Get Updates
Get notified of breaking news, exclusive insights, and must-see stories!

ರಾಯಚೂರಿನಲ್ಲಿ ಕಾರ್ಕೋಟಕ ರೋಗ, 8 ಮಂದಿ ಬಲಿ

ರಾಯಚೂರು : ಕಳೆದ ಒಂದು ವಾರದಿಂದ ಸಿಂಧನೂರು ತಾಲ್ಲೂಕಿನ ಚಿಕ್ಕ ಬೇರಿಗೆ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕಾರ್ಕೋಟಕ ಎಂಬ ವಿಚಿತ್ರ ರೋಗ ಎಂಟು ಜನರನ್ನು ಬಲಿ ತೆಗೆದುಕೊಂಡಿದೆ.

ಸುಮಾರು 450 ಮಂದಿಗೆ ಕಾರ್ಕೋಟಕ ರೋಗದಿಂದ ನರಳುತ್ತಿದ್ದು , ಅವರಲ್ಲಿ 29 ಮಂದಿಯ ಸ್ಥಿತಿ ಗಂಭೀರವಾಗಿದೆ. ಯಾವುದೇ ಮುನ್ಸೂಚನೆಯಿಲ್ಲದೆ ಕಾಣಿಸಿಕೊಳ್ಳುವ ಜ್ವರದಿಂದ ವ್ಯಕ್ತಿಯು ನಿತ್ರಾಣವಾಗಿ ಎರಡೇ ದಿನದಲ್ಲಿ ಅಸು ನೀಗುವುದು ಈ ರೋಗದ ಲಕ್ಷಣವಾಗಿದ್ದು , ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅತಿಯಾದ ಕ್ರಿಮಿನಾಶಕ ಮತ್ತು ರಸಗೊಬ್ಬರ ಬಳಕೆಯಿಂದ ರಾಸಾಯನಿಕ ವಸ್ತುಗಳು ಅಂತರ್ಜಲದಲ್ಲಿ ಸೇರುತ್ತವೆ. ಇದರಿಂದಾಗಿ ಕುಡಿಯುವ ನೀರಿನ ಮೂಲಕ ಹರಡುವ ಈ ರಾಸಾಯನಿಕಗಳು ರೋಗಕ್ಕೆ ಕಾರಣವಾಗುತ್ತವೆ ಎಂದು ವಿಶ್ವ ಸಂಸ್ಥೆಯ ಅಧ್ಯಯನ ಹೇಳುತ್ತದೆ. ರಾಯಚೂರಿನಲ್ಲಿ ಕಾಣಿಸಿಕೊಂಡಿರುವ ರೋಗದ ಹಿನ್ನೆಲೆಯೂ ಇದೇ ಆಗಿರಬಹುದು ಎಂದು ಶಂಕಿಸಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+