Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಪ್ರಸ್ತುತ ತೊಡಗಿಸಿಕೊಂಡಿರುವ ಕೆಲಸದಲ್ಲಿ ನೀವು ಖುಷಿಯಾಗಿರುತ್ತೀರಿ ಅನ್ನುವುದಕ್ಕಿಂಥ, ಕೆಲಸದಲ್ಲಿ ಜೊತೆಯಾಗಿರುವ ವ್ಯಕ್ತಿಯ ಸಹಚರ್ಯ ನಿಮಗೆ ಖುಷಿ ತರುತ್ತಿದೆ. ಅನಿರೀಕ್ಷಿತ ಧನಲಾಭವೂ ಇದೆ.

ವೃಷಭ : ಯಶಸ್ಸಿಗೆ ನೂರೊಂದು ಮೆಟ್ಟಿಲು. ನೀವಿನ್ನು ಮೊದಲ ಮೆಟ್ಟಿಲಿನಲ್ಲಿದ್ದೀರಿ. ಆದರೆ, ಎಷ್ಟೋ ಮಂದಿಗೆ ಒಂದು ಮೆಟ್ಟಿಲನ್ನು ಹತ್ತುವ ಅವಕಾಶವೂ ಇರುವುದಿಲ್ಲ ಅನ್ನುವುದನ್ನರಿತರೆ ವೃಥಾ ಬೇಜಾರು ದೂರಾಗುತ್ತದೆ.

ಮಿಥುನ : ಅಗತ್ಯಕ್ಕಿಂತ ಹೆಚ್ಚು ಭಾವನಾತ್ಮಕವಾಗಿ ವರ್ತಿಸುತ್ತಿದ್ದೀರಿ. ನಿಮ್ಮ ಭಾವನಾತ್ಮಕತೆ ಇತರರ ಕಣ್ಣಿಗೆ ತಮಾಷೆಯಾಗಿ ಕಾಣುವ ಸಂಭವವೂ ಇದೆ. ಮನೆಯಲ್ಲಿ ಕಲಹದ ದಿನ. ಮೌನವೇ ಆಭರಣ ಅನ್ನುವಂತಿರಿ.

ಕಟಕ : ಅತೀವ ಆತ್ಮ ವಿಶ್ವಾಸದಿಂದ ತುಂಬಿ ತುಳುಕುತ್ತಿದ್ದೀರಿ. ಅದೇ ವಿಶ್ವಾಸ ಪರೀಕ್ಷೆ ಬರೆಯುವವರೆಗೂ ಇರಲಿ. ಹುಚ್ಚು ಯೋಚನೆಗಳನ್ನು ಬದಿಗಿಟ್ಟು ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ.

ಸಿಂಹ : ನಿಮ್ಮ ಪ್ರೇಮವನ್ನು ವಿಮರ್ಶಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಇದರಿಂದಾಗಿ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ ಹಾಗೂ ಅನಗತ್ಯ ಅಶಾಂತಿಯನ್ನು ಕಳಕೊಳ್ಳುತ್ತೀರಿ.

ಕನ್ಯಾ : ಗುಂಪು ಚಟುವಟಿಕೆಗಳಲ್ಲಿ ಹೆಚ್ಚಿನ ಯಶಸ್ಸು ಗಳಿಸುತ್ತೀರಿ. ತಂಡದ ನಾಯಕತ್ವ ವಹಿಸುವ ಅವಕಾಶವೂ ಇದೆ. ಯಶಸ್ಸಿನೊಂದಿಗೆ ಮತ್ತೊಮ್ಮೆ ನಿಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುತ್ತೀರಿ.

ತುಲಾ : ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದು ಒಳ್ಳೆಯದಲ್ಲ . ಹೊಸ ಅವಕಾಶಗಳೇನೊ ಸಾಕಷ್ಟಿವೆ. ಆ ನಿರೀಕ್ಷೆಗಳನ್ನು ನೀವು ತುಂಬ ಬಲ್ಲಿರಾ ಅನ್ನುವ ಆತ್ಮ ಪರೀಕ್ಷಣೆ ಒಳ್ಳೆಯದು.

ವೃಶ್ಚಿಕ : ನಿಮ್ಮ ಕುತೂಹಲದ ಮನಸ್ಸಿಗೆ ಪ್ರವಾಸ ಮತ್ತೆ ಒದಗಿ ಬರಲಿದೆ . ಹೊಸ ವಾಣಿಜ್ಯ ಒಡಂಬಡಿಕೆಗಳೂ ಸಾಧ್ಯವಾಗಲಿವೆ. ಇದರಿಂದಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಲಿದೆ.

ಧನಸ್ಸು : ಹಬ್ಬ ಹತ್ತಿರವಾಗುತ್ತಿರುವ ಖುಷಿಯಲ್ಲಿದ್ದೀರಿ. ಹೊಸ ವರ್ಷದಿಂದಲಾದರೂ ಬದುಕಿಗೊಂದು ಚೌಕಟ್ಟನ್ನು ಅಳವಡಿಸಿಕೊಳ್ಳಿ. ಮನೆಯವರ, ಗೆಳೆಯರ ಮಾತುಗಳಿಗೆ ಕಿವಿ ಕೊಡಿ.

ಮಕರ : ಮಾತೇ ಮುತ್ತು ಅನ್ನುವುದನ್ನು ಅರಿತಿದ್ದೂ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದ್ದೀರಿ. ಕೆಲವೊಮ್ಮೆ ರಾಜಿ ಅನಿವಾರ್ಯ. ಉಳಿಗಾಗಿ ಈ ಬಾರಿ ಜೀ ಹುಜೂರ್‌ ಅಂದು ಬಿಡಿ. ಚಕ್ರ ತಿರುಗುತ್ತಿದೆ.

ಕುಂಭ : ಹೊಸತನ್ನು ಸಾಧಸುವ ಹಂಬಲದಲ್ಲಿದ್ದೀರಿ. ಈ ಹೊತ್ತಿನಲ್ಲಿ ಈ ಪಾಟಿ ನಿದ್ರಾವಶರಾದರೆ ಹೇಗೆ. ನೀವೀಗ ಸರಸ್ವತಿಯಾಗುವ ಹೊತ್ತು . ನಿಮ್ಮಿಂದ ಬಹಳಷ್ಟನ್ನು ಬಹಳಷ್ಟು ಜನ ನಿರೀಕ್ಷಿಸುತ್ತಿದ್ದಾರೆ.

ಮೀನ : ಇಷ್ಟಪಾತ್ರರೊಂದಿಗೆ ಮೊಂಡು ವಾದ ಬೇಡ. ಹಟದಿಂದಾಗಿ ಕಳಕೊಳ್ಳುವುದೇ ಸಾಕಷ್ಟು . ಆರೋಗ್ಯದಲ್ಲಿ ಏರುಪೇರುಗಳಿವೆ. ಕುಲದೇವರನ್ನು ಪ್ರಾರ್ಥಿಸಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+