Get Updates
Get notified of breaking news, exclusive insights, and must-see stories!

ಎಲ್ಲ ರಸ್ತೆಗಳು ಅರಮನೆ ಮೈದಾನದತ್ತ,ಎಐಸಿಸಿ ಅಧಿವೇಶನ ಪ್ರಾರಂಭ

ಬೆಂಗಳೂರು : 81 ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಅಧಿವೇಶನ ಶನಿವಾರ ಬೆಳಿಗ್ಗೆ ಪ್ರಾರಂಭವಾಗಿದ್ದು, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಅಧಿವೇಶನ ನಡೆಯುತ್ತಿರುವ ಸ್ಥಳ ರಾಜೀವ್‌ಗಾಂಧಿ ನಗರ ತುಂಬಿ ತುಳುಕುತ್ತಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರಮುಖವಾಗಿ, ಅರಮನೆ ಮೈದಾನವನ್ನು ಸಂಪರ್ಕಿಸುವ ಸ್ಯಾಂಕಿ ರಸ್ತೆ , ಶೇಷಾದ್ರಿ ರಸ್ತೆ ಹಾಗೂ ರಾಜ ಭವನ ರಸ್ತೆಗಳು ವಾಹನದಟ್ಟಣೆಯಿಂದ ತುಂಬಿಹೋಗಿವೆ. ಅಧಿವೇಶನಕ್ಕೆ ವಿಶೇಷವಾದ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ.

ರಕ್ಷಣಾ ಒಪ್ಪಂದಗಳಲ್ಲಿನ ಆವ್ಯವಹಾರದ ಹಿನ್ನೆಲೆಯಲ್ಲಿ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಪಕ್ಷವು ತಾಳಬೇಕಾದ ನಿಲುವಿನ ಕುರಿತು ಅಧಿವೇಶನ ಚರ್ಚಿಸುವ ನಿರೀಕ್ಷೆಯಿದೆ. ಆಡಳಿತಾರೂಢ ಎನ್‌ಡಿಎ ಹಾಗೂ ಕಾಂಗ್ರೆಸ್‌ನ ಪ್ರಮುಖ ಎದುರಾಳಿ ಎಂದು ಭಾವಿಸಿರುವ ಬಿಜೆಪಿಯಲ್ಲಿ ಉಂಟಾಗಿರುವ ಅಸ್ಥಿರತೆಯಿಂದಾಗಿ ಕಾಂಗ್ರೆಸ್‌ ಪಾಳಯದಲ್ಲಿ ಅತ್ಯುತ್ಸಾಹ ಉಂಟಾಗಿದ್ದು , ಅದೇ ಉತ್ಸಾಹ ಅಧಿವೇಶನದಲ್ಲೂ ಕಾಣಿಸಿಕೊಂಡಿದೆ. ಅಧಿವೇಶನ ಸರಳವಾಗಿ ನಡೆಯುತ್ತದೆ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದ್ದರೂ, ಸದ್ಯದ ಉತ್ಸಾಹವನ್ನು ಗಮನಿಸಿದರೆ ಹಳೆಯ ಎಐಸಿಸಿ ಅಧಿವೇಶನಗಳ ಅದ್ದೂರಿತನ ಇಲ್ಲೂ ಕಾಣಿಸಿಕೊಂಡಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+