Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಇಲ್ಲ ಸಲ್ಲದ ಮಾತುಗಳಿಗೆ ಕಿವಿಕೊಡಬೇಡಿ. ಹತ್ತು ಹಾಕಿ ನೂರು ತಗೊಳ್ಳುವುದು ನಿಮ್ಮ ಬುದ್ಧಿಮತ್ತೆಗೆ ನಿಲುಕುತ್ತಿಲ್ಲ. ಹಿಂದೇಟು ಬೇಡ.

ವೃಷಭ : ಮೈಯೆಲ್ಲಾ ಕಿವಿಯಾಗಿಸಿಕೊಳ್ಳಿ. ನಿಮ್ಮ ಕೆಲಸದ ವಾತಾವರಣದಲ್ಲಿ ನಡೆಯುವ ಸಂಭಾಷಣೆಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ದಿನದ ಕೊನೆಗೆ ಅದರ ಸತ್ಫಲ ನಿಮ್ಮದಾಗಲಿದೆ.

ಮಿಥುನ : ಸಣ್ಣಪುಟ್ಟ ವಿಷಯಗಳೆಂದು ಉಡಾಫೆ ಸಲ್ಲ. ಕಚೇರಿಯಲ್ಲಿ ನಿಮ್ಮ ಮೇಲಿನ ನಂಬುಗೆಗೇ ಅದು ಪೆಟ್ಟು ಕೊಟ್ಟೀತು.

ಕಟಕ : ನಿರ್ದಾಕ್ಷಿಣ್ಯವಾಗಿರಿ. ಸುತ್ತಿ- ಬಳಸಿ ಮಾತನಾಡಬೇಡಿ. ಎರಡು ಮನಸ್ಸು ಬೇಡ. ನೀವು ಎಳ್ಳಷ್ಟು ಅಪ್ರಾಮಾಣಿಕರಾದರೂ ಕೆಲಸವನ್ನೇ ಕಳೆದುಕೊಳ್ಳುವ ಅಪಾಯವಿದೆ.

ಸಿಂಹ : ನಿಮ್ಮ ಅತಿ ಭಾವುಕತೆಯೇ ಮನಸ್ಸನ್ನು ಬಿಮ್ಮೆನ್ನಿಸುತ್ತಿದೆ. ಬೇರೆಯವರ ಕಷ್ಟ ಕೇಳಿದರೆ, ಅದನ್ನು ಮಡಿಲಿಗೇ ಕಟ್ಟಿಕೊಂಡು ಸುತ್ತುವ ನಿಮ್ಮ ಜಾಯಮಾನ ಒಳ್ಳೆಯದೇ. ಆದರೆ ಮನಸ್ಸಿಗೆ ಬ್ರೇಕ್‌ ಕೂಡ ಹಾಕಬೇಕಲ್ಲವೇ?

ಕನ್ಯಾ : ಹಣ ಹೂಡುವ ನಿಮ್ಮ ಯೋಚನೆ ಸರಿಯಿದೆ. ಆದರೆ ಒಬ್ಬರೇ ಹೊಳೆಗಿಳಿಯಬೇಡಿ. ಒಳ್ಳೆ ಜೊತೆಗಾರನೊಂದಿಗೆ ಇಳಿಯಿರಿ. ಭವಿತವ್ಯ ನಿಮ್ಮದು.

ತುಲಾ : ಕಾಲು ಚಾಚಿ ಕೂತುಕೊಂಡು ಆರ್ಡರ್‌ ಮಾಡಿದರೆ ಇವತ್ತು ಏನೂ ಆಗದು. ನಿಮ್ಮ ಕೆಲಸ ನೀವೇ ಮಾಡಿಕೊಳ್ಳೋದು ಒಳಿತು ಮಾರಾಯರೆ.

ವೃಶ್ಚಿಕ : ವ್ಯವಹಾರದ ಗೆಳೆಯ ಸಿಕ್ಕಾಪಟ್ಟೆ ಮುಚ್ಚಿಡುತ್ತಿದ್ದಾನೆ. ಬುದ್ಧಿ ಉಪಯೋಗಿಸಿ, ಅವನ್ನು ಹೆಕ್ಕಿದರೆ ಒಳಿತು. ಇಲ್ಲವಾದಲ್ಲಿ ಹಣ ಪೋಲಾಗುವ ಸಾಧ್ಯತೆ ಇದೆ.

ಧನಸ್ಸು : ಭಾಳ ಆತುರವಪ್ಪ ನಿಮಗೆ. ಸಮಾಧಾನವಾಗಿರಿ. ಫಟ್ಟಂಥ ಹೊಡೆಯೋದು ಸುಲಭ. ನಾಳೆ ಅದೇ ನಿಮಗೆ ತಿರುಗಿಸಿ ಹೊಡೆದರೆ ಆಗ ಮುಟ್ಟಿ ನೋಡಿಕೊಳ್ಳಬೇಕಾದೀತು.

ಮಕರ : ಕೆಲಸದ ನೆಪವೊಡ್ಡಿ ಮನೆ ಕೆಲಸಗಳಿಗೆ ಕಿಂಚಿತ್ತೂ ನೆರವಾಗದಿರುವುದೇ ಎಲ್ಲರೂ ನಿಮ್ಮ ಮೇಲೆ ಮುನಿಸಿಕೊಳ್ಳಲು ಕಾರಣ. ಸ್ವಲ್ಪ ಬಿಡುವು ಮಾಡಿಕೊಂಡು ಆ ಕೆಲಸಗಳನ್ನು ಮುಗಿಸಿಕೊಡಿ.

ಕುಂಭ : ನಿಮ್ಮ ಪ್ರಪಂಚವೇ ನಿಮಗೆ. ನೆಚ್ಚಿಕೊಂಡವರು ನೆನಪಿಗೇ ಬರೋದಿಲ್ಲ. ಪ್ರೀತಿಯ ಆ ಜೀವ ನೊಂದಿದೆ. ಮನವೊಲಿಸುವುದು ಸುಲಭವಲ್ಲ. ಹಾಗಂತ ಸುಮ್ಮನೆ ಕೂರಬೇಡಿ. ಎದ್ದೇಳಿ.

ಮೀನ : ಖಾಲಿ ಆಶ್ವಾಸನೆಗಳಿಂದ ಏನೂ ಗಿಟ್ಟದು. ನಿಮ್ಮ ಮೇಲೆ ಜನಕ್ಕೆ ತಂತಾನೇ ಭರವಸೆ ಹುಟ್ಟಬೇಕು. ಈ ನಿಟ್ಟಿನಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+