Get Updates
Get notified of breaking news, exclusive insights, and must-see stories!

ಸರಣಿ ಗೆಲುವಿಗೆ 155 ರನ್‌ ಗುರಿ, ಹರ್ಭಜನ್‌ಗೆ 8 ವಿಕೆಟ್‌

ಚೆನ್ನೈ : ಸರಣಿಯನ್ನು ಕೈಗೆಟುಕಿಸಿಕೊಳ್ಳಲು ಭಾರತಕ್ಕಿನ್ನು ಮೂರೇ ಗೇಣು. ಅಶ್ವಮೇಧದ ವಿಜಯೋತ್ಸಾಹದಲ್ಲಿ ಭಾರತಕ್ಕೆ ಬಂದು ಕಂಗಾಲಾಗಿರುವ ಕಾಂಗರೂ ಪಡೆ ಒಡ್ಡಿರುವ 155 ರನ್ನುಗಳ ಗುರಿ ಮುಟ್ಟಿದಲ್ಲಿ ಅದು ಭಾರತ ಕ್ರಿಕೆಟಿನ ಪಾಲಿಗೆ ನವೋದಯವಾಗುವಲ್ಲಿ ಸಂಶಯವೇ ಇಲ್ಲ . ಸೋಲುಗಳ ಸುಳಿಯಲ್ಲಿ ಸಿಲುಕಿ ಜರ್ಜರಿತಗೊಂಡಿದ್ದ ಭಾರತಕ್ಕೆ ವಿಶ್ವ ಚಾಂಪಿಯನ್ನರ ವಿರುದ್ಧ ಗಳಿಸುವ ಈ ಸರಣಿ ಗೆಲುವು ಗವಾಸ್ಕರ್‌-ಬಾರ್ಡರ್‌ ಟ್ರೋಫಿಯ ಜೊತೆಗೆ ಅತೀವ ಆತ್ಮವಿಶ್ವಾಸವನ್ನೂ ಕಟ್ಟಿಕೊಡುತ್ತದೆ.

ಬುಧವಾರದ ಆಟದ ಕೊನೆಗೆ 7 ವಿಕೆಟ್‌ ನಷ್ಟಕ್ಕೆ 241 ರನ್‌ ಗಳಿಸಿದ್ದ ಆಸ್ಟ್ರೇಲಿಯಾ, ಗುರುವಾರ ಬೆಳಗಿನ ಪಾಳಿಯಲ್ಲಿ ತೀವ್ರ ಪ್ರತಿರೋಧ ಒಡ್ಡುತ್ತದೆನ್ನುವ ನಿರೀಕ್ಷೆ ಹುಸಿಯಾಯಿತು. ಹರ್ಭಜನ್‌ಗೆ ಸುಲಭವಾಗಿ ಶರಣಾದ ಆಸ್ಟ್ರೇಲಿಯಾ ನೆನ್ನೆ ಗಳಿಸಿದ್ದ 131 ರನ್ನುಗಳ ಮುನ್ನಡೆಯನ್ನು ಗುರುವಾರದ ಆಟದಲ್ಲಿ 154 ಕ್ಕೆ ವಿಸ್ತರಿಸಿಕೊಂಡಿತು. 47 ರನ್‌ ಗಳಿಸಿದ ಸ್ಟೀವ್‌ ಹರ್ಭಜನ್‌ಗೆ ಔಟಾದಾಗ, ಕಾಂಗರೂಗಳ ಕುಸಿತ ಹೆಚ್ಚೂ ಕಡಿಮೆ ಖಚಿತವಾಯಿತು. ನಂತರ ಬಂದ ಮಿಲ್ಲರ್‌ ಹಾಗೂ ಗಿಲ್ಲೆಸ್ಪಿ ಹೆಚ್ಚು ಪ್ರತಿರೋಧ ಒಡ್ಡದೆ ಹರ್ಭಜನ್‌ಗೆ ವಿಕೆಟ್‌ ಅರ್ಪಿಸಿದರು.

ಗುರುವಾರ ಬಿದ್ದ ಮೂರು ವಿಕೆಟ್‌ಗಳನ್ನು ಕಬಳಿಸಿದ ಹರ್ಭಜನ್‌ ತಮ್ಮ 2 ನೇ ಇನಿಂಗ್ಸ್‌ ಸಂಪಾದನೆಯನ್ನು 8 ಕ್ಕೆ ಹಾಗೂ ಪ್ರಸಕ್ತ ಟೆಸ್ಟ್‌ನ ಸಂಪಾದನೆಯನ್ನು 15 ಕ್ಕೆ ಹೆಚ್ಚಿಸಿಕೊಂಡರು. ಇನ್ನೊಂದು ವಿಕೆಟ್‌ ಗಳಿಸಿದ್ದರೆ ಟೆಸ್ಟೊಂದರಲ್ಲಿ 16 ವಿಕೆಟ್‌ ಗಳಿಸಿದ ಹಿರ್ವಾನಿ ಸಾಧನೆಯನ್ನು ಅವರು ಸರಿಗಟ್ಟುತ್ತಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+