ಕೃಷ್ಣ ಗೈರು ಹಾಜರಿಯಲ್ಲಿ ಮಿಂಚಿದ ತೆಲುಗು ಬಿಡ್ಡ ನಾಯ್ಡು
ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ದಾಯಾದಿ ಎನ್ನ ಬಹುದಾದ ನೆರೆಯ ತೆಲುಗು ಬಿಡ್ಡ ಚಂದ್ರಬಾಬು ನಾಯ್ಡು ಅಪರೂಪಕ್ಕೆ ಅನ್ನುವಂತೆ ಮಂಗಳವಾರ ಭಾರತದ ಸಿಲಿಕಾನ್ ವ್ಯಾಲಿಗೆ ಆಗಮಿಸಿದ್ದರು. ಏಷ್ಯಾ ಟೆಕ್ನಾಲಜಿ ಸಮ್ಮೇಳನದಲ್ಲಿ ಮಂಗಳವಾರದ ಮುಖ್ಯ ಆಕರ್ಷಣೆ ಅವರೇ.
ಎಐಸಿಸಿ ಅಧಿವೇಶನದಲ್ಲಿ ಬಿಜಿಯಾಗಿರುವ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಮ್ಮೇಳನದಲ್ಲಿ ಹಾಜರಿರಲಿಲ್ಲವಾದ್ದರಿಂದ ನಾಯ್ಡು ಮಾಧ್ಯಮಗಳ ಚುಂಬಕ ಕೇಂದ್ರವಾಗಿದ್ದರು. ವಿದೇಶಿ ಮಾಧ್ಯಮಗಳ ಪಾಲಿಗಂತೂ ನಾಯ್ಡು ಕಣ್ಮಣಿಯಾಗಿದ್ದರು. ನಾಯ್ಡು ಪ್ರಭಾವಳಿಯೆದುರು ಕರ್ನಾಟಕದ ಕೈಗಾರಿಕಾ ಮಂತ್ರಿ ಆರ್.ವಿ. ದೇಶಪಾಂಡೆ ಪಕ್ಕಕ್ಕೆ ಸರಿದದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ .
ಆಂಧ್ರದಲ್ಲಿ ಐಟಿಗೂ ಶಿಕ್ಷಣಕ್ಕೂ ಮದುವೆ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಾವು ತಮ್ಮ ರಾಜ್ಯದಲ್ಲಿ ಹಮ್ಮಿಕೊಂಡಿರುವ ಯೋಜನೆಗಳನ್ನು ನಾಯ್ಡು ಸಮ್ಮೇಳನದಲ್ಲಿ ಹಂಚಿಕೊಂಡರು. ಮುಖ್ಯವಾಗಿ, ವಿಡಿಯೋ ಕಾನ್ಫೆರೆನ್ಸಿಂಗ್ ಸೌಲಭ್ಯ ಹೊಂದಿರುವ ಇಂಜಿನಿಯರಿಂಗ್ ಕಾಲೇಜುಗಳನ್ನು ಆಂಧ್ರದಲ್ಲಿ ಸ್ಥಾಪಿಸುವ ಯತ್ನದಲ್ಲಿದ್ದೇವೆ. ಇದರಿಂದಾಗಿ ಒಬ್ಬನೇ ಉಪನ್ಯಾಸಕ ಏಳು ಶಾಲಾ ಕೊಠಡಿಗಳಲ್ಲಿ ಉಪನ್ಯಾಸ ನೀಡಲು ಸಾಧ್ಯವಾಗಲಿದೆ ಎಂದು ನಾಯ್ಡು ವಿವರಿಸಿದರು.
ಪ್ರಸ್ತುತ ಆಂಧ್ರದಲ್ಲಿ 104 ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದ್ದು , ಎಲ್ಲಾ ಕಾಲೇಜುಗಳಲ್ಲಿಯೂ ವಿಡಿಯೋ ಕಾನ್ಫೆರೆನ್ಸಿಂಗ್ ಸೌಲಭ್ಯ ಅಳವಡಿಸಲು ಉದ್ದೇಶಿಸಿದ್ದೇವೆ. ಪ್ರಸ್ತುತ ವರ್ಷ ಇನ್ನೂ 13 ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.
ಐಟಿ ಕ್ಷೇತ್ರದಲ್ಲಿ ಭಾರತದಲ್ಲಿ ನಂ 1 ಅನ್ನಿಸಿಕೊಳ್ಳಲು ಕೃಷ್ಣ ಹಾಗೂ ನಾಯ್ಡು ನಡುವೆ ನಡೆಯುತ್ತಿರುವ ಸ್ಪರ್ಧೆಯನ್ನು ಕುರಿತ ಸುದ್ದಿಗಾರರ ಪ್ರಶ್ನೆಗೆ- ನನಗೆ ಸಹಕಾರದಲ್ಲಿ ನಂಬಿಕೆಯಿದೆಯೇ ಹೊರತು ಸ್ಪರ್ಧೆಯಲ್ಲಲ್ಲ ಎಂದು ನಾಯ್ಡು ಮುಗುಮ್ಮಾಗಿ ಉತ್ತರಿಸಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications