Get Updates
Get notified of breaking news, exclusive insights, and must-see stories!

ಚೆನ್ನೈ ಟೆಸ್ಟ್‌ ತಂಡ

ಕೋಲ್ಕತ : ಶ್ರೀನಾಥ್‌ ಪುನರಾಗಮನ. ವೆಂಕಿಗೆ ಕೊಕ್‌. ವೆಂಕಟಪತಿ ರಾಜು ಮನೆಗೆ. ನೆಹ್ರ ಬದಲಿಗೆ ಸಾಯಿರಾಜ್‌ ಬಹುತುಲೆ. ರಾಜು ಜಾಗೆಗೆ ನೀಲೇಶ್‌ ಕುಲಕರ್ಣಿ. ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ ಕ್ರಿಕೆಟ್‌ಗೆ ಆಯ್ಕೆ ಮಂಡಳಿ ಗುರುವಾರ ಪ್ರಕಟಿಸಿರುವ ತಂಡದಲ್ಲಿ ಆಗಿರುವ ಸ್ವಾಗತಾರ್ಹ ಬದಲಾವಣೆಗಳಿವು.

ಗುರುವಾರ ಭಾರತ ಆ್ಯಸೀಸ್‌ ವಿರುದ್ಧ 171 ರನ್‌ಗಳ ರೋಮಾಂಚಕ ವಿಜಯ ದಾಖಲಿಸಿದ ನಂತರ ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮೊನ್ನೆ ರಣಜಿ ಪಂದ್ಯದಲ್ಲೂ ಮಿಂಚಿರುವ ಕರ್ನಾಟಕದ ಆಲ್‌ರೌಂಡರ್‌ ಜೋಷಿ ಮಾತ್ರ ಇನ್ನೂ ಆಯ್ಕೆದಾರರ ಗಮನಕ್ಕೆ ಬಾರದಿರುವುದು ವಿಷಾದದ ಸಂಗತಿ. ವೆಂಕಟಪತಿ ರಾಜು ಅವರನ್ನು ಮನೆಗೆ ಕಳುಹಿಸಿದ್ದು ಸ್ವಾಗತಾರ್ಹ. ಅಂತೆಯೇ ಲೆಗ್‌ ಸ್ಪಿನ್ನರ್‌ ಸಾಯಿರಾಜ್‌ ಬಹುತುಲೆಗೆ ಅವಕಾಶ ಕೊಟ್ಟಿರುವುದೂ ಆಯ್ಕೆಯಲ್ಲಿನ ಉತ್ತಮ ಬದಲಾವಣೆ. 2ನೇ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ವಿಕೆಟ್‌ ಕೀಪರ್‌ ಮೊಂಗಿಯಾರನ್ನು ಮನೆಗೆ ಕಳುಹಿಸಿ, ವಿಜಯ್‌ ದಾಹಿಯಾ ಅವರನ್ನು ಆಯ್ಕೆ ಮಾಡಿದ್ದರೆ ಅದೊಂದು ಉತ್ತಮ ಆಯ್ಕೆಯಾಗುತ್ತಿತ್ತು.

ಹದಿನಾಲ್ಕು ಮಂದಿಯ ತಂಡ ಇಂತಿದೆ- ಸೌರವ್‌ ಗಂಗೂಲಿ (ನಾಯಕ), ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ವಿವಿಎಸ್‌ ಲಕ್ಷ್ಮಣ್‌, ಶಿವಸುಂದರ್‌ ದಾಸ್‌, ಶಡಗೋಪನ್‌ ರಮೇಶ್‌, ನಯನ್‌ ಮೊಂಗಿಯಾ (ವಿಕೆಟ್‌ ಕೀಪರ್‌), ಜಾವಗಲ್‌ ಶ್ರೀನಾಥ್‌, ಜಹೀರ್‌ ಖಾನ್‌, ಹರ್ಭಜನ್‌ ಸಿಂಗ್‌, ಸಾಯಿರಾಜ್‌ ಬಹುತುಲೆ, ನೀಲೇಶ್‌ ಕುಲಕರ್ಣಿ, ಹೇಮಾಂಗ್‌ ಬದಾನಿ ಮತ್ತು ಶರಣ್‌ದೀಪ್‌ ಸಿಂಗ್‌.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+