ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳನಾಡಿನಲ್ಲಿ ಮಳೆಯ ನಿರೀಕ್ಷೆ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಒಂದೆರಡು ಹನಿ ಮಳೆ ಬಿದ್ದು, ಸೆಕೆ ಹೆಚ್ಚಿತ್ತು. ಬುಧವಾರ ಭಾಗಶಃ ಮೋಡ ಮುಸುಕಿತ್ತು. ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆಗಿದೆ. ಉಳಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಗರಿಷ್ಠ ಉಷ್ಣಾಂಶ ಕೆಲವೆಡೆ ಏರಿದ್ದರೆ, ಬಹುತೇಕ ಕಡೆಗಳಲ್ಲಿ ಸಾಮಾನ್ಯ ಮಟ್ಟದಲ್ಲಿತ್ತು .

ರಾಜ್ಯದ ಗರಿಷ್ಠ ಉಷ್ಣಾಂಶ ಗುಲ್ಬರ್ಗಾದಲ್ಲೂ ಅತಿ ಕಡಿಮೆ ಉಷ್ಣಾಂಶ ಬೆಳಗಾವಿಯಲ್ಲೂ ದಾಖಲಾಗಿದೆ. ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಅಥವಾ ಗುಡುಗಿನಿಂದ ಕೂಡಿದ ಹಗುರ ಮಳೆ ಬೀಳುವ ಸಂಭವವೂ ಇದೆ. ಉಳಿದಂತೆ ರಾಜ್ಯದ ಬಹುತೇಕ ಎಲ್ಲೆಡೆ ಒಣಹವೆ ಮುಂದುವರಿಯಲಿದೆ.

ಸ್ಥಳೀಯ ಹವಾಮಾನ ಮುನ್ಸೂಚನೆಯ ಪ್ರಕಾರ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇದ್ದು ಸಂಜೆ ಅಥವಾ ರಾತ್ರಿ ಹಗುರ ಮಳೆ ಆಗಲಿದೆ. ಗರಿಷ್ಠ ಉಷ್ಣಾಂಶ 32 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಇರಲಿದೆ ಎನ್ನುತ್ತದೆ ಹವಾಮಾನ ಇಲಾಖೆಯ ವರದಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X