Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಧನಲಾಭ ನಿರೀಕ್ಷಿತವಾದರೂ ದಿನವಿಡೀ ಉಲ್ಲಾಸವಾಗಿರುತ್ತೀರಿ. ಓದು ಬರಹದಲ್ಲಿ ಹಿಂದೆ ಉಳಿಯುತ್ತೇನೆ ಎಂಬ ಭಯವಿದ್ದರೂ, ನಿಮ್ಮ ಶ್ರಮ ನಿಮ್ಮ ಮುಂದೆ ನಡೆಸುತ್ತದೆ.

ವೃಷಭ : ಕೊಟ್ಟ ಮಾತು ಉಳಿಸಿಕೊಳ್ಳಲು ಹೆಣಗುತ್ತೀರಿ. ನಿಮ್ಮ ಪ್ರಾಮಾಣಿಕತೆಯಿಂದಾಗಿ ಸ್ನೇಹಿತರು ನಿಮ್ಮನ್ನು ಹಚ್ಚಿಕೊಳ್ಳಲಾರಂಭಿಸುತ್ತಾರೆ. ಅವರ ಪ್ರೀತಿಯ ಬಗ್ಗೆ ಸಂಶಯ ಬೇಡ. ಪ್ರಯಾಣ ಹೊರಡುವ ದಿನ ಇನ್ನೂ ದೂರವಿದೆ.

ಮಿಥುನ : ಬ್ಯಾಂಕ್‌ ವ್ಯವಾಹರಗಳು ಇವತ್ತು ಸುಲಭವಾಗಿ ನೆರವೇರುತ್ತದೆ. ನಿಮ್ಮ ಓಡಾಡಟದಿಂದ ಮನೆ ಮಂದಿಯನ್ನೆಲ್ಲಾ ಆತಂಕಕ್ಕೀಡು ಮಾಡುತ್ತೀರಿ. ಸಿಡುಕಿದರೆ ವಾತಾವರಣವೆಲ್ಲಾ ಕಲಕಿ ಹೋಗುತ್ತದೆ ಅಲ್ವೇ?

ಕಟಕ : ಶತ್ರು ನಾಶ. ಯಾರ ಮೇಲೆಯೂ ಸೇಡು ತೀರಿಸಿಕೊಳ್ಳಬೇಕು ಎಂಬ ಹಠ ಬೇಡ. ಮನೆಯಲ್ಲಿನ ಅಶಾಂತಿಯಿಂದ ದೈನಂದಿನ ಕೆಲಸಗಳಿಗೆ ಧಕ್ಕೆ ತಂದುಕೊಳ್ಳುತ್ತೀರಿ. ಸಹನೆ ನಿಮ್ಮನ್ನು ಬಚಾವ್‌ ಮಾಡಬಲ್ಲುದು.

ಸಿಂಹ : ಅಕಸ್ಮಿಕ ಧನಲಾಭವಿದೆ. ಇವತ್ತು ಹಮ್ಮಿಕೊಳ್ಳುವ ಕೆಲಸ ಈ ತಿಂಗಳು ಪೂರ್ತಿ ನಿಮ್ಮನ್ನು ವ್ಯಸ್ತರನ್ನಾಗಿ ಇಡಲಿದೆ. ವಿಪರೀತ ಕೆಲಸದಿಂದ ಮನಸ್ಸು ಸುಸ್ತಾಗದಂತೆ ನೋಡಿಕೊಳ್ಳಿ. ಹೊಸ ಅವಕಾಶಗಳಿಂದ ವಂಚಿತರಾಗಬಾರದಲ್ಲವೇ ?

ಕನ್ಯಾ : ವ್ಯಾಪಾರದಲ್ಲಿ ಇವತ್ತು ಎಲ್ಲ ಕಡೆಯೂ ಪಾಸಿಟಿವ್‌ ರಿಯಾಕ್ಷನ್‌. ಆದರೆ ಸಂಗಾತಿಯಾಂದಿಗೆ ಮಾತ್ರ ಪುಟ್ಟ ಜಗಳವಾಡುತ್ತೀರಿ. ಮೂಡ್‌ ಔಟ್‌ ಅಂತ ಕೆಲಸಗಳನ್ನೆಲ್ಲಾ ಬದಿಗೊತ್ತಿ ಇಡಬೇಡಿ.

ತುಲಾ : ಮನೆಯಲ್ಲಿ ಶುಭ ಕಾರ್ಯ. ತಾಂತ್ರಿಕ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಅನುಕೂಲಕರ ವಾತಾವರಣ. ಇವತ್ತೇನಾದರೂ ಇಂಟರ್‌ವ್ಯೂಗಳಿದ್ದರೆ, ಖಂಡಿತಾ ತಪ್ಪಿಸಿಕೊಳ್ಳಬೇಡಿ. ಜಯ ನಿಮ್ಮ ಪಾಲಿಗಿರುತ್ತದೆ.

ವೃಶ್ಚಿಕ : ಶತ್ರುಗಳ ಕಾಟ ನಿಮ್ಮ ನೆಮ್ಮದಿಯನ್ನು ಕೆಡಿಸುತ್ತದೆ. ಆದರೆ ನೀವು ನೇರ ದಾರಿಯನ್ನೇ ಆಯ್ದುಕೊಂಡಲ್ಲಿ ಗೆಲುವು ನಿಮ್ಮ ಬಳಿಯೇ ಇರುತ್ತದೆ. ವ್ಯಾಪಾರ ವ್ಯವಹಾರಗಳಿಗೆ ಇದು ಸುದಿನ.

ಧನಸ್ಸು : ಪ್ರಯಾಣದ ಗುಂಗು. ಸ್ನೇಹಿತರ ಭೇಟಿ. ರಾಶಿ ಬಿದ್ದಿರುವ ಕೆಲಸ, ಜವಾಬ್ದಾರಿಗಳು. ಇವತ್ತು ನೀವೇ ಬಿಜಿ ಪರ್ಸನ್‌.

ಮಕರ : ಪ್ರಯಾಣ ಯೋಗವಿದೆ. ಆರೋಗ್ಯದ ಕಡೆ ಮತ್ತೊಮ್ಮೆ ಎಚ್ಚರವಹಿಸಬೇಕಾಗುತ್ತದೆ. ತುಂಬಾ ದಿನಗಳ ನಂತರ ಸ್ನೇಹಿತರನ್ನು ಭೇಟಿಯಾಗುತ್ತಿರುವುದರಿಂದ ಖುಷಿಯಾಗಿರುತ್ತೀರಿ. ಎಂದಿನಂತೆ ಜಗಳ ಕಾದೀರಾ ಜೋಕೆ.

ಕುಂಭ : ಆಫೀಸಿನಲ್ಲಿ ಕೆಲಸ ರಾಶಿ ಬಿದ್ದಿರುವುದನ್ನು ನೆನೆಸಿಕೊಂಡೇ ಸುಸ್ತಾಗುತ್ತೀರಿ. ಪ್ರಯತ್ನದಿಂದ ಕಾರ್ಯಜಯ. ಲಾಟರಿ ಕೊಂಡುಕೊಳ್ಳಬೇಕೆಂದಿದ್ದರೆ ಇವತ್ತೇ ಕೊಳ್ಳಿ.

ಮೀನ : ಕಚೇರಿಯಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತೀರಿ. ತಾಂತ್ರಿಕ ತೊಂದರೆಗಳು ಕ್ಷಣಿಕವಾದ್ದರಿಂದ ಅವಕಾಶಗಳ ಕುರಿತು ಹೆದರಬೇಕಾಗಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+