Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಆಫೀಸಿನಲ್ಲಿ ಹೊಸ ಕೆಲಸದ ವಾತಾವರಣ ಎನಿಸಿ ಹೊಸ ಮೂಡ್‌ನಲ್ಲಿರುತ್ತೀರಿ. ಮನೆಯವರೆಲ್ಲರೂ ದೇವತಾ ಕಾರ್ಯಗಳಲ್ಲಿ ಆಸಕ್ತರಾಗಿರುವುದರಿಂದ ನಿಮ್ಮ ಆಸಕ್ತಿ ಒತ್ತಟ್ಟಿಗಿಟ್ಟು ನೀವು ಕೆಲಸ ಮಾಡಿ.

ವೃಷಭ : ನಿಮ್ಮ ಬಿಸಿನೆಸ್‌ನಲ್ಲಿ ಆಗುತ್ತಿರುವ ಒಟ್ಟಾರೆ ಏರುಪೇರುಗಳಿಗೆ ಗ್ರಹಕೂಟಗಳೇ ಕಾರಣ. ಸದ್ಯದಲ್ಲಿಯೇ ದೊಡ್ಡ ಮೊತ್ತ ನಿಮ್ಮ ಕೈ ಸೇರಿದರೂ ಅಚ್ಚರಿಯಿಲ್ಲ. ಸ್ನೇಹಿತರು ಮತ್ತು ಬಾಂಧವರೆಲ್ಲಾ ಒಟ್ಟು ಸೇರುವ ದಿನ ಹತ್ತಿರವಿದೆ.

ಮಿಥುನ : ಕೋರ್ಟ್‌ ವ್ಯವಹಾರಗಳಲ್ಲಿ ಸದ್ಯಕ್ಕೆ ಜಯವಿಲ್ಲ. ಆದ್ದರಿಂದ ಅತ್ತ ಹೆಚ್ಚು ಗಮನ ಬೇಡ. ನಿಮ್ಮ ಅಧ್ಯಯನ ಮತ್ತು ವ್ಯವಹಾರಗಳು ಕ್ಲಾಶ್‌ ಆಗದಿರಲಿ.

ಕಟಕ : ಮನೆಯಲ್ಲಿ ಮಕ್ಕಳಿಂದ ಶುಭ ವಾರ್ತೆ ನಿರೀಕ್ಷಿಸಬೇಕಾದ ಸಮಯದಲಿ ್ಲ ಸುಮ್ಮನೇ ಮುನಿಸು ಬೇಡ. ಕಾರ್ಯ ಸಾಧನೆಯಿಂದ ಉಲ್ಲಸಿತರಾಗುತ್ತೀರಿ. ಬರಬೇಕಿರುವ ಮುಂಗಡ ಹಣವೇನಾದರೂ ಬಂದಲ್ಲಿ ಮನೆಯಲ್ಲಿ ಇಂದೇ ಹಬ್ಬ.

ಸಿಂಹ : ನಿಮ್ಮ ಸ್ವ ಪ್ರಲಾಪದಿಂದಾಗಿ ರೋಸಿ ಹೋಗಿರುವ ಬಂಧುಗಳು ಮತ್ತು ಸ್ನೇಹಿತರ ಬಗ್ಗೆ ನೀವೇ ಬೇಸರ ಮಾಡಿಕೊಳ್ಳುವಂತಿಲ್ಲ. ನೀವು ಬದಲಾಗುವುದನ್ನೇ ಅವರು ಕಾಯುತ್ತಿರುತ್ತಾರೆ.

ಕನ್ಯಾ : ಸ್ಪೋಟ್ಸ್‌ ರ್ ಫೀಲ್ಡ್‌ನವರಿಗೆ ಶುಭವಿದೆ. ಗೆಲುವು ನಿಮ್ಮತ್ತ ಬರುವ ನಿರೀಕ್ಷೆ ಇರುವುದರಿಂದ ಅವಕಾಶಗಳು ಬಂದರೆ ಹಿಂಜರಿಯಬೇಡಿ. ಮತ್ತೆ ದ್ರವ್ಯ ನಷ್ಟದ ಭಯ ನಿಮಗಿದೆ.

ತುಲಾ : ಪ್ರಯಾಣ ಯೋಗವಿದೆ. ಮನೆ ಮಂದಿಯಾಂದಿಗೆ ದೂರ ಹೋಗುವಾಗ ಇರುವ ಖುಷಿಯ ಜೊತೆಗೆ ಜೇಬು ಖಾಲಿಯಾಗುವ ಭಯವಿರುವುದರಿಂದ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ.

ವೃಶ್ಚಿಕ : ಸಿಟ್ಟು ಮುನಿಸುಗಳು ನಿಮಗಿಷ್ಟವಾ ? ಸಹವಾಸ ದೋಷದಿಂದ ಹೆಚ್ಚು ಜಂಭ ಮಾಡುತ್ತಿರುವ ಹಾಗೆ ಕಾಣುತ್ತಿದೆ. ನಿಮಗೆ ದಕ್ಕಿರುವ ಮಾನ ಸಮ್ಮಾನಗಳ ವಿಷಯವನ್ನು ಹೇಳಿ ಮನೆಯವರನ್ನೂ ಖುಷಿಯಾಗಿರಿಸಿ.

ಧನಸ್ಸು : ನಿಮ್ಮ ಆರೋಗ್ಯ ಸುಧಾರಿಸುತ್ತಿದೆ. ಆದ್ದರಿಂದ ಹೆಚ್ಚು ಭಯ ಬೀಳಬೇಕಾಗಿಲ್ಲ . ಸಜ್ಜನರ ಸಹವಾಸ ಲಾಭದಿಂದ ಹೊಸ ವಿಷಯಗಳತ್ತ ಗಮನ ಹರಿಸುತ್ತೀರಿ.

ಮಕರ : ಬಂಧುಗಳೊಂದಿಗೆ ಜಗಳಕ್ಕಾಗಿ ಕಾಲು ಕೆರೆಯುವುದನ್ನು ನಿಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೀರಾ ? ಒಳ್ಳೆ ಯೋಚನೆ. ನೀವು ಮಾಡಬೇಕಾದ ಕೆಲಸಗಳು ತುಂಬಾ ಇರುವುದರಿಂದ ಸೀರಿಯ್ಸಾಗಿರಿ.

ಕುಂಭ : ನೀವು ಸುತ್ತಾಡುವುದನ್ನು ಹೆಚ್ಚಿಸಿಕೊಂಡಿದ್ದೀರಿ. ಆದ್ದರಿಂದ ಜೇಬಿನಲ್ಲಿ ಹಣ ನಿಲ್ಲುವುದಿಲ್ಲ . ಕಲಿಕೆಯ ಮಾರ್ಗವನ್ನು ಕೈ ಬಿಟ್ಟು ತುಂಬಾ ದಿನಗಳಾಗಿವೆ. ಮತ್ತೆ ಆರಂಭಿಸಲು ಇದು ಸುಸಮಯ.

ಮೀನ : ಕಂಕಣಭಾಗ್ಯ ಹತ್ತಿರದಲ್ಲೇ ಇದೆ. ಈಗಾಗಲೇ ಒಮ್ಮೆ ಎಡವಿದ್ದೀರಿ. ಈ ಬಾರಿ ಎಚ್ಚರಾಗಿರಿ. ಇವತ್ತು ನೀವು ನಿರೀಕ್ಷಿಸದ ಮೂಲದಿಂದ ಧನಲಾಭವೂ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+