Get Updates
Get notified of breaking news, exclusive insights, and must-see stories!

ಸದ್ಯಕ್ಕೆ ನಾಗರಹೊಳೆ ನ್ಯಾಷನಲ್‌ ಪಾರ್ಕ್‌ಗೆ ಪಿಕ್‌ನಿಕ್‌ ಇಟ್ಟುಕೊಳ್ಳಬೇಡಿ

ಬೆಂಗಳೂರು: ಬೇಸಿಗೆ ರಜೆ ಅಂತ ನೀವು ಸ್ನೇಹಿತರ ಗಡಣದೊಂದಿಗೆ ಸಣ್ಣ ಪುಟ್ಟ ಪಿಕ್‌ನಿಕ್‌ ಆಯೋಜಿಸುವ ಜೋಶ್‌ನಲ್ಲಿದ್ದೀರಿ ಅಲ್ವಾ ? ಬೆಂಗಳೂರಿನ ಹುಣಸೂರು ವಿಭಾಗದ ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ನೀವು ಹೋಗುವ ಯೋಚನೆ ಸದ್ಯಕ್ಕೆ ಕೈ ಬಿಡಿ.

ನೆತ್ತಿ ಮೇಲಿನ ಬಿಸಿಲು ಸುಡಲಾರಂಬಿಸಿ, ಕಾಳ್ಗಿಚ್ಚಿನ ಭಯದಲ್ಲಿರುವ ನಾಗರಹೊಳೆ ಅಭಯಾರಣ್ಯದಲ್ಲಿ ಪ್ರವಾಸಿಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ರಿಲ್ಯಾಕ್ಸ್‌ಗೆಂದೇ ಪಿಕ್‌ನಿಕ್‌ ಹಮ್ಮಿಕೊಂಡು ಪಾರ್ಕಿಗೆ ಬರುವ ಪ್ರವಾಸಿಗಳು ಕಿರ್ರನೆ ಬೆಂಕಿ ಕಡ್ಡಿ ಗೀರಿ ಸಿಗರೇಟು ಹಚ್ಚಿ ಗುನುಗುತ್ತಾ ಮುಂದೆ ನಡೆಯುವಾಗ ಕಾಡ್ಗಿಚ್ಚಿನ ಕೆನ್ನಾಲಗೆ ಬೆಳೆದರೆ ಏನು ಗತಿ ಅಲ್ವೇ?

ಈ ನಿಷೇಧ ತಾತ್ಕಾಲಿಕವಾದುದು ಎಂದು ಹುಣಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ. ಅಣ್ಣಯ್ಯ ಹೇಳಿದ್ದಾರೆ. ಕಾಡ್ಗಿಚ್ಚು ಹಬ್ಬಲು ಯಾರಾದರೂ ಬೆಂಕಿ ಪೊಟ್ಟಣ ಗೀರಬೇಕೆಂದೇ ಇಲ್ಲವಲ್ಲ . ಆದ್ದರಿಂದ ಅರಣ್ಯ ಮತ್ತು ವನ್ಯ ಪ್ರಾಣಿಗಳ ರಕ್ಷಣೆಗೋಸ್ಕರ ಮುಂಜಾಗರೂಕತೆಯ ಕ್ರಮವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ವಾಹನಗಳಲ್ಲಿ ಓಡಾಡುತ್ತಿರುತ್ತಾರೆ. ಇದರಿಂದ ಟಿಕೇಟು ನೀಡಿ ಪಾರ್ಕಿನೊಳಗೆ ಬರುವ ಪ್ರವಾಸಿಗರಿಗೆ ತೊಂದರೆಯಾಗಬಹುದು . ಅಲ್ಲದೆ ಉದ್ಯಾನವನದಲ್ಲಿ ತಂಗಲು ಅವಕಾಶ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ರಾಷ್ಟ್ರೀಯ ಉದ್ಯಾನವನದ ಗೇಟನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಅಣ್ಣಯ್ಯ ಹೇಳಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+