Get Updates
Get notified of breaking news, exclusive insights, and must-see stories!

ದಂಡುಪಾಳ್ಯ ಗ್ಯಾಂಗ್‌ನ ಶೀಘ್ರ ವಿಚಾರಣೆಗೆ ವಿಶೇಷ ನ್ಯಾಯಾಲಯ?

ಬೆಂಗಳೂರು : ಕೊಲೆ, ರೇಪ್‌ ದರೋಡೆಗಳಂತಹ ಸುಮಾರು ನೂರಕ್ಕೂ ಹೆಚ್ಚು ಕೃತ್ಯ ಎಸಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ದಂಡುಪಾಳ್ಯ ಗ್ಯಾಂಗಿನ ವಿಚಾರಣೆಗಾಗಿ ರಾಜ್ಯ ಸರಕಾರ ವಿಶೇಷ ನ್ಯಾಯಾಲಯವೊಂದನ್ನು ರಚಿಸುವಂತೆ ಹೈಕೋರ್ಟ್‌ಗೆ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ವಿಧಾನ ಸಭೆಯಲ್ಲಿ ಶುಕ್ರವಾರ ಹೇಳಿದ್ದಾರೆ.

ಇದರ ಜೊತೆಗೆ ಚರ್ಚ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ ವಿಶೇಷ ನ್ಯಾಯಾಲಯ ರಚಿಸುವಂತೆ ಹೈಕೋರ್ಟಿಗೆ ಮನವಿ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ದಂಡುಪಾಳ್ಯ ಕೃಷ್ಣ ಗ್ಯಾಂಗಿನ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇನ್ನೂ ಮೂವರ ಬಂಧನಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ.

ನಗರದಲ್ಲಿ ಕಳ್ಳತನ ದರೋಡೆಗೆ ಅನುಕೂಲವಾಗುವಂತೆ ವೃದ್ಧರನ್ನು ಕೊಲ್ಲುವ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ದುಷ್ಕೃತ್ಯಗಳಲ್ಲಿ ತೊಡಗಿದ್ದ ದಂಡುಪಾಳ್ಯ ಗ್ಯಾಂಗ್‌ನ ವಿಚಾರಣೆ ಆದಷ್ಟು ಬೇಗ ಆಗಬೇಕು ಮತ್ತು ಅದಕ್ಕಾಗಿ ಪ್ರತ್ಯೇಕ ನ್ಯಾಯಾಲಯವನ್ನು ರಚಿಸಬೇಕು ಎಂದು ವಿಧಾನ ಸಭೆಯಲ್ಲಿ ಸಂಯುಕ್ತ ಜನತಾ ದಳದ ಪಿ.ಜಿ. ಆರ್‌. ಸಿಂಧ್ಯ ಅವರು ಮುಖ್ಯಮಂತ್ರಿಗಳನ್ನು ಕೇಳಿಕೊಂಡಾಗ ಈ ವಿಷಯವನ್ನು ಕೃಷ್ಣ ಸಭೆಯಲ್ಲಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+