ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಗೆಳೆಯರ ಜೊತೆಗಿನ ಮುನಿಸು ಹೆಚ್ಚು ಕಾಲ ಬಾಳುವಂತದ್ದಲ್ಲ. ಇವತ್ತು ದೇವರ ಕೆಲಸದಲ್ಲಿ ಮಗ್ನರಾಗಿರುತ್ತೀರಿ.ವೃಷಭ : ಗ್ರಹಣ ಶಕ್ತಿ ಇರಬೇಕಿದ್ದರೆ ಏಕಾಗ್ರತೆ ಇರಬೇಕು. ಆದ್ದರಿಂದ ಸದ್ಯ ನಿಮ್ಮ ಓದು ಯಶಸ್ವಿಯಾಗಬೇಕಿದ್ರೆ ಇತರ ಕೆಲಸಗಳನ್ನು ಪಕ್ಕಕ್ಕಿಡಿ.
ಮಿಥುನ : ನಿಮ್ಮ ಪರಿಸ್ಥಿತಿಗಳನ್ನು ಯಾರಿಗೂ ವಿವರಿಸಲು ಆಗದೇ ಇರುವುದರಿಂದ ನೀವು ನರಳುತ್ತಿರುವುದು ಮಾತ್ರ ಇತರರಿಗೆ ಕಾಣಿಸುತ್ತದೆ.
ಕಟಕ : ಗಂಟಲು ಬೇನೆ ಅಂತ ನೀವೇನೂ ಮಾತು ಕಡಿಮೆ ಮಾಡುವುದಿಲ್ಲ. ಉತ್ತಮ ಊಟದ ಆಫರ್ ಈಗ ಬಂದರೆ ಕಂಡಾವಟ್ಟೆ ಬೇಜಾರು ಮಾಡಿಕೊಳ್ಳುತ್ತೀರಿ.
ಸಿಂಹ : ನಿಮ್ಮ ಸಾಧನೆಯ ಹಾದಿಯಲ್ಲಿ ಎತ್ತರಕ್ಕೆ ಏರುವ ಕನಸುಗಳನ್ನು ಎಲ್ಲರ ಬಳಿ ಈಗಲೇ ಹಂಚಿಕೊಳ್ಳುವುದಕ್ಕಿಂತ ಸಾಧಿಸಿದ ನಂತರ ಪ್ರಶಂಸೆ ಗಿಟ್ಟಿಸುವ ಮಜವೇ ಚಂದ.
ಕನ್ಯಾ : ಯಾವತ್ತೋ ತೆಗೆದುಕೊಂಡಿರುವ ಸಾಲ ಹಿಂತಿರುಗಿಸುವುದು ಒಳ್ಳೆಯದಲ್ವಾ ? ಹಂಗು ಇರುವುದಿಲ್ಲ. ಇದನ್ನು ಧನವಿಯೋಗ ಅಂತ ಕರೆಯಲಿಕ್ಕಾಗುವುದಿಲ್ಲ ಬಿಡಿ.
ತುಲಾ : ಗುಂಡು ಪಾರ್ಟಿಯಂಥ ಕ್ಯಾಶುವಲ್ ಮೀಟಿಂಗ್‌ಗಳಲ್ಲಿ ಸ್ವಲ್ಪ ಜಾಗ್ರತೆಯಿರಬೇಕು. ಹಣ ಮತ್ತು ಬುದ್ಧಿ ಎರಡೂ ಖಾಲಿಯಾಗುವ ಸಂಭವವಿದೆ.
ವೃಶ್ಚಿಕ : ನಿಮ್ಮ ನೋವು ಅರ್ಥವಾಗದಷ್ಟು ದಡ್ಡರಲ್ಲ ನಿಮ್ಮ ಸ್ನೇಹಿತರು. ಎಲ್ಲವನ್ನೂ ಹೇಳಲಿಕ್ಕೆ ಆಗುವುದಿಲ್ಲ ಎಂಬ ನಿಮ್ಮ ನಿಯಮವೇ ಇತರರಿಗೂ ಅನ್ವಯವಾಗುತ್ತದೆ ಅಲ್ವೇ?
ಧನಸ್ಸು : ಸಿಟ್ಟು ಬಂದರೆ ಒಂದರಿಂದ ಹತ್ತರವರೆಗೆ ಎಣಿಸಬೇಕು. ಸಂಬಂಧಗಳನ್ನೆಲ್ಲಾ ಸಿಟ್ಟಿನಿಂದಲೇ ದೂರ ಮಾಡಿಕೊಂಡರೆ ನೀವು ಒಂಟಿಯಾಗುವುದಿಲ್ಲವೇ ?
ಮಕರ : ಅಚ್ಚರಿಯ ಸುದ್ದಿ ಒಂದು ಕ್ಷಣ ನಿಮ್ಮ ಪ್ಲಾನನ್ನೆಲ್ಲಾ ನಿಲ್ಲಿಸಿ ಬಿಡುತ್ತದೆ. ಹಾಗೆಂದು ಯಾವುದೇ ಗೊಂದಲ ಸೃಷ್ಟಿಸಿಕೊಳ್ಳಬೇಡಿ. ಒಳ್ಳೆಯದನ್ನು ಗುರುತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಅಷ್ಟೇ.
ಕುಂಭ : ಇವತ್ತು ನಿಮಗೊಂದು ಒಳ್ಳೆಯ ಪುಸ್ತಕ ಸಿಗುತ್ತದೆ. ಮನಸ್ಸಿದ್ದರೆ ಮಾರ್ಗ ಅಲ್ವೇ? ಬಿಡುವನ್ನು ಸದುಪಯೋಗ ಪಡಿಸಿಕೊಂಡರೆ ಏನಾದರೂ ಸಾಧಿಸಬಹುದು.
ಮೀನ : ಪೂಸಿ ಹೊಡೆಯುವುದನ್ನು ಬಿಟ್ಟು ತೂಕದ ಕೆಲಸಗಳನ್ನು ಆಯ್ದುಕೊಂಡರೆ ನಿಮ್ಮ ಗೌರವ ಹೆಚ್ಚಾಗುತ್ತದೆ. ರಜೆಯಲ್ಲಿ ಖರ್ಚು ಹೆಚ್ಚಾಗುವುದು ಸಹಜವೇ ಬಿಡಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications