ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ದಿನ ಎಷ್ಟು ದೀರ್ಘ ಅನ್ನಿಸುವುದು ಖಂಡಿತಾ. ಗೆಳೆಯರೊಡನೆ ಮನಸ್ತಾಪ ಬೇಡ. ಅವರು ಮಾತಿನಲ್ಲೇ ಹೊಡೆಯುತ್ತಾರೆ. ದೇಹದ ಪೆಟ್ಟು ಬೇಗ ಮಾಯುತ್ತದಾದರೂ, ಮನಸ್ಸಿನ ಮೇಲಾಗುವ ಪೆಟ್ಟು ಇಷ್ಟಿಷ್ಟೇ ಕೊಲ್ಲುತ್ತದೆ ಎನ್ನುವ ಇತರರ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.ವೃಷಭ : ನೀವು ವೃಥಾ ಕೊರಗುತ್ತೀರಿ. ಹೊಳೆಯಲ್ಲಿ ಹರಿದ ನೀರಿನ ಬಗ್ಗೆ ಚಿಂತೆ ಬೇಡ. ಹೊಸ ಹುರುಪಿನಿಂದ ಕಾರ್ಯೋನ್ಮುಖರಾಗಿ, ದಿನವನ್ನು ಖುಷಿಯಾಗಿಸಿಕೊಳ್ಳಿ.
ಮಿಥುನ : ವ್ಯವಹಾರದ ಆರಂಭವಾದ್ದರಿಂದ ಲಾಭ ನಿಮ್ಮ ಕೈ ಹಿಡಿಯುತ್ತದೆ. ಯೋಚನೆ ಮಾಡದೇ ಯಾರಿಗೂ ಮಾತು ಕೊಡಬೇಡಿ.
ಕಟಕ : ನೋವಿಗೆ ಕಾಲವೇ ಮುಲಾಮು. ತಪ್ಪು ಕೆಲಸ ನಿಮ್ಮಿಂದ ಘಟಿಸಿಲ್ಲ ಎನ್ನುವುದೇ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಾಗಿಸುತ್ತದೆ.
ಸಿಂಹ : ನೀವು ಸರಾಗವಾಗಿ ಸುಳ್ಳು ಹೇಳಿದರೆ ಕೇಳಿಸಿಕೊಂಡವರು ನಂಬಬೇಕಲ್ಲ. ಅನುಭವ ನಿಮ್ಮನ್ನು ಇನ್ನೂ ಗಟ್ಟಿ ಮಾಡಿಲ್ಲ.
ಕನ್ಯಾ : ಅನಾರೋಗ್ಯ ಈಗೇನು ನಿಮಗೆ ತೊಂದರೆ ಕೊಡುತ್ತಿಲ್ಲ. ನೀವು ಗಂಭೀರರಾಗುವಷ್ಟು ದೊಡ್ಡ ಚಿಂತೆ ನಿಮ್ಮ ಮುಂದಿಲ್ಲ. ಸ್ನೇಹಿತರ ಸಲಹೆಯಿಂದ ಶುಭವಾಗುತ್ತದೆ. ಅನಿರೀಕ್ಷಿತವಾಗಿ ಬರುವ ನೆಂಟರು ಒಳ್ಳೆಯ ಸುದ್ದಿ ತರುತ್ತಾರೆ.
ತುಲಾ : ದೇವಸ್ಥಾನ, ಪುಣ್ಯ ಕಾರ್ಯಗಳಲ್ಲಿ ಮನಸ್ಸು ವ್ಯಸ್ತವಾಗಿರುವುದರಿಂದ ವ್ಯವಹಾರ, ಷೇರುಗಳತ್ತ ತಲೆ ಹಾಕಲು ಬಿಡುವು ಎಲ್ಲಿದೆ ಅಲ್ಲವೇ ? ಸದ್ಯಕ್ಕೆ ಕೋರ್ಟ್ ಮಟ್ಟಿಲು ತುಳಿಯಬೇಡಿ.
ವೃಶ್ಚಿಕ : ಸೋಮಾರಿಯಾಗುತ್ತಿದ್ದೀರಿ. ಮನೆಯಲ್ಲಿ ನಿಮಗೆ ಗದರಿಸುವವರು ಯಾರೂ ಇಲ್ಲ ಎಂಬ ವಿಷಯವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ.
ಧನಸ್ಸು : ಆಫೀಸಿನಲ್ಲಿ ಮೇಲಧಿಕಾರಿಯಿಂದ ಕಿರುಕುಳ ಇದೆ ಎಂದು ನೀವು ನರಳಬೇಕಾಗಿಲ್ಲ. ಸದ್ಯದಲ್ಲಿಯೇ ಶುಭ ಸುದ್ದಿ ಬರಬಹುದು. ತಾಂತ್ರಿಕ ವಿಭಾಗದವರಿಗೆ ಗೆಲುವಿದೆ.
ಮಕರ : ಸ್ನೇಹಿತರಿಂದ ಮನೆಯವರಿಂದ ಬರೇ ಪ್ರಶಂಸೆಯನ್ನೇ ನಿರೀಕ್ಷಿಸಿದರೆ ಹೇಗೆ ಸ್ವಾಮಿ ? ಆರೋಗ್ಯ ಹಾನಿ. ಶೀತ, ಕೆಮ್ಮು ಬಾಧೆ. ನಿಮ್ಮ ಸೃಜನ ಶೀಲತೆ ಮತ್ತೊಮ್ಮೆ ನಿಮ್ಮ ಸಹಾಯಕ್ಕೆ ಬರಲಿದೆ.
ಕುಂಭ : ಸುಲಲಿತವಾಗಿ ನಡೆಯುತ್ತಿದ್ದ ಕೆಲಸ ಕಾರ್ಯಗಳಿಗೆ ಕ್ಷಣಿಕ ಬ್ರೇಕ್ ಸಿಗಬಹುದು. ಆದರೂ ದೈವ ಬಲ ನಿಮ್ಮ ಕಡೆಗಿದೆ.
ಮೀನ : ನಿಮ್ಮ ಬಳಿ ವ್ಯವಹರಿಸುವುದೇ ಕಷ್ಟ ಎಂದು ಸ್ನೇಹಿತರು ನಿರ್ಧರಿಸುತ್ತಾರೆ. ಅವರ ಕಾಳಜಿಗೆ ನೀವು ಪ್ರಾಮಾಣಿಕರಾಗಿರಬೇಕು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications