Get Updates
Get notified of breaking news, exclusive insights, and must-see stories!

ಗಾನಕಲಾ ಭೂಷಣ ಸಮ್ಮಾನಿತರಾದರು ನಮ್ಮ ಕದ್ರಿ ಗೋಪಾಲನಾಥರು

ಉಡುಪಿ : ಪ್ರಸಿದ್ಧ ಸ್ಯಾಕ್ಸೋಫೋನ್‌ ವಾದಕ ಕದ್ರಿ ಗೋಪಾಲನಾಥ್‌ ಅವರಿಗೆ ಉಡುಪಿಯಲ್ಲಿ ನಡೆದ 31ನೇ ಸಂಗೀತ ಸಮ್ಮೇಳನದಲ್ಲಿ ಗಾನಕಲಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ಗಾನಕಲಾ ಪರಿಷತ್‌ ಮತ್ತು ಪರ್ಯಾಯ ಪೇಜಾವರ ಅಧೋಕ್ಷಜ ಮಠದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಮ್ಮೇಳನದಲ್ಲಿ ಪೇಜಾವರ ಮಠಾಧೀಶ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರು ಗೋಪಾಲ್‌ನಾಥ್‌ಅವರಿಗೆ ಬಿರುದು ಪತ್ರ, ಖಿಲ್ಲತ್ತು ಪ್ರದಾನ ಮಾಡಿ ಫಲ ತಾಂಬೂಲಗಳನ್ನಿತ್ತು, ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಗೀತದ ಮಹತ್ವದ ಬಗ್ಗೆ ಮಾತನಾಡಿದ ಸ್ವಾಮೀಜಿ, ಲಲಿತಕಲೆಗಳಿಂದ ದೊರೆಯುವ ಆನಂದವೇ ಸಚ್ಚಿದಾನಂದ ಎಂದು ಹೇಳಿದರು.

ಲಲಿತ ಕಲಾ ಕ್ಷೇತ್ರದ ಆರು ಮಂದಿ ಹಿರಿಯರಾದ ಹಾಡುಗಾರ ವಿದ್ಯಾಭೂಷಣ , ಪಂಡಿತ್‌ ಮಾಧವ ಭಟ್‌, ಶಿವಮೊಗ್ಗ ಸುಬ್ಬಣ್ಣ, ಎಲ್‌. ಭೀಮಾಚಾರ್‌, ಉಡುಪಿ ಲಕ್ಷ್ಮಿನಾರಾಯಣ ಮತ್ತು ಉದಯವಾಣಿಯ ಎ. ಈಶ್ವರಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸ್ವಾಮೀಜಿ ಅಭಿನಂದಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+