Get Updates
Get notified of breaking news, exclusive insights, and must-see stories!

ನೀರಾ: ಅರಸಿಕೆರೆಯಲ್ಲಿ ಅಬ್ಕಾರಿಕಾರ್ಯಾಚರಣೆ ವಿರೋಧಿಸಿ ರೈತರ ಪ್ರತಿಭಟನೆ

ಹಾಸನ : ಅರಸೀಕೆರೆ ತಾಲ್ಲೂಕಿನ ಕೋಡಿ ಹಳ್ಳಿ, ಪುರಲೇ ಹಳ್ಳಿ ಮತ್ತು ಹರಪ್ಪನ ಹಳ್ಳಿಯ ತೆಂಗಿನ ತೋಟಗಳಲ್ಲಿ ಇಳಿಸುತ್ತಿದ್ದ ನೀರಾ(ಸೇಂದಿ)ಯನ್ನು ನಾಶ ಮಾಡಲು ಅಬಕಾರಿ ಇಲಾಖೆಯವರು ಬುಧವಾರ ದಾಳಿ ನಡೆಸಿದ್ದು ರೈತರು ಪ್ರತಿಭಟಿಸಿದಾಗ ನಡೆದ ಘರ್ಷಣೆಯಲ್ಲಿ ಪೊಲೀಸರು ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ.

ಸುಮಾರು 30ಕ್ಕೂ ಹೆಚ್ಚು ವಾಹನಗಳಲ್ಲಿ ಅಬ್ಕಾರಿ ಇಲಾಖೆ ಸಿಬ್ಬಂದಿ ಏಕಾಏಕಿ ತೆಂಗಿನ ತೋಟಗಳಿಗೆ ನುಗ್ಗಿ ದಾಳಿ ಮಾಡಿದರು. ಈ ಸಂದರ್ಭದಲ್ಲಿ ನೀರಾ ಇಳಿಸಲು ಮರಗಳ ಮೇಲೆ ಏರಿದ್ದ ರೈತರು ತಕ್ಷಣವೇ ಕೆಳಗೆ ಬಿದ್ದು ಸಾಯುವುದಾಗಿ ಬೆದರಿಸಿದಾಗ ಪೊಲೀಸರು ಅವರ ಮನವೊಲಿಸಿ ಕೆಳಗಿಳಿಯುವಂತೆ ಮಾಡಿ ನಂತರ ಒಟ್ಟು 127 ಮಂದಿ ರೈತರನ್ನು ಬಂಧಿಸಿದರು.

ರೈತರನ್ನು ಬಂಧನದ ನಂತರ ಮತ್ತೆ ಪುರಲೇ ಹಳ್ಳಿ ಮತ್ತು ಹರಪ್ಪನ ಹಳ್ಳಿಗಳಿಗೆ ತೆರಳಿದ ಪೊಲೀಸರು ನೀರಾ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿದಾಗ ಅಲ್ಲಿನ ರೈತರು ಮತ್ತು ಮಹಿಳೆಯರು ರೊಚ್ಚಿಗೆದ್ದು ಕಲ್ಲು ತೂರಾಟ ಆರಂಭಿಸಿದರು. ಪರಿಸ್ಥಿತಿಯ ನಿಯಂತ್ರಣಕ್ಕೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಘಟನೆಯಲ್ಲಿ ದೇವರಾಜ, ಸುಬ್ಬಣ್ಣ, ಸಾವಿತ್ರಮ್ಮ, ರಾಜಮ್ಮ, ಗೌರಮ್ಮ, ತಿಮ್ಮೇಗೌಡ, ಅಶೋಕ ಮತ್ತು ವೆಂಕಟಪ್ಪ ಎಂಬ ರೈತರು ಗಾಯಗೊಂಡು ಅರಸಿಕೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಂಧಿಸಿದ್ದ ರೈತರನ್ನು ಬಿಡುಗಡೆ ಮಾಡಿದ ತಕ್ಷಣ ತಮ್ಮ ಹಳ್ಳಿಯಲ್ಲಿ ನಡೆದ ಘಟನೆಯನ್ನು ಪ್ರತಿಭಟಿಸಿ ರೈತರು ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದ್ದರು. ಕೋಡಿ ಹಳ್ಳಿ, ಪುರಲೇ ಹಳ್ಳಿ ಮತ್ತು ಹರಪ್ಪನ ಹಳ್ಳಿಯ ಸುತ್ತ ಮುತ್ತ ಬಿಗುವಿನ ವಾತಾವರಣ ಇದ್ದು, ಬಿಗಿ ಪೊಲೀಸ್‌ ಪಹರೆ ನೆಮಿಸಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+