ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೇ ಡೈರಿಯ ಕೊನೆಯ ಪುಟ ...

By Staff
|
Google Oneindia Kannada News

ನಾಳಿನ ಸೂರ್ಯೋದಯ ಎಂದಿನ ಹಾಗೇ ಮಾಮೂಲಿಯಲ್ಲ. ಅದೇ ಪೂರ್ವ ದಿಕ್ಕಿನಲ್ಲಿ ಕೆಂಪನೆ ಬೆಳಗುವ ಸೂರ್ಯ ‘ಹೊಸ’ ಬೆಳಕ ಎರಚಲಿದ್ದಾನೆ. ಅನಂತ ಕಾಲದಲ್ಲಿ ಗುಬ್ಬಚ್ಚಿ ಹೆಜ್ಜೆಯಿಡುವ ನಾವು ನಾಳೆ ಹೊಸ ವರ್ಷವನ್ನು ಮನೆ- ಮನ ತುಂಬಿಸಿಕೊಳ್ಳಲಿದ್ದೇವೆ.

ಒಂದು ಹಳೇ ಡೈರಿಯ ಕೊನೆಯ ಪುಟ ತಿರುವಿ ಹಾಕಿ, ಹೊಸದರ ಮೇಲೆ ಓಂ ನಮಃ ಬರೆದು, ಉದ್ರಿ ಅಂಗಡಿಯ ಲೆಕ್ಕ ಚುಕ್ತಗೊಳಿಸಿ, ವಿಕ್ರಮ ವರ್ಷವನ್ನು ಕಾಲದ ಅನಂತಕ್ಕೆ ದೂಡಿದ್ದೇವೆ. ಹೊಸ ವೇಷ ತೊಟ್ಟು ಬಂದ ಕಾಲನಿಗೆ ವೃಷನೆಂಬ ಹೆಸರಿಟ್ಟು ಬರಮಾಡಿಕೊಳ್ಳುತ್ತಿದ್ದೇವೆ. ಹೌದು. ಸಿಹಿಯುಂಡು , ಹೊಸದುಟ್ಟು ಸಂಭ್ರಮಿಸುವ ಯುಗಾದಿ ಪುನಃ ಬಂದಿದೆ.

ಶನಿವಾರ ಈವ್‌ ಆಫ್‌ ಯುಗಾದಿ ಅಲ್ವೇ ? ಇನ್ನೂ ಎಷ್ಟೆಲ್ಲಾ ಕೆಲಸ ಬಾಕಿ ಉಳಿದುಕೊಂಡಿದೆ ಅಂತ ದಡಬಡಾಯಿಸಿಕೊಂಡು ಯುಗಾದಿಗೆ ರೆಡಿಯಾಗುತ್ತಿರುವ ಬೆಂಗಳೂರು ವ್ಯಸ್ತವಾಗಿದೆ. ಹವೆಯೇನೂ ವಿಶೇಷ ಸುದ್ದಿ ತಂದಿಲ್ಲ. ತುಂತುರು ಮಳೆಯ ನಿರೀಕ್ಷೆ ಕೆಲವೆಡೆ ಇದ್ದರೂ ನಿಮ್ಮ ಪಿಕ್‌ನಿಕ್‌ಗಳಿಗೆ, ಇಸ್ಪೀಟ್‌ ಆಟಗಳಿಗೆ ತೊಂದರೆ ಮಾಡಲ್ಲವಂತೆ. ರಾತ್ರಿ ಮಾತ್ರ ಬೆಂಗಳೂರ ಬಾನಿಗೆ ಮೋಡದ ಮುಸುಕು. ಚುಕ್ಕಿ ಗಣಿಸಲಾಗದು.

ಎನಿ ವೇ , ವೃಷ ನಾಮ ಸಂವತ್ಸರದ ನಿಮ್ಮ ಡೈರಿ ತುಂಬಾ ಶುಭ ಸುದ್ದಿಗಳಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X