Get Updates
Get notified of breaking news, exclusive insights, and must-see stories!

ಮ್ಯಾಥ್ಯೂ ಹೇಡನ್‌ ಅದ್ಭುತ ಶತಕ, ಆಸ್ಟ್ರೇಲಿಯಾ 326ಕ್ಕೆ 3

ಚೆನ್ನೈ : ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ಅಂತಿಮ ಹಾಗೂ ಮೂರನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಮೊದಲ ದಿನವಾದ ಇಂದು ಪ್ರವಾಸಿ ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತ ತಂಡದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿತ್ತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ವಾ ಅವರ ನಿರ್ಧಾರ ಫಲ ನೀಡಿತು. ಬ್ಯಾಟಿಂಗ್‌ಗೆ ಅನುಕೂಲಕರವಾಗಿದ್ದ ಪಿಚ್‌ನಲ್ಲಿ ಮೊದಲ ಓವರ್‌ನಲ್ಲೇ ಆರಂಭ ಆಟಗಾರ ಸ್ಲೇಟರ್‌ ಅವರ ವಿಕೆಟ್‌ ಕಳೆದುಕೊಂಡ ಆಸ್ಟ್ರೇಲಿಯಾ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ದಿನದಾಟ ಮುಗಿದಾಗ ಆಸ್ಟೇಲಿಯಾ ತಂಡದ ನಾಯಕ ಸ್ಟೀವ್‌ ವಾ (43) ಹಾಗೂ ಹೇಡನ್‌ 147 ರನ್‌ ಗಳಿಸಿ ಆಟವಾಡುತ್ತಿದ್ದರು.

ಬಿಡುಬೀಸಾಗಿ ಆಡುತ್ತಿರುವ ಹೇಡನ್‌ ಅದ್ಭುತ ಸಿಕ್ಸರ್‌ ಹಾಗೂ ಬೌಂಡರಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ರನ್ನಿನ ಹೊಳೆಯನ್ನೇ ಹರಿಸಿದ ಹೇಡನ್‌ ತಮಗೆ ದೊರೆತ ಜೀವದಾನದ ಸಂಪೂರ್ಣ ಲಾಭ ಪಡೆದರು.

ಹೇಡನ್‌ ಅವರ ವಿಕೆಟ್‌ ಪಡೆಯಲು ಭಾರತ ತಂಡದ ನಾಯಕ ಸೌರವ್‌ ಗಂಗೂಲಿ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ಲಂಚ್‌ ವಿರಾಮದ ವೇಳೆಗೆ 2 ವಿಕೆಟ್‌ ನಷ್ಟಕ್ಕೆ 140ರನ್‌ ಗಳಿಸಿದ್ದ ತಂಡ, ದಿನದಾಟ ಮುಗಿದಾಗ 3 ವಿಕೆಟ್‌ ಕಳೆದುಕೊಂಡು 326 ರನ್‌ ಗಳಿಸುವ ಮೂಲಕ ಬೃಹತ್‌ ಮೊತ್ತ ಕಲೆಹಾಕುವ ಕುರುಹು ತೋರಿದೆ. ಭಾರತದ ಪರ ಜಾಹೀರ್‌ ಖಾನ್‌, ಹರ್‌ಭಜನ್‌ ಸಿಂಗ್‌ ಹಾಗೂ ಸಾಯಿರಾಜ್‌ ಬಹುತಲೆ ತಲೆ ಒಂದು ವಿಕೆಟ್‌ ಪಡೆದರು.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+