Get Updates
Get notified of breaking news, exclusive insights, and must-see stories!

ಸಿಂಧನೂರಿನ ಸುಕೋ ಬ್ಯಾಂಕಿಗೆ ಐಎಸ್‌ಓ 9002 ಗರಿ

ಬೆಂಗಳೂರು: ಸಿಂಧನೂರಿನ ಸುಕೋ ಬ್ಯಾಂಕ್‌ ರಾಜ್ಯದ ಅತ್ಯುತ್ತಮ ಸಹಕಾರಿ ಬ್ಯಾಂಕ್‌ ಎಂದು ಗುರುತಿಸಿಕೊಂಡಿದ್ದು, ಪ್ರತಿಷ್ಠಿತ ಐಎಸ್‌ಒ 9002 ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.

ಕಳೆದ ಸಾಲಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿದ್ದ ಕರ್ನಾಟಕ ಸಹಕಾರಿ ಸೌಹಾರ್ದ ಕಾಯ್ದೆಯನ್ನು ತನ್ನ ಆಡಳಿತದಲ್ಲಿ ರೂಢಿಸಿಕೊಂಡಿರುವ ಪ್ರಥಮ ಬ್ಯಾಂಕ್‌ ಎನ್ನುವ ಅಗ್ಗಳಿಕೆ ಸಿಂಧನೂರು ಸುಕೋ ಬ್ಯಾಂಕಿನದಾಗಿದೆ. ಜೊತೆಗೆ ಐಎಸ್‌ಓ 9002 ಪ್ರಮಾಣ ಪತ್ರವನ್ನೂ ಗಿಟ್ಟಿಸಿಕೊಂಡಿರುವ ಹೆಗ್ಗಳಿಕೆಯೂ ಬ್ಯಾಂಕಿಗೆ ಸಂದಿದೆ. ಕಳೆದ ಶನಿವಾರದಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣಗಳ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ವತಿಯಿಂದ ಪ್ರಮಾಣ ಪತ್ರ ಪಡೆದಿದೆ.

ಬ್ಯಾಂಕಿನ ಅಧ್ಯಕ್ಷ ಮನೋಹರ ಮಸ್ಕಿ ಅವರಿಗೆ ರಾಜ್ಯ ಸಹಕಾರಿಗಳ ನಿಬಂಧಕ ಟಿ. ವೈ. ನಯಾಜ್‌ ಅಹಮ್ಮದ್‌ ಅವರು ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸೌಹಾರ್ದ ಕಾಯ್ದೆಯನ್ನು ರೂಢಿಸಿಕೊಂಡಿರುವ ಸಿಂಧನೂರಿನ ಜನತಾ ಬಜಾರ್‌ ಮತ್ತು ಹೊಸಪೇಟೆಯ ವಿಕಾಸ ಸಹಕಾರಿ ಬ್ಯಾಂಕ್‌ಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+