ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿಶತಕದತ್ತ ಲಕ್ಷ್ಮಣ್‌, ಇನ್ನಿಂಗ್ಸ್‌ ಸೋಲಿಂದ ಪಾರಾದ ಭಾರತ

By Staff
|
Google Oneindia Kannada News

V.V.S. Laxmanಕೊಲ್ಕತಾ : ಇಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್‌ ಟೆಸ್ಟ್‌ನಲ್ಲಿ ಭಾರತ ವಿರುದ್ಧ ಇನ್ನಿಂಗ್ಸ್‌ ಗೆಲುವು ಪಡೆವ ಆಸ್ಟ್ರೇಲಿಯಾದ ಕನಸು ನುಚ್ಚು ನೂರಾಯಿತು. ಹೆಬ್ಬಂಡೆಯಂತೆ ವಿಕೆಟ್‌ ಬಳಿ ನಿಂತ ವಿ.ವಿ.ಎಸ್‌. ಲಕ್ಷ್ಮಣ್‌ ಭೋಜನ ವಿರಾಮಕ್ಕೆ ಅಜೇಯ 171 ರನ್‌ ಗಳಿಸುವ ಮೂಲಕ ಭಾರತ, ಉತ್ತಮ ಹೋರಾಟದ ಮೊತ್ತ ಕಲೆ ಹಾಕುವ ಕುರುಹು ತೋರಿದ್ದಾರೆ.

ಲಕ್ಷ್ಮಣ್‌ಗೆ ಉತ್ತಮ ಬೆಂಬಲ ನೀಡುತ್ತಿರುವ ಕಲಾತ್ಮಕ ಆಟಗಾರ ಕನ್ನಡದ ಕುವರ ರಾಹುಲ್‌ ದ್ರಾವಿಡ್‌ ಅಜೇಯ 50 ರನ್‌ ಮಾಡಿ ಆಡುತ್ತಿದ್ದಾರೆ. ಇನ್ನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಲು 20 ರನ್‌ ಮಾಡಬೇಕಿದ್ದ ಭಾರತ ಬುಧವಾರ ಉತ್ತಮವಾಗೇ ಆಟ ಆರಂಭಿಸಿತು.

ಲಕ್ಷ್ಮಣ್‌ ಹಾಗೂ ದ್ರಾವಿಡ್‌ ಮನಮೋಹಕ ಬೌಂಡಿರಿಗಳ ಮೂಲಕ ಈಡನ್‌ ಗಾರ್ಡನ್‌ ಮೈದಾನದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ಇನ್ನಿಂಗ್ಸ್‌ ಸೋಲಿನ ದವಡೆಯಿಂದ ಪಾರಾದ ಮೇಲಂತೂ ಬಿಡು ಬೀಸಾಗಿ ಆಡಿದ ಈ ಇಬ್ಬರು ಆಸ್ಟ್ರೇಲಿಯಾ ಬೌಲರ್‌ಗಳಿಗೆ ಬೆವರು ಇಳಿಸಿದರು. ಅದರಲ್ಲೂ ಶೇನ್‌ ವಾರ್ನ್‌ ಅವರಂತೂ ಸಂಪೂರ್ಣ ತಲೆಕೆಡಿಸಿಕೊಂಡಿದ್ದು, ಅವರ ವರ್ತನೆಯಿಂದಲೇ ಕಂಡುಬಂತು.

ವಾರ್ನ್‌ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲ್‌ ಮಾಡಿದ 27 ಓವರುಗಳಲ್ಲಿ ಮೂರು ಮೇಡನ್‌ ಮಾಡಿದರಾದರೂ ಒಟ್ಟು 120 ರನ್‌ ನೀಡಿ ಒಂದು ವಿಕೆಟ್‌ ಪಡೆವ ಮೂಲಕ ದುಬಾರಿ ಬೌಲರ್‌ ಎನಿಸಿದರು. ದ್ರಾವಿಡ್‌ ಹಾಗೂ ಲಕ್ಷ್ಮಣ್‌ ವಾರ್ನ್‌ ಬೌಲಿಂಗ್‌ನಲ್ಲಿ ಸೊಗಸಾದ ಬೌಂಡರಿಗಳನ್ನು ಭಾರಿಸಿದರು.

ಭೋಜನ ವಿರಾಮದ ವೇಳೆಯಲ್ಲಿ ಭಾರತ 104 ಓವರುಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 376ರನ್‌ ಗಳಿಸಿದ್ದು, 102 ರನ್‌ಗಳ ಮುನ್ನಡೆ ಪಡೆದಿದೆ. ಉತ್ತಮ ಹೋರಾಟದ ಮೊತ್ತ ಕಲೆ ಹಾಕುವ ಎಲ್ಲ ಕುರುಹು ತೋರಿದೆ. ಲಕ್ಷ್ಮಣ್‌ ಅವರಂತೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಬಲ್ಲ ಸಮರ್ಥ ಬ್ಯಾಟ್ಸ್‌ಮನ್‌ ತಾವು ಎಂಬುದನ್ನು ನಿರೂಪಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೂಡ ಅರ್ಧ ಶತಕ ಪೂರೈಸಿದ್ದ ಅವರು, ಎರಡನೇ ಇನ್ನಿಂಗ್ಸ್‌ನಲ್ಲಿ ಒಂದೂವರೆ ಶತಕ ಪೂರೈಸಿದ್ದು, ದ್ವಿಶತಕ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇದು ಟೆಸ್ಟ್‌ನಲ್ಲಿ ಅತ್ಯಧಿಕ ಮೊತ್ತವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X