ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ವಿದ್ಯಾರ್ಥಿಗಳಿಗೆ ಯಶಸ್ಸು ಕಾದಿದೆ. ಹಲವು ದಿನಗಳಿಂದ ಪಟ್ಟ ಶ್ರಮಕ್ಕೆ ಸೂಕ್ತ ಫಲ ಕೈಸೇರಲಿದೆ. ಮತ್ತೆ ಸದ್ಯದಲ್ಲಿಯೇ ಮನೋರಂಜನೆಯ ಅವಕಾಶ ನಿಮ್ಮ ಮನೆಯ ಕದ ತಟ್ಟಬಹುದು.ವೃಷಭ : ಅರೀಕ್ಷಿತವಾಗಿ ಎದುರಾಗುವ ಪ್ರಯಾಣದಿಂದ ವಿಪರೀತ ದುಡ್ಡು ಖರ್ಚಾಗಬಹುದು. ಸುಧಾರಿಸುತ್ತಿರುವ ಆರೋಗ್ಯದ ಬಗ್ಗೆ ಇನ್ನು ಹೆಚ್ಚಿನ ಚಿಂತನೆ ಬೇಡ.
ಮಿಥುನ : ಪ್ರಯಾಣದ ಸ್ಕೆಚ್ ಎಳೆದೂ ಎಳೆದೂ ಸುಸ್ತಾಗುವ ಮುಂಚೆ ಇತರ ಕೆಲಸಗಳತ್ತ ಗಮನ ಕೊಡುವುದು ಸೂಕ್ತ. ಕ್ಷಣಕ್ಕೊಮ್ಮೆ ಬೇಸರ ತಂದುಕೊಳ್ಳುವುದರಿಂದ ದೂರ ಬಂದಿದ್ದೀರಿ.
ಕಟಕ : ನಿಮ್ಮ ಚಂಚಲತೆಯಿಂದ ಉತ್ತಮ ಅವಕಾಶ ಕೈ ತಪ್ಪಿ ಹೋಗಬಹುದು. ಆದರೂ ಲಕ್ಷ್ಮೀ ಆರಾಧನೆಯಿಂದ ನಿಮ್ಮ ಕಿಸೆ ತೂತಾಗಲಿಕ್ಕಿಲ್ಲ. ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗಬೇಕಲ್ಲವೇ?
ಸಿಂಹ : ಸದ್ಯಕ್ಕೆ ನಿಮ್ಮ ಕೈ ಸೇರಲಿರುವ ಧನಲಾಭದಿಂದ ಅಂತಹ ಮಹತ್ಕಾರ್ಯ ಏನೂ ಆಗುವುದಿಲ್ಲ . ಆದರೆ ಮನೆಯಲ್ಲಿನ ನೆಮ್ಮದಿ ಅಂತೂ ನಿಮ್ಮನ್ನು ಉಲ್ಲಸಿತರನ್ನಾಗಿಸುತ್ತದೆ.
ಕನ್ಯಾ : ಆರ್ಥಿಕ ಸಮಸ್ಯೆ ಇದ್ದರೂ ವ್ಯವಹಾರ ಕ್ಷೇತ್ರದಲ್ಲಿ ಸುಲಲಿತವಾಗಿ ಕೆಲಸ ಕಾರ್ಯಗಳು ನಡೆಯುತ್ತವೆ. ಗಂಡು ಮಕ್ಕಳು ತರುವ ವಿಜಯ ವಾರ್ತೆ ನಿಮ್ಮ ಬೇಸರವನ್ನು ದೂರವಾಗಿಸುತ್ತದೆ.
ತುಲಾ : ನೀವು ನೇವಿಯಲ್ಲಿದ್ದೀರಾ ? ಸದ್ಯಕ್ಕೇ ಶುಭ ವಾರ್ತೆ ನಿಮ್ಮ ತಲುಪುತ್ತದೆ. ಮನೆ ಮಂದಿಯಾಂದಿಗೆ ಕಾಲ ಕಳೆಯುವ ಸಂಭ್ರಮ ನಿಮ್ಮದಾಗಲಿದೆ.
ವೃಶ್ಚಿಕ : ಊರಿಗೆ ಹೊರಟಿದ್ದೀರಾ. ಮತ್ತೆ ಮನೆಯವರೊಂದಿಗೆ ಮಾತು ಕತೆಗಳು, ನಿರ್ಧಾರಗಳಿಗಾಗಿ ಗೊಂದಲ...ಎಲ್ಲ ನಿಮಗೆ ಮಾಮೂಲಿ ಅಲ್ವೇ ?
ಧನಸ್ಸು : ತನ್ನಂತೆಯೇ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಅಂತ ಕೇಳಿಲ್ಲವೇ ? ಸ್ನೇಹಿತರೊಂದಿಗೆ ಸರಸವಾಡುವುದು ನಿಮಗೆ ಕಿರಿಕಿರಿ ಅನಿಸಬಾರದು.
ಮಕರ : ವ್ಯವಹಾರದಲ್ಲಿ ಕಾರ್ಯ ಸಿದ್ಧಿ ಆದರೂ ನಿಮ್ಮ ಲೆಕ್ಕಾಚಾರಗಳು ಸರಿಹೊಂದುತ್ತಿಲ್ಲ ಅಂತ ಗೊಣಗಾಡುತ್ತೀರಿ. ನೀವು ಮಾಡಬೇಕಾದ ಹಲವು ಕೆಲಸಗಳು ಬಾಕಿ ಇದೆ.
ಕುಂಭ : ಬಂಧುಗಳು ಸಾಕಷ್ಟು ನಿಮ್ಮ ಕಾಳಜಿ ವಹಿಸಿಕೊಳ್ಳುತ್ತಾರೆ. ಆದರೆ ಆ ನೆಪದಲ್ಲಿ ಮೋಸ ಹೋಗಬೇಡಿ. ಮನೆಯಲ್ಲಿ ಮಂಗಳ ಕಾರ್ಯ ಇರುವುದರಿಂದ ಪುರುಸೊತ್ತು ಎಂಬುಂದು ಇರುವುದಿಲ್ಲ.
ಮೀನ : ಪುಣ್ಯ ಕ್ಷೇತ್ರ ದರ್ಶನ ಭಾಗ್ಯ ಇರುವುದರಿಂದ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಿ. ನಿಮ್ಮದಲ್ಲದ ಕ್ಷೇತ್ರದಲ್ಲಿ ಸಹಜವಾಗಿರಲು ಯತ್ನಿಸಿದರೆ ಶುಭವಾಗುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications