ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮಣ್‌- ದ್ರಾವಿಡ್‌ 352 ನಾಟೌಟ್‌, ಭಾರತ 589/4

By Staff
|
Google Oneindia Kannada News

ಕೋಲ್ಕತ : ಕೆಲ್ವಿನೇಟರ್‌ ರೆಫ್ರಿಜರೇಟರ್‌ ಜಾಹಿರಾತಿನಲ್ಲಿ ತಣ್ಣಗೆ ಕಾಣುವ ಆಸ್ಟ್ರೇಲಿಯನ್ನರ ಪಾಲಿಗೆ ಬುಧವಾರ (ಮಾರ್ಚ್‌ 14) ಬಿಸಿ ದಿನ. ಭೂಮಿಗೆ ಬೆವರಿಳಿಯಿತೇ ಹೊರತು ಒಂದೂ ವಿಕೆಟ್‌ ದಕ್ಕಲಿಲ್ಲ. ನಾಯಕ ಸ್ಟೀವ್‌ ವಾ ಹಾಗೂ ವಿಕೆಟ್‌ ಕೀಪರ್‌ ಗಿಲ್‌ಕ್ರಿಸ್ಟ್‌ ಉಳಿದಂತೆ ಎಲ್ಲರೂ ಬೌಲಿಂಗ್‌ ಟ್ರೆೃ ಮಾಡಿದರು. ವೈರಲ್‌ ಜ್ವರದಿಂದ ಬಳಲುತ್ತಿದ್ದರೂ ಛಲ ಬಿಡದ ದ್ರಾವಿಡ್‌ (19 ಬೌಂಡರಿಗಳಿದ್ದ ಅಜೇಯ 155) ಹಾಗೂ ಕಿಂಚಿತ್ತೂ ದಣಿಯದಂತೆ ಕಂಡ ದಾಖಲೆ ಬರೆದ ಲಕ್ಷ್ಮಣ್‌ (ಅಜೇಯ 275, 44 ಬೌಂಡರಿ) ಕಾಂಗರೂಗಳನ್ನು ಅಕ್ಷರಶಃ ಗೋಳುಹೊಯ್ದುಕೊಂಡರು. ಪರಿಣಾಮ ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ದಿನದಾಟ ಮುಗಿದಾಗ 4 ವಿಕೆಟ್‌ ನಷ್ಟಕ್ಕೆ 589 ರನ್‌ ಗಳಿಸಿತ್ತು. ನಾಲ್ಕನೇ ದಿನ ವಿಕೆಟ್‌ ಕಳೆದುಕೊಳ್ಳದೆ 335 ರನ್‌ ದೋಚಿದ್ದು ಭಾರತದ ಬ್ಯಾಟಿಂಗ್‌ ವಿಶೇಷ.

ಭಾರತ ಈಗ 315 ರನ್‌ಗಳ ಮುನ್ನಡೆ ಗಳಿಸಿದ್ದು, ಪಂದ್ಯ ರೋಚಕ ಮಟ್ಟ ತಲುಪಿದೆ. ಎರಡು ದಿನಗಳಿಂದ ಫೀಲ್ಡಿನಲ್ಲೇ ಬೆಂದು ಹೋಗಿರುವ ಕಾಂಗರೂಗಳಿಗೆ ಬಹುಶಃ ಕಳೆದೊಂದು ವರ್ಷದಿಂದ ಇಂಥಾ ಸವಾಲು ಸಿಕ್ಕಿರಲಿಕ್ಕಿಲ್ಲ. ಕಾಂಗರೂಗಳ ಗೆಲುವಿನೋಟಕ್ಕೆ ಕಡಿವಾಣ ಹಾಕುವಲ್ಲಿ ಭಾರತ ಯಶಸ್ವಿಯಾಗುತ್ತದೆಯೇ, ಕಾದುನೋಡಬೇಕು.

ರೈಟ್‌, ಯೂ ಆರ್‌ ರೈಟ್‌ : ಮೊದಲ ಇನ್ನಿಂಗ್ಸ್‌ನಲ್ಲಿ ಸಮಯಪ್ರಜ್ಞೆ ಮೆರೆದು 59 ರನ್‌ ಗಳಿಸಿದ ಲಕ್ಷ್ಮಣ್‌ ಮೇಲೆ ವಿಶ್ವಾಸ ಇಟ್ಟು, ಬ್ಯಾಟಿಂಗ್‌ ಸರತಿಯಲ್ಲಿ ಬಡ್ತಿ ನೀಡಿದ್ದಕ್ಕೆ ಭಾರತದ ಕೋಚ್‌ ಜಾನ್‌ರೈಟ್‌ಗೆ ಧನ್ಯವಾದಗಳು. ಒಂದು ರೀತಿಯಲ್ಲಿ ಈ ಸರತಿ ಬದಲಾವಣೆ ತಂತ್ರವೂ ಭಾರತಕ್ಕೆ ವರವಾಗಿದೆ. ಒಮ್ಮೆಲೇ ಅಂತರರಾಷ್ಟ್ರೀಯ ಕ್ರಿಕೆಟ್ಟಿಗೆ ಕಾಲಿಟ್ಟ ದ್ರಾವಿಡ್‌ ಹಾಗೂ ಲಕ್ಷ್ಮಣ್‌ ಸಮ ಸಾಮರ್ಥ್ಯ ಮೆರೆಯಲು ಇದೊಂದು ವೇದಿಕೆಯೂ ಆಯಿತು. ಲಕ್ಷ್ಮಣ್‌ಗೆ ಶುಭಾಶಯಗಳು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X