತೆಯ ಪ್ರಮಾಣ, ಈ ಸಲ 65.38 ಕ್ಕೇರುವ ಮೂಲಕ ಶೇ. 13.17 ರ ಹೆಚ್ಚಳ ದಾಖಲಿಸಿದೆ. ಸಾಕ್ಷರತೆಯ ಸಂಖ್ಯೆ ಪುರುಷರಲ್ಲಿ 11.72 ರಷ್ಟಿದ್ದರೆ, ಮಹಿಳೆಯರಲ್ಲಿ 14.87 ರಷ್ಟಿದೆ. ಎಂದಿನಂತೆ ಸಾಕ್ಷರತೆಯಲ್ಲಿ ಮೊದಲ ಸ್ಥಾನ ಕೇರಳಕ್ಕೆ (ಶೇ. 90.92).

ಅಂದಹಾಗೆ, 2001 ರ ಜನಗಣತಿಯ ಅಂತಿಮ ಫಲಿತಾಂಶಗಳು ಇನ್ನೂ ಪೂರ್ಣವಾಗಿ ಪ್ರಕಟವಾಗಿಲ್ಲ . ದೇಶದ ಪ್ರಗತಿಯನ್ನು ನಿರ್ಣಯಿಸುವ ಈ ಫಲಿತಾಂಶಗಳು ಇನ್ನೂ 21 ತಿಂಗಳ ಕಾಲ ಹರಿದುಬರಲಿವೆ. ಯಾಕೆಂದರೆ, ಯಾವ್ಯಾವುದೋ ಮೂಲೆಗಳಲ್ಲಿರುವ (ರಸ್ತೆಗಳನ್ನು ಕಾಣದ) ಹಳ್ಳಿಗಳು ಕೂಡ ಜನಗಣತಿಯಲ್ಲಿ ಸೇರಬೇಕಿದೆ ಅಲ್ಲವಾ ?

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X