ಸುರಿಯುತ್ತಿದೆ ಬಿಸಿಲು, ಬೀಳುತ್ತಿಲ್ಲ ಮಳೆ
ಬೆಂಗಳೂರು : ವಿಕ್ರಮ ನಾಮ ಸಂವತ್ಸರ ಕಳೆದು, ವಿಷು ನಾಮ ಸಂವತ್ಸರ ಬಂದಿದೆ. ಕಲಿಯುಗದ ಇನ್ನೂ ಒಂದು ವರ್ಷ ಉರುಳಿದೆ. ಅಂದರೆ, ಕೃತಯುಗಕ್ಕೆ ನಾವು ಮತ್ತೊಂದು ವರ್ಷ ಹತ್ತಿರವಾದೆವು ಎಂದೇ ಅರ್ಥ ತಾನೆ. ಹೊಸ ವರುಷದ ಹುರುಪಿನಲ್ಲಿ ಚಿಗುರಿದ ಮಾವಿನ ಮರದಲ್ಲಿ ಅಡಗಿ ಕೋಗಿಲೆಗಳು ಪಂಚಮಸ್ವರದಿ ಕೂಗುತ್ತಿವೆ.
ವಸಂತ ಸಂಭ್ರಮದೊಂದಿಗೆ ಆಗಮಿಸಿದ್ದಾನೆ. ಚೈತ್ರದ ಹಿಗ್ಗು ಎಲ್ಲೆಡೆ ಹಬ್ಬಿದೆ. ಎಲ್ಲರ ಮನೆಯ ಮುಂದೂ ತೋರಣವಾಗಿ ಮಾವಿನ ಚಿಗುರು ರಾರಾಜಿಸುತ್ತಿದೆ. ಚೈತ್ರ ಮಾಸದ ಮೊದಲ ದಿನವಾದ ಭಾನುವಾರ ಬಿಸಿಲು ಸುಡುತ್ತಿತ್ತು. ಸೂರ್ಯ ಶಾಖದಿಂದ ಕಾದ ಕಪ್ಪು ಬಣ್ಣದ ಟಾರು ರಸ್ತೆಯಿಂದ ಬೇಸಿಗೆಯ ಕಾವು ಮುಖಕ್ಕೇ ರಾಚುತ್ತಿತ್ತು.
ಸಾಮಾನ್ಯವಾಗಿ ಯುಗಾದಿಯ ದಿನ ಒಂದೆರಡು ಹನಿ ಮಳೆ ಬಿದ್ದೇ ಬೀಳುತ್ತದೆ ಎಂದು ಹಿರಿಯರು ಹೇಳುತ್ತಿದ್ದರಾದರೂ, ಬೆಂಗಳೂರಲ್ಲಿ ಮಳೆ ಆಗಲಿಲ್ಲ. ರಾಜ್ಯದ ಇತರೆ ಭಾಗದಲ್ಲೂ ಮಳೆ ಬಿದ್ದ ಬಗ್ಗೆ ವರದಿ ಬಂದಿಲ್ಲ. ಈ ಮಧ್ಯೆ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಉತ್ತರ ಒಳನಾಡಿನಲ್ಲಿ ಹಾಗೂ ಕರಾವಳಿಯಲ್ಲಿ ಗರಿಷ್ಠ ತಾಪಮಾನ ಸ್ವಲ್ಪ ಏರಿತ್ತು. ಎಲ್ಲೆಡೆ ಬಿಸಿಲೇ ಸುರಿಯುತ್ತಿದೆ.
ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯ ಮಟ್ಟದಲ್ಲಿತ್ತು. ದಕ್ಷಿಣ ಒಳನಾಡಿನ ಕೆಲವೆಡೆ ಕನಿಷ್ಠ ಉಷ್ಣಾಂಶ ಕಡಿಮೆ ಆಗಿತ್ತು. ರಾಜ್ಯದ ಅತಿ ಹೆಚ್ಚು ತಾಪಮಾನ ರಾಯಚೂರಿನಲ್ಲಿ 40.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕನಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್ ಬೆಳಗಾವಿಯಲ್ಲಿತ್ತು.
ಮುನ್ಸೂಚನೆಯ ರೀತ್ಯ ರಾಜ್ಯದಲ್ಲಿ ಒಣಹವೆ ಇರಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಭ್ರ ಆಕಾಶ ಇದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದಿದೆ ಹವಾಮಾನ ವೀಕ್ಷಣಾಲಯದ ವರದಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications