Get Updates
Get notified of breaking news, exclusive insights, and must-see stories!

ಜೇಬಿನಲ್ಲಿ ಗುಂಡು ತುಂಬಿದ ಪಿಸ್ತೂಲು, ಜೀವಭಯದಲ್ಲಿ ಸಿ.ದಿನಕರ್‌

Former DGP Dinakarಬೆಂಗಳೂರು : ತಮಗೆ ಜೀವ ಬೆದರಿಕೆಯ ಕರೆಗಳು ಬರುತ್ತಿವೆ - ಪೊಲೀಸ್‌ ಮಹಾ ನಿರ್ದೇಶಕ ಹುದ್ದೆಯಿಂದ ನಿವೃತ್ತಿ ಹೊಂದಿ ವಕೀಲರಾಗಿ ರೂಪಾಂತರ ಹೊಂದಿರುವ ಸಿ. ದಿನಕರ್‌ ತಣ್ಣನೆಯ ದನಿಯಲ್ಲಿ ಹೇಳುತ್ತಾರೆ. ಅಂದಹಾಗೆ, ಈ ಬೆದರಿಕೆಯ ಕರೆಗಳು ಬರಲು ಶುರುವಾದದ್ದು ರಾಜ್‌ಕುಮಾರ್‌ ಕಿಡ್ನಾಪ್‌ ಸಮಯದಲ್ಲಿ . ರಾಜ್‌ ಮನೆಗೆ ಮರಳಿದರೂ ಬೆದರಿಕೆಯ ಕರೆಗಳು ಮಾತ್ರ ನಿಂತಿಲ್ಲ , ಈಗಲೂ ಬರುತ್ತಿವೆ ಎಂದು ದಿನಕರ್‌ ಹೇಳಿದ್ದಾರೆ.

ರಾಜ್‌ ಅಪಹರಣದ ಸಂದರ್ಭದಲ್ಲಿ ಕರ್ನಾಟಕದಲ್ಲಿದ್ದ ಇಡೀ ತಮಿಳು ಸಮೂಹವೇ ನನ್ನ ಮೇಲೆ ಅಸಹನೆಗೊಂಡಿತ್ತು. ಅವರೆಲ್ಲರಿಗೂ ನಾನು ತಮಿಳರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂಬ ಭಾವನೆ ಇತ್ತು ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದಿನಕರ್‌ ಹೇಳಿದ್ದಾರೆ.

ಜೀವಭಯದಿಂದಾಗಿ ಯಾವಾಗಲೂ ಒಬ್ಬ ಅಂಗರಕ್ಷಕ ತನ್ನ ಬಳಿ ಇರುತ್ತಾನೆ. ಅಲ್ಲದೆ, ತುಂಬಿದ ರಿವಾಲ್ವರ್‌ ಕೂಡ ಸದಾ ಜೊತೆಗೇ ಇರುತ್ತದೆ ಎಂದಿದ್ದಾರೆ ದಿನಕರ್‌. ಅವರು ತಮಗೆ ಬೆದರಿಕೆ ಒಡ್ಡುತ್ತಿರುವ ಯಾವುದೇ ವ್ಯಕ್ತಿಗಳನ್ನಾಗಲೀ, ಸಂಸ್ಥೆಗಳನ್ನಾಗಲೀ ಹೆಸರಿಸಿಲ್ಲ .

ದಿನಕರ್‌ ಬರೆಯುತ್ತಿದ್ದಾರೆ ರಾಜ್‌ ಅಪಹರಣ ಪ್ರಕರಣದ ಪುಸ್ತಕ

ಈ ಸುದ್ದಿ ಹಲವರನ್ನು ಕಂಗೆಡಿಸಿರಲು ಸಾಕು. ಈಗ ಸರಕಾರದ ಸೇವೆಯಿಂದ ನಿವೃತ್ತನಾಗಿರುವುದರಿಂದ ಸತ್ಯವನ್ನು ಹೊರಗೆಡವಲು ಮುಕ್ತ ಅವಕಾಶ ಇದೆ. ಆದ್ದರಿಂದ ರಾಜ್‌ ಅಪಹರಣ ಮತ್ತು ಬಿಡುಗಡೆಯ ಒಳ ಹೊರಗುಗಳನ್ನು ವಿವರಿಸಿ ಪುಸ್ತಕವೊಂದನ್ನು ಬರೆಯಲು ನಿರ್ಧರಿಸಿರುವುದಾಗಿ ದಿನಕರ್‌ ತಿಳಿಸಿದ್ದಾರೆ.

ಈಗಾಗಲೇ ಪುಸ್ತಕ ಬರೆಯುವ ಕೆಲಸ ಆರಂಭಿಸಿದ್ದೇನೆ. ಇನ್ನೊಂದೆರಡು ತಿಂಗಳಿನಲ್ಲಿ ಈ ಕೆಲಸ ಪೂರ್ಣವಾಗುತ್ತದೆ ಎನ್ನುವ ದಿನಕರ್‌ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ತನ್ನ ನಿವೃತ್ತಿ ಅವಧಿಯನ್ನು ವಿಸ್ತರಿಸುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದ ದಿನಕರ್‌ಗೆ ಸರಕಾರದಿಂದ ಗುಣಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಕೊನೇ ಪಕ್ಷ ಬೀಳ್ಕೊಡುಗೆಯ ಸಂದರ್ಭದಲ್ಲಿ ಸಜ್ಜನನೆಂದು ಕರೆಸಿಕೊಳ್ಳುವ ಮುಖ್ಯಮಂತ್ರಿ ಕೃಷ್ಣ ರಿಂದ ಒಂದು ಮೆಚ್ಚುಗೆಯ ಮಾತು ಕೂಡ ಬರಲಿಲ್ಲ. ಅದಕ್ಕಾಗಿಯೇ ನಿವೃತ್ತಿಯ ನಂತರ ಮುಖ್ಯ ಮಂತ್ರಿಗಳನ್ನಾಗಲೀ, ಗೃಹ ಸಚಿವರನ್ನಾಗಲೀ ಭೇಟಿಯಾಗಲು ತಾವು ಹೋಗಲಿಲ್ಲ ಎಂದು ದಿನಕರ್‌ ವಿಷಾದಿಸಿದ್ದಾರೆ. ಅಲ್ಲಿಗೆ ರಾಜ್‌ ಬಿಡುಗಡೆಯ ನಿಟ್ಟಿನಲ್ಲಿ ಸರ್ಕಾರ ಯಾವ ಪಾತ್ರ ವಹಿಸಿತು ಅನ್ನುವ ತೆರೆಯನ್ನು ಕೂಡ ದಿನಕರ್‌ ಸರಿಸುವ ಸಾಧ್ಯತೆ ಇದೆಯೆಂದಾಯಿತು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+