ಆಸ್ಟ್ರೇಲಿಯಾದ ಲಕ್ಷ್ಮಣರೇಖೆ ಮೀರಿದ ಲಕ್ಷ್ಮಣ್ ಅಮೋಘ ದ್ವಿಶತಕ
ಕೋಲ್ಕತ : ಆಸ್ಟ್ರೇಲಿಯಾದ ಗೆಲುವಿನ ಆಸೆಗೆ ತಣ್ಣೀರೆರುಚುತ್ತಿರುವ ವಿವಿಎಸ್ ಲಕ್ಷ್ಮಣ್ ಹಾಗೂ ಕಲೆಗಾರ ದ್ರಾವಿಡ್ ಭಾರತದ ಬ್ಯಾಟಿಂಗನ್ನು ಜೀವಂತವಾಗಿರಿಸಿದ್ದಾರೆ. ಲಕ್ಷ್ಮಣ್, ಅಂತರರಾಷ್ರೀಯ ಟೆಸ್ಟ್ ಕ್ರಿಕೆಟ್ಟಿನಲ್ಲಿ ತಮ್ಮ ಮೊದಲ ದ್ವಿಶತಕ ದಾಖಲಿಸಿದರೆ, ದ್ರಾವಿಡ್ ಶತಕದ ಗಡಿ ಮುಟ್ಟಲು ಇನ್ನು ಮೂರೇ ಗೇಣು.
ಲಕ್ಷ್ಮಣ್ ಅವರ ದ್ವಿಶತಕ (200) 35 ಬೌಂಡರಿಗಳನ್ನು ಒಳಗೊಂಡಿದೆ. 89 ರನ್ನುಗಳನ್ನು ಗಳಿಸಿರುವ ದ್ರಾವಿಡ್ 13ಬೌಂಡರಿಗಳನ್ನು ಬಾರಿಸಿದ್ದಾರೆ. 4 ವಿಕೆಟ್ ನಷ್ಟಕ್ಕೆ 471 ರನ್ನುಗಳನ್ನು ಗಳಿಸಿರುವ ಭಾರತ ಪ್ರಸ್ತುತ 171 ರನ್ನುಗಳ ಮುನ್ನಡೆ ಗಳಿಸಿದೆ.
ಮಂಗಳವಾರ ಆಸ್ಟ್ರೇಲಿಯಾ ಮೊತ್ತಕ್ಕಿಂತ 20 ರನ್ಗಳಿಂದ ಹಿಂದುಳಿದಿದ್ದ ಭಾರತ, ಬುಧವಾರ ಭರವಸೆಯ ಆರಂಭ ಕಂಡಿತು. ಗಿಲ್ಲೆಸ್ಪಿ ಎಸೆತಗಳನ್ನು ನೀರು ಕುಡಿದಷ್ಟೇ ಸಲೀಸಾಗಿ ಬೌಂಡರಿಗಟ್ಟಿದ ಲಕ್ಷ್ಮಣ್ ನಿಧಾನವಾಗಿ ಸಾಗುತ್ತಿದ್ದ ಆಟಕ್ಕೆ ವೇಗದ ತಿರುವು ಕೊಟ್ಟರು. ರನ್ ಗಳಿಸಲು ಪರದಾಡುತ್ತಿದ್ದರೂ, ಕ್ರೀಸಿಗೆ ಅಂಟಿಕೊಂಡಿದ್ದ ದ್ರಾವಿಡ್ ಕೂಡ ಆಟಕ್ಕೆ ಕುದುರಿಕೊಂಡರು. ಈ ಇಬ್ಬರೂ ಆಟಗಾರರು ಮೆಕ್ಗ್ರಾತ್ ಸೇರಿದಂತೆ ಆಸ್ಟ್ರೇಲಿಯಾದ ಎಲ್ಲಾ ಬೌಲರ್ಗಳಿಗೂ ಗಂಜಿ ಕುಡಿಸಿದರು.
(ಇನ್ಫೋ ವಾರ್ತೆ)
ದ್ವಿಶತಕದತ್ತ ಲಕ್ಷ್ಮಣ್, ಇನ್ನಿಂಗ್ಸ್ ಸೋಲಿಂದ ಪಾರಾದ ಭಾರತ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications