Get Updates
Get notified of breaking news, exclusive insights, and must-see stories!

ಸಾವಿರ ಶಾಲೆಗಳೊಂದಿಗೆ ಮತ್ತೂ 1700 ಶಾಲೆಗಳಲ್ಲಿ ಕಂಪ್ಯೂಟರ್‌ ಶಿಕ್ಷಣ

ಬೆಂಗಳೂರು : ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕುರಿತಂತೆ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಪ್ರಸಕ್ತ ಸಾವಿರ ಸರ್ಕಾರಿ ಶಾಲೆಗಳಲ್ಲಿ ಕೈಗೊಂಡಿರುವ ಕಂಪ್ಯೂಟರ್‌ ಕಲಿಕಾ ಶಿಕ್ಷಣವನ್ನು ಹಂತ ಹಂತವಾಗಿ ಇತರ 1700 ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದು ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ಹೇಳಿದ್ದಾರೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಸದಸ್ಯ ಎಚ್‌.ಎಸ್‌. ಶಂಕರಲಿಂಗೇಗೌಡ ಅವರ ಪ್ರಶ್ನೆಯಾಂದಕ್ಕೆ ವಿಶ್ವನಾಥ್‌ ಬುಧವಾರ ವಿಧಾನಸಭೆಯಲ್ಲಿ ಉತ್ತರಿಸುತ್ತಿದ್ದರು. ಪ್ರಸ್ತುತ 1000 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್‌ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕಾಗಿ 270 ಕೋಟಿ ರುಪಾಯಿ ವೆಚ್ಚದಲ್ಲಿ 11 ಸಾವಿರ ಕಂಪ್ಯೂಟರ್‌ಗಳನ್ನು ಬಳಸಲಾಗುತ್ತಿದೆ ಎಂದು ವಿಶ್ವನಾಥ್‌ ಹೇಳಿದರು.

ಎನ್‌ಐಜಿಟಿ, ಎಡುಕಾಂ ಹಾಗೂ ಆಪ್ಟೆಕ್‌ ಸಂಸ್ಥೆಗಳು ಶಿಕ್ಷಣವನ್ನು ನೀಡುತ್ತಿದ್ದು , ಕಂಪ್ಯೂಟರ್‌ ಹಾಗೂ ಶಿಕ್ಷಕರನ್ನು ಸಂಸ್ಥೆಗಳೇ ಒದಗಿಸಿವೆ. ಕಂಪ್ಯೂಟರ್‌ಗಳ ರಕ್ಷಣಾ ಜವಾಬ್ದಾರಿಯನ್ನೂ ಸಂಸ್ಥೆಗಳೇ ಹೊತ್ತಿವೆ. ಪ್ರೌಢಶಾಲೆಯ ಮೂರೂ ವರ್ಷಗಳಲ್ಲಿ ಒಟ್ಟು 120 ಗಂಟೆಗಳ ಕಾಲ ಕಂಪ್ಯೂಟರ್‌ ಶಿಕ್ಷಣ ಹೊಂದುವ ವಿದ್ಯಾರ್ಥಿಗಳು, 10 ನೇ ತರಗತಿ ಮುಗಿಸುವ ಹೊತ್ತಿಗೆ ಸ್ವ ಉದ್ಯೋಗ ಹೊಂದುವಷ್ಟು ಕಂಪ್ಯೂಟರ್‌ ಜ್ಞಾನ ಹೊಂದಿರುತ್ತಾರೆ ಎಂದು ವಿಶ್ವನಾಥ್‌ ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+