Get Updates
Get notified of breaking news, exclusive insights, and must-see stories!

ರೈತಮುಖಿ ಕೃಷ್ಣ, ಐಟಿ ಉದ್ಯಮಕ್ಕೆ ಅರ್ಥವಾಗದ ರಾಜಕೀಯ

*ಇಮ್ರಾನ್‌ ಖುರೇಷಿ

ಬೆಂಗಳೂರು : ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ತಮ್ಮ ಐಟಿ ಇಮೇಜಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆಯೆ ? ಹೌದೆನ್ನುತ್ತಿದೆ ಐಟಿ ಉದ್ಯಮ. ಕಂಪ್ಯೂಟರ್‌ ಸಾಫ್ಟ್‌ವೇರ್‌ ಮೇಲೆ ಪ್ರತಿಶತ 4ರಷ್ಟು ವಿಧಿಸಿರುವ ತೆರಿಗೆಯನ್ನು ಕೂಡ ಇಮೇಜಿನ ಬದಲಾವಣೆಯ ಹಿನ್ನೆಲೆಯಲ್ಲಿ ಅರ್ಥೈಸಲಾಗುತ್ತಿದೆ.

2001-02 ನೇ ಸಾಲಿನ ಆಯವ್ಯಯವನ್ನು ಗಮನಿಸಿದಾಗ, ಕೃಷ್ಣ ಗ್ರಾಮೀಣ ಪ್ರದೇಶಕ್ಕೆ ಒತ್ತುಕೊಟ್ಟಿರುವುದು ಸ್ಪಷ್ಟವಾಗುತ್ತದೆ. ಇದು, ಭಾರತದ ಸಿಲಿಕಾನ್‌ ವ್ಯಾಲಿ ಎನಿಸಿರುವ ಬೆಂಗಳೂರಿನ ಕಂಪ್ಯೂಟರ್‌ ಕಿಂಗ್‌ಗಳಿಗೆ ಶಾಕ್‌ ಕೊಟ್ಟಿದೆ. ಕೃಷ್ಣ ಹೀಗೇಕೆ ಮಾಡಿದರು ?ಅನ್ನುವ ತರ್ಕವೇ ಅರ್ಥವಾಗುತ್ತಿಲ್ಲ ಅನ್ನುತ್ತಾರೆ ಗುರ್ತಿಸಿಕೊಳ್ಳಲು ಬಯಸದ ಭಾರೀ ಐಟಿ ಕಂಪನಿಯಾಂದರ ಹಿರಿಯ ಅಧಿಕಾರಿ.

ಇದೆಲ್ಲಕ್ಕೂ ಕಾರಣ, ಸಾಫ್ಟ್‌ವೇರ್‌ ಪ್ರೋಂಗ್ರಾಂಗಳ ಮೇಲೆ ಸುಂಕ ವಿಧಿಸುವ ಕೃಷ್ಣ ನಡೆಯನ್ನು ಐಟಿ ಉದ್ಯಮ ನಿರೀಕ್ಷಿಸಿರಲಿಲ್ಲ . ಈ ಸುಂಕ ಸಾಫ್ಟ್‌ವೇರ್‌ ಉದ್ಯಮಕ್ಕೆ ಹೊರೆ ಅಲ್ಲವೆನ್ನುವುದು ನಿಜವಾದರೂ, ಅವುಗಳ ಪಾಲಿಗಿದು ಅನಿರೀಕ್ಷಿತ. ಕೃಷ್ಣ ಅವರ 70 ಪುಟಗಳ ಬಜೆಟ್ಟಿನ ಭಾಷಣವನ್ನು ಕೇಳಿದ ಉದ್ಯಮದವರಿಗೆ, ಶೇ. 4 ತೆರಿಗೆ ವಿಧಿಸುವುದು ಉಳಿದಂತೆ ಕೃಷ್ಣ ಐಟಿ ಬಗ್ಗೆ ಯಾವ ಮಾತನ್ನೂ ಆಡದಿರುವುದು ಕೂಡ ಸಂಕಟ ಹುಟ್ಟಿಸಿದೆ.

ಜಾಗತಿಕವಾಗಿ ಪರಿಣಾಮ ಬೀರೀತೆ ? - ಜಾಗತಿಕವಾಗಿ ಕರ್ನಾಟಕ ಗುರ್ತಿಸಿಕೊಂಡಿರುವುದೇ ಬೆಂಗಳೂರಿನ ಮೂಲಕ ಹಾಗೂ ಅಲ್ಲಿನ ಐಟಿ ಕಂಪನಿಗಳ ವಹಿವಾಟಿನ ಮೂಲಕ. ದೇಶದ ಮೂರನೇ ಒಂದು ಭಾಗದಷ್ಟು ಬೃಹತ್‌ ಐಟಿ ಉದ್ಯಮಗಳು, ರಫ್ತುದಾರರು ಬೆಂಗಳೂರಿನಲ್ಲಿಯೇ ಇದ್ದಾರೆ. ಇಂಥಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ನಿಗೂಢ ಮೌನ ಐಟಿ ವಲಯದಲ್ಲಿ ಆತಂಕ ಮೂಡಿಸಿರುವುದು ಸಹಜವೇ. ಸಮಾಧಾನಕರ ಸಂಗತಿಯೆಂದರೆ, ಸರ್ಕಾರ ವಿಧಿಸಿರುವ ಸುಂಕ ಐಟಿ ಉದ್ಯಮದ ರಫ್ತುಗಳಿಗೆ ಅನ್ವಯಿಸುವುದಿಲ್ಲ .

ಕೃಷ್ಣ ಐಟಿಗೆ ಇನ್ನಿಲ್ಲದ ಮಹತ್ವ ನೀಡುತ್ತ , ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷಿಸುತ್ತಿದ್ದಾರೆ ಅನ್ನುವ ವಿರೋಧಿಗಳ ಆಪಾದನೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುವುದು, ಐಟಿಯ ಬಗ್ಗೆ ಮೌನ ವಹಿಸುವುದು ಅಗತ್ಯವಾಯಿತು ಅನ್ನುತ್ತಾರೆ ಸಂಪುಟದ ಹಿರಿಯ ಸದಸ್ಯರು.

ರೈತಮುಖಿ ಕೃಷ್ಣ , ಐಟಿಯ ಮೇಲೆ ವ್ಯತಿರಿಕ್ತ ಪರಿಣಾಮ

ಸರ್ಕಾರ ರೈತರತ್ತ ಮುಖ ಮಾಡಿರುವುದು ಅರ್ಥವಾಗುತ್ತೆ . ಆದರೆ, ಸರ್ಕಾರ ವಿಧಿಸಿರುವ ಸುಂಕ ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದಾಗಿ ಹಲವಾರು ತೊಂದರೆಗಳನ್ನು ಉದ್ಯಮ ಎದುರಿಸಬೇಕಾಗುತ್ತದೆ ಎಂದು ಕ್ಷೇಮ ಟೆಕ್ನಾಲಜೀಸ್‌ನ ಸಿಇಓ ಅನಂತ ಕೊಪ್ಪಾರ್‌ ವಿಷಾದಿಸುತ್ತಾರೆ.

ತೆರಿಗೆ ಸಂಗ್ರಹ ವಿಧಾನದಲ್ಲೂ ಸಾಕಷ್ಟು ಸುಧಾರಣೆಯ ಅಗತ್ಯವಿದೆ. ತೆರಿಗೆ ಸುಧಾರಣೆಯನ್ನು ಕ್ರಮಬದ್ಧಗೊಳಿಸಬೇಕಾಗಿದೆ. 2002 ರೊಳಗೆ ವ್ಯಾಲ್ಯೂ ಆ್ಯಡೆಡ್‌ ಟ್ಯಾಕ್ಸ್‌ (ವಿಎಟಿ) ಜಾರಿಗೊಳಿಸುವ ಮುನ್ನ ಎಲ್ಲಾ ದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದೆ ಹೋದಲ್ಲಿ ತೆರಿಗೆ ಪದ್ಧತಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎನ್ನುವುದು ಐಎಸ್‌ಇಸಿಯ ನಿರ್ದೇಶಕ ಎಂ. ಗೋವಿಂದರಾವ್‌ ಅವರ ಖಚಿತ ನಿಲುವು.

ಲಿಕ್ಕರ್‌ ಆದಾಯ ಮೂರು ವರ್ಷಗಳಲ್ಲಿ 9 ಬಿಲಿಯನ್‌ ಹೆಚ್ಚಳ

ದಿನಸಿ ಅಂಗಡಿಗಳಿಗೆ ಬಿಯರ್‌ ತಂದ ಸರ್ಕಾರದ ಕ್ರಮವನ್ನು ಅಪ್ಪಟ ವಾಣಿಜ್ಯೋದ್ದೇಶದ ಕ್ರಮ ಎಂದು ವಿಶ್ಲೇಷಿಸಲಾಗುತ್ತಿದೆ. ಹಾರ್ಡ್‌ ಲಿಕ್ಕರ್‌ಗಳಿಗೆ ಮಾರಕವಾಗಿದೆ ಎಂದು ಬಣ್ಣಿಸಲಾಗಿರುವ ಈ ಕ್ರಮದಿಂದಾಗಿ, ನಂತರದ ದಿನಗಳಲ್ಲಿ ಬಿಯರಿನ ಮಾರಾಟ ಮತ್ತು ಬಳಕೆಯ ಮೇಲೆ ಪರಿಣಾಮ ಬೀರುವುದು ಖಂಡಿತ. ಮುಂದಿನ ಮೂರು ವರ್ಷಗಳಲ್ಲಿ ಪ್ರಸ್ತುತ ಇರುವ 15 ಬಿಲಿಯನ್‌ ರುಪಾಯಿ ಅಬಕಾರಿ ಆದಾಯ 24 ಬಿಲಿಯನ್‌ಗೆ ಏರುತ್ತದೆ ಎನ್ನುತ್ತಾರೆ ಹಿರಿಯ ಅಧಿಕಾರಿಯಾಬ್ಬರು. ಅಲ್ಲಿಗೆ ಜನಪರ ಹಾಗೂ ಬೊಕ್ಕಸ ಎರಡರತ್ತಲೂ, ಕೃಷ್ಣ ಏಕಕಾಲದಲ್ಲಿ ಕಣ್ಣಿಟ್ಟಿದ್ದಾರೆ ಎಂದಾಯಿತು.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+