ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ಭಾಗದ ರಸ್ತೆ ಅಭಿವೃದ್ಧಿಗೆ ನೆರೆ ರಾಜ್ಯಗಳೊಂದಿಗೆ ಜಂಟಿ ಕಾಮಗಾರಿ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ ರಾಜ್ಯದ ಗಡಿ ಪ್ರದೇಶಗಳ ರಸ್ತೆ ಅಭಿವೃದ್ಧಿಗಾಗಿ 6 ಕೋಟಿ 50 ಲಕ್ಷ ರುಪಾಯಿ ಯೋಜನೆ ಸಿದ್ಧಪಡಿಸಲಾಗಿದೆ. ಈ ಪೈಕಿ ಈಗಾಗಲೇ 3 ಕೋಟಿ 20 ಲಕ್ಷ ರುಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಯೋಜನಾ ಖಾತೆ ರಾಜ್ಯ ಸಚಿವೆ ಸುಮಾ ವಸಂತ್‌ ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ರಾಜ್ಯ ಲೋಕೋಪಯೋಗಿ ಸಚಿವ ಧರ್ಮಸಿಂಗ್‌ ಅವರು, ರಾಜ್ಯದ ಗಡಿ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಆಯಾ ಭಾಗದ ನೆರೆ ರಾಜ್ಯಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ನೆರೆ ರಾಜ್ಯಗಳು ಸಮ್ಮತಿಸಿದರೆ, ಜಂಟಿಯಾಗಿ ಈ ಕಾಮಗಾರಿ ಕೈಗೆತ್ತಿಕೊಳ್ಳುವುದು ರಾಜ್ಯದ ಉದ್ದೇಶವಾಗಿದೆ ಎಂದೂ ಅವರು, ಬಿ.ಜೆ.ಪಿ.ಯ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರ ನೀಡುತ್ತಾ ತಿಳಿಸಿದರು. ಈಗಾಗಲೇ ಗಡಿ ಪ್ರದೇಶಗಳಲ್ಲಿ ಜಂಟಿಯಾಗಿ ಕಾಮಗಾರಿ ಆರಂಭಿಸಲಾಗಿದೆ. ನಮ್ಮ ರಾಜ್ಯದ ಎಂಜಿನಿಯರ್‌ಗಳು, ಆಂಧ್ರಪ್ರದೇಶ ಅಭಿಯಂತರರ ಜತೆ ಸಮಾಲೋಚಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದಾರೆ. ಈ ಪ್ರಕ್ರಿಯೆಗೆ ಆಗಲೇ ಚಾಲನೆ ದೊರೆತಿದೆ ಎಂದರು.

ಇದೇ ಮಾದರಿಯಲ್ಲಿ ಮಹಾರಾಷ್ಟ್ರ, ಕೇರಳ ಹಾಗೂ ತಮಿಳು ನಾಡು ಸರಕಾರಗಳ ಜತೆ ಸಹ ಸಮಾಲೋಚಿಸಲಾಗವುದು ಎಂದೂ ಸಚಿವರು ತಿಳಿಸಿದರು. ಗಡಿ ಪ್ರದೇಶಗಳ ರಸ್ತೆಯ ಅಭಿವೃದ್ಧಿಗಾಗಿ ಈ ಹಿಂದೆ ಬಿಡುಗಡೆ ಮಾಡುತ್ತಿದ್ದಂತೆ ಆಯಾ ವಿಧಾನ ಸಭಾ ಕ್ಷೇತ್ರಗಳಿಗೆ 25 ಲಕ್ಷ ರುಪಾಯಿ ಬಿಡುಗಡೆ ಮಾಡುವ ಬಗ್ಗೆ ಕೂಡ ರಾಜ್ಯ ಸರಕಾರ ಪರಿಶೀಲನೆ ನಡೆಸುತ್ತಿದೆ ಎಂದೂ ಧರ್ಮಸಿಂಗ್‌ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X