ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಕಿವಿಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು. ನಿರಾಳವಾಗಿರಬೇಕು ಅಂದ್ರೆ ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಿ. ಆಫೀಸಿನಲ್ಲಿ ಕೆಲಸ ಓವರ್ ಲೋಡ್ ಎಂದೆನಿಸಿದರೂ ಅಚ್ಚರಿ ಇಲ್ಲ.ವೃಷಭ : ಬಂಧುಗಳು ನಿಮ್ಮ ಕೈ ಬಿಡುವುದಿಲ್ಲ . ಪರಿಸ್ಥಿತಿ ತುಂಬಾ ಕ್ಲಿಷ್ಟವೆನಿಸಿದರೂ ಸಲಹೆ, ಪ್ರೀತಿ ಆದರಗಳು ನಿಮ್ಮ ಬೆನ್ನು ತಟ್ಟುವುದರಿಂದ ಮನಸ್ಸಿನ ನೋವು ಕಡಿಮೆಯಾಗುತ್ತದೆ.
ಮಿಥುನ : ನಿಮ್ಮ ಪ್ರಯಾಣದ ಕನಸಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಆರ್ಥಿಕ ಮುಗ್ಗಟ್ಟು ನಿಮಗೀಗ ಅಂತಹ ಬೇಜಾರೇನೂ ತರುವುದಿಲ್ಲ. ಆದ್ದರಿಂದ ಖುಷಿಯಾಗಿಯೇ ಇರುತ್ತೀರಿ.
ಕಟಕ : ಪತ್ನಿಯಾಂದಿಗೆ ಜಗಳ ಆಡಿದರೆ ನೀವೇ ಸೋಲುವುದು. ಬಜೆಟ್ ಇರುವುದು ಮನೆಯಾಡತಿಯ ಕೈಯಲ್ಲಿ ಅಲ್ವಾ ? ಉಳಿತಾಯ ಯಾರು ಮಾಡಿದರೇನು, ಮನೆಗೇ ಉತ್ತಮ ತಾನೇ ?
ಸಿಂಹ : ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ಹಾಗೆಯೇ ಮತ್ತೆ ನಿಮ್ಮ ದಬ್ಬಾಳಿಕೆ ಬುದ್ಧಿ ಪ್ರದರ್ಶಿಸಿದರೆ ಸೋಲುತ್ತೀರಿ. ಆಫೀಸು ಕೆಲಸಗಳೆಲ್ಲಾ ಇವತ್ತು ಒಂದು ಹಂತಕ್ಕೆ ಬಂದಿರುತ್ತೆ.
ಕನ್ಯಾ : ಹಿರಿಯರು ನಿಮ್ಮ ಮನೆಗೆ ಅನಿರೀಕ್ಷಿತವಾಗಿ ಬರಬಹುದು. ಗೊಂದಲ ಪಡುವ ಅವಶ್ಯಕತೆ ಇಲ್ಲ. ನಿಮ್ಮ ಮನೆಯವರು ತುಸು ಕಸಿವಿಸಿ ಗೊಂಡರೂ ಕೂಡ ಯಾವುದೇ ತೊಂದರೆಯಾಗದು.
ತುಲಾ : ಕೋರ್ಟ್ ಕೆಲಸವೇನಾದರೂ ಪೆಂಡಿಂಗ್ ಇಟ್ಟಿದ್ದರೆ ಇವತ್ತೇ ಮುಗಿಸಿಬಿಡಿ. ಇಲ್ಲವಾದಲ್ಲಿ ಇನ್ನೂ ತುಂಬಾ ಸಮಯ ಹಿಡಿಯುತ್ತದೆ.
ವೃಶ್ಚಿಕ : ಸಮಯವೆಲ್ಲಾ ವ್ಯರ್ಥವಾಗುತ್ತಿದೆ ಅಂತ ಅನಿಸುವುದು ಸಹಜ. ಪರಿಸ್ಥಿತಿಗಳು ನಿಮ್ಮ ಅಧ್ಯಯನಕ್ಕೆ ಪೂರಕವಾಗಿಲ್ಲದಿದ್ದರೂ ನಿಮ್ಮ ಕೆಲಸ ನೀವು ಮುಂದುವರೆಸಿ, ಫಲದ ಕಡೆಗೆ ಗಮನ ಬೇಡ.
ಧನಸ್ಸು : ಧರ್ಮ ಕಾರ್ಯಗಳತ್ತ ಹೆಚ್ಚು ಗಮನ ಹರಿಸುತ್ತೀರಿ. ಇದು ನಿಮ್ಮ ವ್ಯವಹಾರ ಕ್ಷೇತ್ರಕ್ಕೂ ಪೂರಕವಾಗಿರುವುದರಿಂದ ಸನ್ಮಂಗಳವಾಗುವುದು. ಲಕ್ಷ್ಮಿಯನ್ನು ಆರಾಧಿಸಿ.
ಮಕರ : ಮನೆಯವರು ಮಂಗಳಕಾರ್ಯಕ್ಕಾಗಿ ಇಷ್ಟೆಲ್ಲಾ ಪರದಾಡುತ್ತಿದ್ದಾರೆ. ಸ್ನೇಹಿತರೂ ಕೂಡ ಒತ್ತಾಯಿಸುತ್ತಿದ್ದಾರೆ. ಕಂಕಣ ಭಾಗ್ಯಕ್ಕೆ ಮನಸ್ಸೇ ಮುಖ್ಯ ತಾನೇ ? ಎಂದು ಮನಸ್ಸು ಮಾಡುವಿರಿ ?
ಕುಂಭ : ನಿಮ್ಮ ಪ್ರಯಾಣ ನಿರರ್ಥಕ ಅಂತ ಅನಿಸಬಹುದು. ಆದರೆ ಈಗ ತೆಗೆದುಕೊಂಡಿರುವ ಎಲ್ಲಾ ಕಷ್ಟಗಳು ಮುಂದೊಂದು ದಿನ ನಿಮ್ಮ ಸಹಾಯಕ್ಕೆ ಬರುತ್ತದೆ.
ಮೀನ : ಎನ್ನ ಕಣ್ಣೊಂದೋದರು ಎದುರಾಳಿಯ ಕಣ್ಣುಗಳೆರಡು ಹೋಗಲೆನ್ನುವ ಧೋರಣೆ ಯಾರಿಗೂ ಗೌರವ ತರುವಂಥದ್ದಲ್ಲ . ದ್ವೇಷ ಮನೋಭಾವವ ತ್ಯಜಿಸಿ. ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications