Get Updates
Get notified of breaking news, exclusive insights, and must-see stories!

ಹುಮನಾಬಾದ್‌ನಲ್ಲಿ ಮತ್ತೊಂದು ಅಪಘಾತ,ಏಳು ಮಂದಿ ಬಲಿ

ಹುಮನಾಬಾದ್‌ : ಲಾರಿ ಮತ್ತು ಜೀಪ್‌ ಮುಖಾಮುಖಿಯಲ್ಲಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 9ರ ಸಿಂಧಕೇರಾ ಕ್ರಾಸ್‌ನಲ್ಲಿ ಶನಿವಾರ ನಡೆದಿದೆ.

ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಮನಾಬಾದ್‌ನಿಂದ ಮನ್ನಾಎಖ್ಖೆಳ್ಳಿ ಕಡೆಗೆ ಹೊರಟಿದ್ದ ಜೀಪ್‌ ಮತ್ತು ಪಪ್ಪಾಯಿ ಹಣ್ಣುಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿ ಪರಸ್ಪರ ಡಿಕ್ಕಿ ಹೊಡೆದಾಗ ಈ ಅನಾಹುತ ಸಂಭವಿಸಿದೆ.

ಮೃತಪಟ್ಟವರನ್ನು ಜೀಪ್‌ ಚಾಲಕ, ಮಚೇಂದ್ರ ಓತಗಿ(24), ಸಖುಬಾಯಿ ವಡ್ಡನಕೇರಿ(38), ವಿವೇಕಾನಂದ ಕಲ್ಲೂರ(15), ಬಕ್ಕಪ್ಪ ಪೋತೆ (40), ನಾಗಮ್ಮ ವಡ್ಡನಕೇರಿ(45) ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಹೆಸರುಗಳು ಗೊತ್ತಾಗಿಲ್ಲ. ತೀವ್ರವಾಗಿ ಗಾಯಗೊಂಡ ಒಂಬತ್ತು ಮಂದಿ, ಬೀದರ್‌ ಮತ್ತು ಹೈದರಾಬಾದ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾರ್ಚ್‌ 2ರಂದು ಇದೇ ರಸ್ತೆಯ ಮನ್ನಾ ಎಖ್ಖೆಳ್ಳಿಯಲ್ಲಿ ಲಾರಿ ಜೀಪ್‌ ಡಿಕ್ಕಿಯಾಗಿ ಆರುಮಂದಿ ಮಂದಿ ಮೃತಪಟ್ಟಿದ್ದು, ಶನಿವಾರದ ಘಟನೆಯಿಂದ ಜನರು ಮತ್ತಷ್ಟು ಆತಂಕಗೊಂಡಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+