Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ವೃತ್ತಿಯಲ್ಲಿ ಯಶಸ್ಸು . ಆದರೆ ಸೃಜನಶೀಲ ಕೆಲಸಗಳಲ್ಲಿ ಹೆಜ್ಜೆ ಹೆಜ್ಜೆಗೂ ತೊಡರು. ಇಂಥಾ ಸಂದರ್ಭದಲ್ಲಿ ಕಚ್ಚಾ ವಸ್ತುಗಳ ಸಿದ್ಧತೆಯಲ್ಲಿ ತೊಡಗುವುದು ಜಾಣತನ.

ವೃಷಭ : ಹೇಗೆ ನಡೆದರೂ ಯಶಸ್ಸು ಸಿಗುತ್ತದೆ ಎನ್ನುವ ಭ್ರಮೆ ಬೇಡ. ಯಾಕೆಂದರೆ ನಿಮ್ಮಿಂದ ಬೇರೆಯವರಿಗೆ ನೋವಾಗಿದೆ ಎಂದು ತಿಳಿದ ತಕ್ಷಣ ನೀವೂ ಬೇಜಾರು ಮಾಡಿಕೊಳ್ಳುತ್ತೀರಲ್ಲ.

ಮಿಥುನ : ವಿದ್ಯಾತುರಾಣಂ ನ ಸುಖ ನ ನಿದ್ರಃ ಅನ್ನುವ ಮಾತು ನೆನಪಿನಲ್ಲಿರಲಿ. ನೆಮ್ಮದಿಯ ದಿನಗಳು ಹೊಸಿತಿಲಲ್ಲೇ ಇವೆ. ಆವರೆಗೆ ಗಾಣ ಎಳೆಯಲು ಬೇಸರ ಪಟ್ಟರೆ ಹೇಗೆ.

ಕಟಕ : ಹೊಸ ವಾತಾವರಣ ನೋಡಿ ಸ್ವಲ್ಪ ಮುಜುಗರ ಪಟ್ಟುಕೊಂಡರೂ ನಿಧಾನಕ್ಕೆ ಎಲ್ಲವೂ ಸರಿ ಹೋಗುತ್ತದೆ. ಹೊಸ ಸ್ನೇಹಿತರನ್ನು ಸಂಪಾದಿಸುವಾಗ ಜಾಗರೂಕರಾಗಿರಿ.

ಸಿಂಹ : ಅಪ್ಪ ಅಮ್ಮ ಸ್ವಲ್ಪ ಗೊಣಗಿಕೊಳ್ಳಬಹುದು. ಅದು ನಿಮ್ಮ ಏಳಿಗೆಗೆ. ಕಂಕಣ ಬಲ ಇದೆ ಆದ್ದರಿಂದ ಅವರ ಗೊಣಗುವಿಕೆ ನಿಮಗೆ ಅಂತಹ ನಷ್ಟವನ್ನೇನೂ ತಾರದು.

ಕನ್ಯಾ : ಮನೆಯಲ್ಲಿ ಖರ್ಚು ಹೆಚ್ಚಾಗಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಮಕ್ಕಳಿಂದ ಸಂತಸ ಸುದ್ದಿ ಬಂದಾಗ ಎಲ್ಲ ನೋವುಗಳು ಮಾಯವಾಗುತ್ತವೆ ಬಿಡಿ.

ತುಲಾ : ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದು ಒಳ್ಳೆಯದಲ್ಲ . ಹೊಸ ಅವಕಾಶಗಳೇನೊ ಸಾಕಷ್ಟಿವೆ. ಆ ನಿರೀಕ್ಷೆಗಳನ್ನು ನೀವು ತುಂಬ ಬಲ್ಲಿರಾ ಅನ್ನುವ ಆತ್ಮ ಪರೀಕ್ಷಣೆ ಒಳ್ಳೆಯದು.

ವೃಶ್ಚಿಕ : ಬಿಡುವಿಲ್ಲದ ಕೆಲಸದಿಂದ ರೋಸಿ ಹೋಗಿದ್ದರೂ, ಇನ್ನೊಂದು ಮಗ್ಗುಲಲ್ಲಿ ಆಗುತ್ತಿರುವ ಬೆಳವಣಿಗೆ ನಿಮ್ಮ ಮನಸ್ಸಿಗೆ ನೆಮ್ಮದಿ ತರಬಹುದು. ನೆರೆಹೊರೆಯವರು ಆಪದ್ಬಾಂಧವರಾದ್ದರಿಂದ ಹೆಚ್ಚು ಜಗಳಾಡಬಾರದು.

ಧನಸ್ಸು : ಲೆಕ್ಕಾಚಾರ ಮುಗಿಸಿ ಪ್ರಯಾಣಕ್ಕೆ ಸಿದ್ಧರಾಗಿ. ನಿಮ್ಮ ಬಾಡಿದ ಮುಖವನ್ನು ಮನೆಯವರು ಎದುರು ನೋಡುತ್ತಿದ್ದಾರೆ. ಆಪ್ತರೊಂದಿಗಿನ ಮುನಿಸು ಮುಗಿಸಿಬಿಡಿ.

ಮಕರ : ಕಡಿಮೆ ಮಾತು ಹೆಚ್ಚು ಕೆಲಸ ಅನ್ನು ವ ಧೋರಣೆಯಿಂದ ನಿಮ್ಮ ಅಭಿವೃದ್ಧಿಯಾಗುತ್ತದೆ. ಬಡ್ತಿಯ ನಿರೀಕ್ಷೆಯಲ್ಲಿದ್ದೀರಿ. ಕುಲದೇವರ ಆರಾಧನೆ ಶ್ರೇಯಸ್ಸು ತರಲಿದೆ.

ಕುಂಭ : ಧನಲಾಭವಿದೆ ಎಂದರೆ ಸರಿ ಹೋಗುವುದಿಲ್ಲ. ಹಿಂದೆ ಮಾಡಿದ ಜಾಣ ಕೆಲಸದಿಂದ ಈಗ ಲಾಭ ಬರಲಿದೆ. ಷೇರು, ಬ್ಯಾಂಕ್‌ ಅಂತ ಅಲೆದಾಟ ತಪ್ಪಿದ್ದಲ್ಲ.

ಮೀನ : ಪ್ರಪಂಚ ಹಾಗೆಲ್ಲಾ ಮುಳುಗಿ ಹೋಗುವುದಿಲ್ಲ ಎಂಬ ವಿಷಯವನ್ನು ನಿಮಗೆ ಮನದಟ್ಟು ಮಾಡಿಸುವುದು ತುಂಬಾ ಕಷ್ಟ. ಏನಿದ್ದರೂ ಲಾಸ್‌ ನಿಮಗೇ ಆದ್ದರಿಂದ ಎಚ್ಚರವಾಗಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+