ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಮನೆಯಲ್ಲಿನ ಸಂಭ್ರಮವೂ ನಿಮ್ಮ ಮೂಡ್ ಸರಿ ಮಾಡುವುದಿಲ್ಲ ಎನಿಸುತ್ತದೆ. ಆದರೆ ಕಳೆದು ಹೋಗಿರುವ ನೆನಪುಗಳನ್ನು ಬೆದಕಿ ಬೆದಕಿ ಸುಸ್ತಾಗುತ್ತೀರಿ. ಮರೆಯುವುದಕ್ಕೆ ಮದ್ದು ನೀವೇ ಹುಡುಕಿಕೊಳ್ಳಬೇಕು.ವೃಷಭ : ಮನೆ ತುಂಬಾ ಕೆಲಸ ಕಾರ್ಯಗಳು, ಖರ್ಚುಗಳನ್ನಿಟ್ಟುಕೊಂಡು ನೀವು ರಿಲ್ಯಾಕ್ಸ್ ಮಾಡಬೇಕು ಎಂದುಕೊಂಡರೆ ಅದು ಹೇಗೆ ಸಾಧ್ಯ. ತುಸು ದಿನ ಕಾದರೆ ನಿಮ್ಮ ಸಂತೋಷದ ಸಮಯ ಬರಲಿದೆ.
ಮಿಥುನ : ಖಷಿ. ಸಂತೋಷಗಳನ್ನು ಯಾರೊಂದಿಗಾದರೂ ಆಪ್ತವಾಗಿ ಹಂಚಿಕೊಳ್ಳಬೇಕು ಎಂದುಕೊಂಡು ಸುಮ್ಮನಿರಬಾರದು. ಹೇಳಬೇಕಾದುದನ್ನೆಲ್ಲಾ ಹೇಳಿ ಬಿಡಿ.
ಕಟಕ : ನೀರಿಗಿಳಿದ ಮೇಲೆ ಚಳಿಯೇನು, ಮಳೆಯೇನು. ಮುಂದೆ ಸಾಗುವುದೊಂದೇ ದಾರಿ. ಹಾಕಿಕೊಂಡ ವ್ಯಾವಹಾರಿಕ ಪ್ಲಾನ್‌ಗಳಲ್ಲಿ ಅಂತಹ ಯಶಸ್ಸು ಕಾದಿಲ್ಲವಾದರೂ, ಸೋಲಿಲ್ಲ ಎಂಬುದೇ ಖುಷಿ.
ಸಿಂಹ : ಹೆಂಡತಿಯಿಂದ ಚೆನ್ನಾಗಿ ಬೈಯಿಸಿಕೊಳ್ಳುತ್ತೀರಿ ಎಂದೆನಿಸುತ್ತದೆ. ಆದರೆ ನಿಮ್ಮ ವರ್ತನೆ, ಅರ್ತಿ ಪ್ರೀತಿಗಳಿಂದ ಮನೆಯವರನ್ನು ಗೆಲ್ಲುತ್ತೀರಿ. ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ.
ಕನ್ಯಾ : ಆಟೋಟಗಳಲ್ಲಿ ಇಂದು ನಿಮ್ಮ ಸಾಧನೆಗೆ ತಕ್ಕ ಪ್ರತಿಫಲ ಬರಲಿದೆ. ಹಾಗಂತ ಏರಿದ ಏಣಿ ಒಗೆಯುವ ದುಸ್ಸಾಹಸ ಬೇಡ. ಸ್ನೇಹಿತರ ಸಲಹೆಗಳೂ ಅಮೂಲ್ಯ ಅಂತ ಮರೆಯಬಾರದು.
ತುಲಾ : ಇವತ್ತು ಮೃಷ್ಟಾನ್ನ ಭೋಜನ ಸವಿಯುವ ಯೋಗವಿದೆ. ತಟ್ಟೆಯಲ್ಲಿರುವ ಬಗೆ ಬಗೆಯ ತಿನಿಸುಗಳ ಲೆಕ್ಕಕ್ಕಿಂತ ಡೈನಿಂಗ್ ಟೇಬಲ್ ಸುತ್ತ ಕುಳಿತವರ ಆತ್ಮೀಯತೆ ನಿಮ್ಮ ಬೆರಗಾಗಿಸುತ್ತದೆ.
ವೃಶ್ಚಿಕ : ನೀವೊಬ್ಬರೇ ಆರಾಮವಾಗಿದ್ದರೆ ಸಾಕು ಎಂಬ ಧೋರಣೆ ಬೇಡ. ಇವತ್ತು ಧನ ಹಾನಿ ಕಾದಿದೆ ಆದ್ದರಿಂದ ಜಾಗ್ರತೆ ಇರಿ. ಸಹೋದರರನ್ನು ತಪ್ಪು ಹಾದಿಗೆಳೆಯುವ ಸಲಹೆ ನೀಡಿದರೆ ನಂತರ ಹುಶಾರಾಗಿರಬೇಕಾಗುತ್ತದೆ.
ಧನಸ್ಸು : ಕೋರ್ಟ್, ಕಟಕಟೆಯ ಉಸಾಬರಿಯಿಂದ ಆಚೆಗೆ ಬನ್ನಿ. ಆಸ್ತಿ ಪಾಸ್ತಿ ವಿವಾದಗಳನ್ನು ಸದ್ಯಕ್ಕೆ ಗಂಟು ಕಟ್ಟಿ ಅಟ್ಟದಲ್ಲಿಡಿ.
ಮಕರ : ಜಡತ್ವ ಎಂಬುದು ಬದುಕಿನ ವೈರಿ. ಅದನ್ನು ದೂರವಿಟ್ಟರೆ ನಿಮ್ಮನ್ನಗಲಿದ ಆರೋಗ್ಯವೂ ಮರಳಿ ಬರಬಹುದು. ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗವುಂಟು.
ಕುಂಭ : ನಿಮ್ಮ ಸಾಧನೆ ಹಿರಿಯರಿಂದ ಗುರುತಿಸಲ್ಪಟ್ಟಿಲ್ಲ ಎಂದು ಕೊರಗುತ್ತಾ ಕುಳಿತುಕೊಳ್ಳಬಾರದು. ಪ್ರೋತ್ಸಾಹ ಬೇಕಿನಿಸುವುದು ಸಹಜ. ಆದರೂ ನಿಮ್ಮ ಕೆಲಸ ನೀವು ಮಾಡುತ್ತಾ ಹೋಗಿ.
ಮೀನ : ಏನಾದರೂ ಅವಾಂತರ ಮಾಡುವ ಮೂಲಕ ಹೆಸರು ಗಿಟ್ಟಿಸಿಕೊಳ್ಳಬೇಕೆಂದು ಪ್ಲಾನ್ ಹಾಕಿದ್ದರೆ ಅದನ್ನು ಬಿಟ್ಟು ಬಿಡಿ. ನಿಮಗೇ ಹಿತವಾಗುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications