ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಓದೋ ವಯಸ್ಸಿನ ಮಕ್ಕಳ ಕೈಲಿಹೊಟೇಲ್‌ ಚಾಕರಿ ಮಾಡಿಸೋದಿಲ್ಲ’

By Staff
|
Google Oneindia Kannada News

ಮೈಸೂರು : ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಿರಲು ಮೈಸೂರು ಹೊಟೇಲ್‌ ಮಾಲಿಕರ ಸಂಘ ನಿರ್ಧರಿಸಿದೆ.

ಶನಿವಾರ ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಪ್ರತಿಜ್ಞೆ ಕೈಗೊಂಡ ಹೊಟೇಲ್‌ ಮಾಲಿಕರು, ಸಂಘದ ಯಾವುದೇ ಸದಸ್ಯ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲು ನಿರ್ಧರಿಸಿದ್ದಾರೆ. ಹೊಟೇಲ್‌ ಮಾಲಿಕರ ಸಂಘದ ನಿರ್ಧಾರವನ್ನು ಉಲ್ಲಂಗಿಸುವ ಯಾವುದೇ ಸದಸ್ಯನಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಅಲ್ಲದೆ, ಆ ಹೊಟೇಲನ್ನು ಮುಚ್ಚಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸುಧಾಕರ್‌ ಶೆಟ್ಟಿ ಹೇಳಿದ್ದಾರೆ.

ಹೊಟೇಲ್‌ ಮಾಲಿಕರ ಸಂಘದ ಸದಸ್ಯರೆಲ್ಲರೂ ಮೈಸೂರು ರಾಮಕೃಷ್ಣ ಮಠದ ಯೋಗವಿದಾನಂದ ಸ್ವಾಮೀಜಿಗಳ ಮುಂದೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳದಿರುವ ಪ್ರತಿಜ್ಞೆ ಸ್ವೀಕರಿಸಿದರು. ಮೈಸೂರು ಹೊಟೇಲ್‌ ಮಾಲಿಕರ ಸಂಘದ ಈ ನಿರ್ಧಾರ ಇತರ ಹೊಟೇಲ್‌ ಮಾಲಿಕರಿಗೂ ಆದರ್ಶವಾಗಲಿ ಎಂದು ಸ್ವಾಮೀಜಿಗಳು ಈ ಸಂದರ್ಭದಲ್ಲಿ ಹಾರೈಸಿದರು.

(ಮೈಸೂರು ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X