Get Updates
Get notified of breaking news, exclusive insights, and must-see stories!

ಹೊಸ ಇತಿಹಾಸ ಬರೆದ ವಿವಿಎಸ್‌ ಲಕ್ಷ್ಮಣ್‌

ಕೋಲ್ಕತ : ಸುನಿಲ್‌ ಗವಾಸ್ಕರ್‌, ವಿನೂ ಮಂಕಡ್‌, ವಿನೋದ್‌ ಕಾಂಬ್ಳಿ ಇವರೆಲ್ಲರ ದಾಖಲೆಗಳನ್ನು ಮುರಿದು, ಟೆಸ್ಟ್‌ ಕ್ರಿಕೆಟ್ಟಿನಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ಖ್ಯಾತಿಗೆ ವಿವಿಎಸ್‌ ಲಕ್ಷ್ಮಣ್‌ (ಅಜೇಯ 237, 40 ಬೌಂಡರಿ) ಪಾತ್ರರಾಗಿದ್ದಾರೆ.

ಭಾರತವನ್ನು ಇನ್ನಿಂಗ್ಸ್‌ ಸೋಲಿನಿಂದ ಪಾರು ಮಾಡಿದ ದ್ರಾವಿಡ್‌- ಲಕ್ಷ್ಮಣ್‌ ಜೋಡಿ ಈಗ ಗೆಲುವಿನ ವಾಸನೆಯನ್ನೂ ಹುಟ್ಟಿಸುತ್ತಿದೆ. ಐದನೇ ವಿಕೆಟ್‌ಗೆ 300 ರನ್‌ ಕಲೆ ಹಾಕಿರುವ ಈ ಜೋಡಿಯ ಮುರಿದ ಆಟ ಮುಂದುವರೆದಿದೆ.

ವಿಂಡೀಸ್‌ ವಿರುದ್ಧ 1983 (ಚೆನ್ನೈ) ರಲ್ಲಿ ಎರಡೂವರೆ ದಿನ ಕಣದಲ್ಲಿ ನಿಂತು ಆಡಿದ್ದ ಗವಾಸ್ಕರ್‌ 236 ರನ್‌ ಗಳಿಸಿದ್ದರು. ಇದು ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ದಾಖಲೆಯಾಗಿತ್ತು. ಗವಾಸ್ಕರ್‌ ಆಟದ ಗತಿಗೆ ಹೋಲಿಸಲೇ ಆಗದಂಥ ಆಕ್ರಮಣಕಾರಿ ಆಟವಾಡಿರುವ ಲಕ್ಷ್ಮಣ್‌ ಒಂದೂವರೆ ದಿನದಲ್ಲೇ ಆ ದಾಖಲೆಯನ್ನು ಮುರಿದಿದ್ದಾರೆ.

1956ರಲ್ಲಿ ವಿನೂ ಮಂಕಡ್‌ 231 ರನ್‌ ಗಳಿಸಿದ್ದು, ಅದು ಗವಾಸ್ಕರ್‌ ಮುನ್ನಾ ದಾಖಲೆಯಾಗಿತ್ತು.

ಪ್ರಥಮ ದರ್ಜೆ ಕ್ರಿಕೆಟ್ಟಿನಲ್ಲಿ ದ್ವಿಶತಕ ವೀರ ಎನಿಸಿರುವ ಲಕ್ಷ್ಮಣ್‌ ಈಗಾಗಲೇ ಒಂದು ತ್ರಿಶತಕ ಕೂಡ ದಾಖಲಿಸಿದ್ದಾರೆ. ಅಂತರರಾಷ್ಟ್ರೀಯ ಟೆಸ್ಟ್‌ ಪಂದ್ಯದಲ್ಲೂ ತ್ರಿಶತಕ ಗಳಿಸುವ ಎಲ್ಲಾ ಲಕ್ಷಣಗಳನ್ನೂ ಲಕ್ಷ್ಮಣ್‌ ತೋರಿದ್ದು, ಅದರತ್ತ ದಾಪುಗಾಲಿಟ್ಟಿದ್ದಾರೆ. ವಿಂಡೀಸ್‌ನ ಲಾರಾ ಗಳಿಸಿರುವ 375 ರನ್‌ಗಳ ದಾಖಲೆ ಕೂಡ ಲಕ್ಷ್ಮಣ್‌ ಮನಸ್ಸಿನಲ್ಲಿ ಅಲೆಯಾಡುತ್ತಿರಬಹುದು.

ಮತ್ತೊಂದು ತುದಿಯಲ್ಲಿ ವೈರಲ್‌ ಜ್ವರದಿಂದ ಬಳಲುತ್ತಿರುವ ದ್ರಾವಿಡ್‌ (ಅಜೇಯ 124) ಕಾಲು ಉಳುಕಿದ್ದು, ಅಂಥಾದರಲ್ಲೂ ರನ್ನರ್‌ ಸಹಾಯವಿಲ್ಲದೆ ಛಲ ಮೆರೆಯುತ್ತಿದ್ದಾರೆ. ಈಗ ಭಾರತದ ಸ್ಕೋರು 531/4. ಲಕ್ಷ್ಮಣ್‌ ಅಜೇಯ 248.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+