ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚ ಸ್ವೀ-ಕಾ-ರ : ಬಂಗಾರು ರಾಜೀನಾಮೆ, ಇಕ್ಕ-ಟ್ಟಿ-ನ-ಲ್ಲಿ ಕೇಂದ್ರ ಸರ್ಕಾ-ರ

By Staff
|
Google Oneindia Kannada News

ನವದೆಹಲಿ : ರಕ್ಷಣಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಬಂಗಾರು ಲಕ್ಷ್ಮಣ್‌ ಅವರು ಲಂಚ ಸ್ವೀಕರಿಸುತ್ತಿರುವ ವೀಡಿಯೋ ಚಿತ್ರಗಳನ್ನು ತೆಹಲ್ಕಾ ಡಾಟ್‌ ಕಾಮ್‌ ಮಂಗಳವಾರ ಬಹಿರಂಗ ಪಡಿಸಿ, ರಾಜ-ಕೀ-ಯ ವಲ-ಯ-ದ-ಲ್ಲಿ ಭಾರಿ ಕೋಲಾ-ಹ-ಲ ಎಬ್ಬಿ-ಸಿ-ದೆ.

ಈ ಹಿಂದೆ ಮ್ಯಾಚ್‌-ಫಿ-ಕ್ಸಿಂ-ಗ್‌ ಹಗ-ರ-ಣ-ಕ್ಕೆ ಹೊಸ ತಿರು-ವು ನೀಡಿ-ದ್ದ ಡಾಟ್‌ ಕಾಂ, -ರ-ಕ್ಷ-ಣಾ ಇಲಾ-ಖೆ-ಯ ವ್ಯವ-ಹಾ-ರ-ಕ್ಕೆ ಸಂಬಂ-ಧಿ-ಸಿ-ದ ಲಂಚ-ಗು-ಳಿ-ತ-ನ-ದ ಹಗ-ರ-ಣ ಬಯ-ಲಿ-ಗೆ-ಳೆ-ದ ಹಿನ್ನೆಲೆಯಲ್ಲಿ ಬಂಗಾರು ಲಕ್ಷ್ಮಣ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಿರೋ-ಧ ಪಕ್ಷ-ಗ-ಳು ವಾಜ-ಪೇ-ಯಿ ನೇತೃ-ತ್ವ-ದ ಸರ-ಕಾ-ರ-ದ -ರಾ-ಜೀ-ನಾ-ಮೆ-ಗೂ ಒತ್ತಾ-ಯಿ-ಸಿ-ದ್ದಾ-ರೆ.

ಈ ಪ್ರಕ-ರ-ಣ- ಕುರಿ-ತ ಮುಕ್ತ ಚರ್ಚೆ-ಗೆ ಸರ್ಕಾ-ರ ಸಿದ್ಧ ಎಂದು ಪ್ರಮೋ-ದ್‌ ಮಹಾ-ಜ-ನ್‌ ಹೇಳಿ-ಕೆ ನೀಡಿ-ದ್ದಾ-ರೆ. -ಜ-ಯಾ ಜೈಟ್ಲಿ, ರಕ್ಷ-ಣಾ ಇಲಾ-ಖೆ-ಯ ಹಿರಿ-ಯ ಅಧಿ-ಕಾ-ರಿ-ಗ-ಳ ಹೆಸ-ರು-ಗ-ಳೂ ಈ ಹಗ-ರ-ಣ-ದ-ಲ್ಲಿ ಪ್ರಸ್ತಾ-ಪ-ಕ್ಕೆ ಬಂದಿ-ವೆ. ತೆಹಲ್ಕಾ ವೆಬ್‌ ಸೈಟ್‌, ಬಂಗಾರು ಲಕ್ಷ್ಮಣ್‌ ಅವರು ಲಂಚ ಸ್ವೀಕರಿಸುತ್ತಿರುವುದನ್ನು ರಹಸ್ಯವಾಗಿ ಚಿತ್ರೀಕರಿಸಿರುವ ವಿಡಿಯೋ ಟೇಪನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಕೆಲವೇ ಗಂಟೆಗಳಲ್ಲಿ ಬಂಗಾರು ಲಕ್ಷ್ಮಣ್‌ ಅವರು ರಾಜೀನಾಮೆ ಸಲ್ಲಿಸಿ, ಪಕ್ಷದ ನಿಧಿಗಾಗಿ ತಾನು ಹಣ ಸ್ವೀಕರಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಕೆಲವೇ ಗಂಟೆ-ಗ-ಳ ನಂತರ ನಡೆದ ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ಬಂಗಾರು ಅವರು ಬಿಜೆಪಿ, ಕೇಂದ್ರ ಸರಕಾರ ಮತ್ತು ತಮ್ಮ ವರ್ಚಸ್ಸಿಗೆ ಕಳಂಕ ತರಲು ಹೂಡಿರುವ ರಾಜಕೀಯ ಸಂಚು ಇದು ಎಂದು ಹೇಳಿದ್ದಾರೆ. -ದ-ಲಿ-ತ-ರೊ-ಬ್ಬ-ರು ಬಿಜೆ-ಪಿ ಅಧ್ಯ-ಕ್ಷ-ರಾ-ಗಿ-ದ್ದ-ನ್ನು ಸಹಿ-ಸ-ಲಾ-ರ-ದ ಮಂದಿ ಹೂಡಿ-ರು-ವ ಷ-ಡ್ಯಂ-ತ್ರ ಇದು, ನಾನು ಯಾವು-ದೇ ತನಿ-ಖೆ ಎದು-ರಿ-ಸ-ಲು ಸಿದ್ಧ ಎಂದೂ ತಿಳಿ-ಸಿ-ದ್ದಾ-ರೆ.

ಈ ಹಗರಣವನ್ನು ಬಯಲಿಗೆಳೆಯಲು ತೆಹಲ್ಕಾ ಡಾಟ್‌ ಕಾಮ್‌ ವೆಸ್ಟ್‌ ಎಂಡ್‌ ಇಂಟರ್‌ ನ್ಯಾಷನಲ್‌ ಎಂಬ ಕಾಲ್ಪನಿಕ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಯನ್ನು ಹುಟ್ಟು ಹಾಕಿ ತನ್ನ ವರದಿಗಾರನೊಬ್ಬನನ್ನು ಉತ್ಪಾದಕನೆಂದು ಬಿಂಬಿಸಿತ್ತು. ಲಂಚದ ಮೂಲಕ ರಕ್ಷಣಾ ವ್ಯವಸ್ಥೆಯ ಗುಟ್ಟುಗಳನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದನ್ನು ಬಯಲಿಗೆಳೆಯುವುದು ನಮ್ಮ ಉದ್ದೇಶವಾಗಿತ್ತು ಎಂದು ತೆಹಲ್ಕಾ ಹೇಳಿದೆ.

ಪ್ರತಿಕ್ರಿಯೆಗಳು

ಜಾರ್ಜ್‌ ಫರ್ನಾಂಡಿಸ್‌ :ಪ್ರಕರಣಕ್ಕೆ ಸಂಬಂದಧಿಸಿದಂತೆ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರು ರಾಜೀನಾಮೆ ನೀಡಲು ಮುಂದಾಗಿದ್ದು, ಕೇಂದ್ರ ಸಚಿವ ಸಂಪುಟ ಅವರ ರಾಜೀನಾಮೆಯನ್ನು ನಿರಾಕರಿಸಿದೆ.

ಪ್ರಮೋದ್‌ ಮಹಾಜನ್‌ : ರಕ್ಷಣಾ ಇಲಾಖೆಯ ವ್ಯವಹಾರದಲ್ಲಿ ಲಂಚ ಪಡೆದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಸರಕಾರ ಸಿದ್ಧ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್‌ ಮಹಾಜನ್‌ ತಿಳಿಸಿದ್ದಾರೆ.

ಸೇನೆ : ರಕ್ಷಣಾ ಇಲಾಖೆಯ ಅಧಿಕಾರಿಗಳು ತೆಹಲ್ಕಾ ಡಾಟ್‌ ಕಾಮ್‌ ಚಿತ್ರೀಕರಿಸಿರುವ ವಿಡಿಯೋ ಟೇಪ್‌ಗಳ ಅಧ್ಯಯನ ನಡೆಸುತ್ತಿದ್ದು ಈ ಕುರಿತು ಸಂಸತ್ತಿನಲ್ಲಿ ಹೇಳಿಕೆ ನೀಡಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಈ ನಡುವೆ ಬ್ರಿಗೇಡಿಯರ್‌ ದರ್ಜೆಯ ಸೇನಾಧಿಕಾರಿಯಾಬ್ಬರು ಈ ಆರೋಪಗಳು ಆಧಾರ ರಹಿತವಾಗಿದ್ದು, ಈ ನಾಟಕವನ್ನು ಹೆಣೆದ ಡಾಟ್‌ ಕಾಮ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

ಹಗರಣ ಸುದ್ದಿ ಸಂಸತ್ತಿನಲ್ಲಿ ಪ್ರಸ್ತಾಪವಾದ ತಕ್ಷಣವೇ ಈ ಬಗ್ಗೆ ಸರಕಾರ ತಕ್ಷಣವೇ ಹೇಳಿಕೆ ನೀಡಬೇಕೆಂದು ಕಾಂಗ್ರೆಸ್‌ ಆಗ್ರಹಿಸಿದೆ. ಲಕ್ಷ್ಮಣ್‌ ಮತ್ತು ಜೈಟ್ಲಿ ಅವರ ಹೆಸರಿನ ಜೊತೆಗೆ ಸಮತಾ ಪಕ್ಷದ ರಾಷ್ಟ್ರೀಯ ಖಜಾಂಚಿ, ಜೆ.ಕೆ ಜೈನ್‌, ರಕ್ಷಣಾ ಖಾತೆಯ ಹೆಚ್ಚುವರಿ ಕಾರ್ಯದರ್ಶಿ, ಇಬ್ಬರು ಬ್ರಿಗೇಡಿಯರ್‌ಗಳು, ಒಬ್ಬ ಲೆಫ್ಟಿನೆಂಟ್‌ ಕರ್ನಲ್‌, ಕೆಲವು ನಿವೃತ್ತ ಸೇನಾಧಿಕಾರಿಗಳ ಹೆಸರನ್ನು ತೆಹಲ್ಕಾ ಬಹಿರಂಗಪಡಿಸಿದೆ. ಕರ್ನಾ-ಟ-ಕ-ದ ಶ್ರೀನಿ-ವಾ-ಸ ಪ್ರಸಾ-ದ್‌ ಹೆಸ-ರೂ ಪ-ರೋ-ಕ್ಷ-ವಾ-ಗಿ ಪ್ರಸ್ತಾ--ಪ-ವಾ-ಗಿ-ದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X