Get Updates
Get notified of breaking news, exclusive insights, and must-see stories!

ಸೋಲಿಗರು ಕಂಡಂತೆ ಕಡಂಬೂರು ಅರಣ್ಯದತ್ತ ಸಾಗಿದ ವೀರಪ್ಪನ್‌

ಚಾಮರಾಜನಗರ: ತಮಿಳುನಾಡಿನ ಕಡಂಬೂರು ಅರಣ್ಯವನ್ನು ನರಹಂತಕ ವೀರಪ್ಪನ್‌ ಪ್ರವೇಶಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ ಎಸ್‌ಟಿಎಫ್‌ ಪಡೆಗಳು ಕಡಂಬೂರು ಅರಣ್ಯ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿವೆ ಎಂದು ಚಾಮರಾಜನಗರ ಮೂಲಗಳು ತಿಳಿಸಿವೆ.

ಕರ್ನಾಟಕದ ಕಾಡಿನೊಳಕ್ಕೆ ವೀರಪ್ಪನ್‌ ಪ್ರವೇಶಿಸಿದ್ದಾನೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಚಾಮರಾಜನಗರ ಅರಣ್ಯ ಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿತ್ತು . ಆದರೆ, ವೀರಪ್ಪನ್‌ ಕಡಂಬೂರು ಅರಣ್ಯ ಪ್ರದೇಶದಲ್ಲಿ ಇರುವುದು ಖಚಿತವಾಗಿರುವುದರಿಂದ, ಅವನು ಕರ್ನಾಟಕ ಅರಣ್ಯವನ್ನು ಪ್ರವೇಶಿಸಿದ್ದಾನೆ ಅನ್ನುವ ಊಹೆಗಳು ಸುಳ್ಳಾಗಿವೆ.

ಕಳೆದ ಗುರುವಾರ ವನಮೇಟಿ ಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ ತಂಡವನ್ನು ಸೋಲಿಗರು ಕಂಡಿದ್ದು , ತಂಡದಲ್ಲಿ 15 ವರ್ಷದ ಬಾಲಕ ಸೇರಿದಂತೆ ಸುಮಾರು 7 ಜನರಿದ್ದರೆಂದು ತಿಳಿದುಬಂದಿದೆ.

(ಚಾಮರಾಜನಗರ ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+