Get Updates
Get notified of breaking news, exclusive insights, and must-see stories!

ಮೋಡದ ಮರೆಯಲ್ಲಿ ಏರಿದ ಧಗೆ

ಬೆಂಗಳೂರು : ಬೆಂಗಳೂರಿನಲ್ಲಿ ಬುಧವಾರ ಸಂಜೆ ಮೋಡ ಮುಸುಕಿತು. ಮನೆಯ ಮುಂದೆ ನೀರು ಚುಮುಕಿಸುವಂತೆ ಒಂದು ಅಥವಾ ಎರಡು ಹನಿ ಮಳೆಯೂ ಬಿತ್ತು. ಬೆಳಗ್ಗಿನಿಂದಲೂ ಮೋಡಗಳ ಮರೆಯಲ್ಲೇ ಸುಡುತ್ತಿದ್ದ ಸೂರ್ಯನಿಂದ ಚೆನ್ನಾಗಿ ಕಾದಿದ್ದ ಭೂಮಿಯ ಮೇಲೆ ಬಿದ್ದ ಮಳೆಯಿಂದ ಧಗೆ ಹೆಚ್ಚಿತ್ತು.

ಕಳೆದ ಒಂದೆರಡು ದಿನದಿಂದ ರಾಜ್ಯದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಗುರವಾಗಿ ಬಿದ್ದ ಮಳೆಗೆ ಬುಧವಾರ ವಿಶ್ರಾಂತಿ. ಈ ಮಧ್ಯೆ ರಾಜ್ಯದಲ್ಲಿ ಒಣಹವೆ ಮುಂದುವರಿದಿತ್ತು. ಕರಾವಳಿ, ಉತ್ತರ ಒಳನಾಡಿನದಲ್ಲಿ ಗರಿಷ್ಠ ತಾಪಮಾನದಲ್ಲಿ ಅಲ್ಪಬದಲಾವಣೆ ಆಗಿತ್ತು. ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯ ಮಟ್ಟದಲ್ಲಿತ್ತು.

ಕನಿಷ್ಠ ತಾಪಮಾನದಲ್ಲೂ ಬದಲಾವಣೆ ಆಗಿದ್ದು, ಕರಾವಳಿಯ ಕೆಲವೆಡೆ ಅದು, ಸಾಮಾನ್ಯಮಟ್ಟಕ್ಕಿಂತ ಕಡಿಮೆ ಇತ್ತು. ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ರಾಜ್ಯದ ಅತಿ ಹೆಚ್ಚು ತಾಪಮಾನ 38.3 ಡಿಗ್ರಿ ಸೆಲ್ಸಿಯಸ್‌ ರಾಯಚೂರಿನಲ್ಲೂ, ಅತಿ ಕಡಿಮೆ ತಾಪಮಾನ ಬೆಳಗಾವಿ ವಿಮಾನ ನಿಲ್ದಾಣದಲ್ಲಿ (12.8) ದಾಖಲಾಗಿದೆ.

ಮುನ್ಸೂಚನೆಯಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡವಿದ್ದು ಹಗಲಿನ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ ಹಾಗೂ ರಾತ್ರಿಯ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+