ಜೂನ್ ಒಳಗೆ ನಿಮ್ಮ ಮದುವೆಯಾ ? ಈ ವಿಳಾಸ ಸಂಪರ್ಕಿಸಿ
ಬೆಂಗಳೂರು : ಮಾರ್ಚ್ 1 ರಿಂದ ಜೂನ್ 30 ರೊಳಗೆ ನಿಮ್ಮ ಮದುವೆ ನಡೆಯುವಂತಿದ್ದರೆ, ಈ ಉಡುಗೊರೆ ಪಡೆಯಲು ನೀವು ಅರ್ಹರು. ರಾಮಕ್ಕ ಪದ್ಮಕ್ಕ ಸೇವಾನಿಧಿ ನವ ದಂಪತಿಗಳಿಗೆ ಜೀವನ ಪೂರ್ತಿ ಜೊತೆಯಲ್ಲಿಟ್ಟುಕೊಳ್ಳಬಹುದಾದ ಉಡುಗೊರೆ ಕೊಡಲು ನಿರ್ಧರಿಸಿದೆ.
ನವ ದಂಪತಿಗಳಿಗೆಂದೇ ಪ್ರೀತಿಯಿಂದ ಆರಿಸಲಾದ ಪ್ರಸಿದ್ಧ ಲೇಖಕರ 30 ಪುಸ್ತಕಗಳನ್ನು , ಸೂಚಿತ ಅವಧಿಯಲ್ಲಿ ಮದುವೆಯಾದ ದಂಪತಿಗಳಿಗೆ ನೀಡಲಾಗುವುದು. ಪುಸ್ತಕಗಳೊಂದಿಗೆ ತಪ್ಪದೇ ಇರುತ್ತದೆ ಶುಭಾಶಯ . ನೀವು ಪುಸ್ತಕ ದ್ವೇಷಿಗಳಾದಲ್ಲಿ , ಹುಟ್ಟುವ ಮಕ್ಕಳೂ ಪುಸ್ತಕ ದ್ವೇಷಿಗಳೆಂದು ನಂಬಲಾಗುತ್ತದಾ?
ಸಂಗಾತಿಯಾಂದಿಗೆ ಕಿರಿಕಿರಿ ಉಂಟಾದ ಸಂದರ್ಭಗಳಲ್ಲಿ ಪುಸ್ತಕ ಸಂಗಾತಿಯಾಗಲಿ ಅನ್ನುವುದು ಸೇವಾನಿಧಿಯ ಉದ್ದೇಶವಿರಲಾರದು. ಬದಲಿಗೆ ಯುವ ಜನತೆಯಲ್ಲಿ ಪುಸ್ತಕ ಪ್ರೇಮ ಮೂಡಿಸುವುದು ಅವರ ಆಶಯ. ಇಂಥಹ ಪುಸ್ತಕ ಪ್ರೀತಿಯ ಅನೇಕ ಕೆಲಸಗಳನ್ನು ರಾಮಕ್ಕ ಪದ್ಮಕ್ಕ ಸೇವಾನಿಧಿ ಹಲವಾರು ವರ್ಷಗಳಿಂದ ಹಮ್ಮಿಕೊಳ್ಳುತ್ತಿದೆ. ಅಂದಹಾಗೆ, ದಂಪತಿಗಳಿಗೆ ಉಡುಗೊರೆಯಾಗಿ ಸಿಗುವ ಪುಸ್ತಕಗಳಲ್ಲಿ ಸುಖ ಸಂಸಾರಕ್ಕೆ 12 ಸೂತ್ರಗಳು ಪುಸ್ತಕ ಇರುತ್ತದೋ ಇಲ್ಲವೋ ಅನ್ನುವ ಬಗ್ಗೆ ಸೇವಾನಿಧಿಯ ಪ್ರಕಟಣೆ ಏನನ್ನೂ ಹೇಳಿಲ್ಲ .
ಸಂಪರ್ಕಿಸುವ ವಿಳಾಸ ರಾಮಕ್ಕ ಪದ್ಮಕ್ಕ ಸೇವಾನಿಧಿ, 447, 11 ನೆಯ ಮುಖ್ಯರಸ್ತೆ , ಪದ್ಮನಾಭ ನಗರ, ಬೆಂಗಳೂರು - 560 070.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications