ಏಷ್ಯಾ ದಿಗ್ಗಜ ಪಟ್ಟಕ್ಕೆ ಚೀನಾ- ಭಾರತ ನಡುವೆ ಟಂಗಾಟುಂಗಿ ಸ್ಪರ್ಧೆ
ಬೆಂಗಳೂರು : ಏಷ್ಯಾ ಖಂಡದ ದಿಗ್ಗಜ ಗದ್ದುಗೆಗೆ ಭಾರತ ಮತ್ತು ಚೀನಾ ನಡುವೆ ತುರುಸಿನ ಸ್ಪರ್ಧೆ ನಡೆಯುತ್ತಿದ್ದು, ಆಂಗ್ಲ ಭಾಷೆಯ ಸಮಸ್ಯೆಯ ನಡುವೆಯೂ ಸ್ಪರ್ಧೆಯಲ್ಲಿ ಚೀನಾ ದೇಶವೇ ಮುಂದಿರುವುದು ಆಶ್ಚರ್ಯವಾದರೂ ಹಕೀಕತ್ತು. ನಗರದಲ್ಲಿ ಮಂಗಳವಾರ ನಡೆದ ಏಷ್ಯಾ ಸೊಸೈಟಿಯ 12ನೇ ಕಾರ್ಪೊರೇಟ್ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೇಳಿಬಂದ ವಿಷಯವಿದು.
ಸಿಂಗಪೂರ್, ಮಲೇಷಿಯಾ ಮತ್ತು ಜಪಾನ್ ದೇಶಗಳು ತಮ್ಮ ಸಾಮರ್ಥ್ಯ ದ ಜೊತೆಗೆ ತಪ್ಪು ನಡೆಗಳನ್ನೂ ತೋರಿವೆ. ಪ್ರಸ್ತುತ ಅಭಿವೃದ್ಧಿಯ ಹಾದಿಯಲ್ಲಿ ದಾಪುಗಾಲಿಡುತ್ತಿರುವ ಭಾರತ ಮತ್ತು ಚೀನಾ, ಈ ಎಲ್ಲಾ ದೇಶಗಳನ್ನು ಒಳಗೊಂಡಂತೆ ಏಷ್ಯಾ ಖಂಡವನ್ನು ಒಂದು ಜಾಲದಡಿ ತಂದು ಬಲಿಷ್ಠವನ್ನಾಗಿಸಬೇಕು. ವಾಣಿಜ್ಯೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಏಕಮೇವಾದ್ವಿತೀಯ ಎಂಬಂತೆ ಮೆರೆಯುತ್ತಿರುವ ಪಾಶ್ಚಿಮಾತ್ಯ ರಾಷ್ಟ್ರಗಳ ಸಮೂಹಕ್ಕೆ ಮಾಂಜಾ ಕೊಡುವಷ್ಟರ ಮಟ್ಟಿಗೆ ಏಷ್ಯಾ ಖಂಡ ಬೆಳೆಯಬೇಕು ಎಂಬುದು ಸಮ್ಮೇಳನದಲ್ಲಿ ಹೊರಬಿದ್ದ ಸರ್ವ ಸಮ್ಮತ ಠರಾವು.
ಐಪಿಆರ್ ವಿಷಯದಲ್ಲಿ ಭಾರತವಿನ್ನೂ ಹಸುಳೆ
ಭಾರತಕ್ಕೆ ಇಂಗ್ಲಿಷ್ ಭಾಷೆಯ ಮೇಲೆ ಚೀನಾಗಿಂತ ಸಾಕಷ್ಟು ಹಿಡಿತ ಇದೆ. ಆದರೂ ಭವಿತವ್ಯದ ಮಿಂಚಾದ ಜೈವಿಕ ತಂತ್ರಜ್ಞಾನದಲ್ಲಿ ಚೀನಾವೇ ನಮಗಿಂತ ಸಾಕಷ್ಟು ಮುಂದಿದೆ. ಚೀನಾ ದೇಶವು ಬೌದ್ಧಿಕ ಸಂಪತ್ತಿನ ಹಕ್ಕು (ಐಪಿಆರ್) ಕುರಿತಂತೆ ಈಗಾಗಲೇ ಚೌಕಟ್ಟನ್ನು ರೂಪಿಸುತ್ತಿದೆ. ಬೌದ್ಧಿಕ ಸಂಪತ್ತನ್ನೆಲ್ಲಾ ಕ್ರಮಬದ್ಧವಾಗಿ ಕಲೆ ಹಾಕಿರುವ ಚೀನಾ ಭಾರತಕ್ಕೆ ದೊಡ್ಡ ಸವಾಲೆಸೆದಿದೆ. ಭಾರತ ಐಪಿಆರ್ ವಿಷಯದಲ್ಲಿ ಇನ್ನೂ ಎಬಿಸಿಡಿ ಕೂಡ ಕಲಿತಿಲ್ಲ ಎಂದು ಭಾರತದ ಜೈವಿಕ ತಂತ್ರಜ್ಞಾನದ ಅದ್ಭುತ ಎಂದೇ ಗುರ್ತಿಸಿಕೊಂಡಿರುವ ಕಿರಣ್ ಮಜುಂದಾರ್ ಹೇಳಿದರು.
ಚೀನಾ ದೇಶ ಜೈವಿಕ ಆಹಾರೋತ್ಪಾದನೆಗೆ ಈಗಾಗಲೇ ಲಕ್ಷಾಂತರ ಎಕರೆ ಭೂಮಿಯನ್ನು ಸ್ವಾಮ್ಯಕ್ಕೆ ತೆಗೆದುಕೊಂಡಿದ್ದರೆ, ಭಾರತದಲ್ಲಿ ಜೈವಿಕ ಆಹಾರೋತ್ಪಾದನೆಗೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಜಿನಾಮಿಕ್ಸ್, ಬಯೋ ಡೈವರ್ಸಿಟಿ, ಬಯೋ ಇನ್ಫರ್ಮ್ಯಾಟಿಕ್ಸ್, ಜೀನ್ ಥೆರಪಿ, ಡಿಎನ್‌ಎ ಮೊದಲಾದ ಕ್ಷೇತ್ರಗಳಲ್ಲಿ ಚೀನಾ ಈಗಾಗಲೇ ನಮಗಿಂತ ಸಾಕಷ್ಟು ಮುಂದಿದೆ. ಜೈವಿಕ ತಂತ್ರಜ್ಞಾನದ ಭವಿತವ್ಯದ ಬಗ್ಗೆ ಅನುಮಾನವೇ ಬೇಡ. ನಮ್ಮಲ್ಲಿನ ನ್ಯೂನತೆಯೇ ಸಂಶೋಧನೆಗೆ ನಾಂದಿಯಾಗುತ್ತದೆ. ಇಷ್ಟೆಲ್ಲಾ ವಿರೋಧಗಳ ನಡುವೆಯೂ ನನ್ನ ಬಯೋಕಾನ್ ಇಂಡಿಯಾ ಕಂಪನಿಯ ಉತ್ಪನ್ನವೊಂದಕ್ಕೆ 250ಕ್ಕೂ ಹೆಚ್ಚು ರೋಗಿಗಳು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜನರಲ್ಲಿ ಜೈವಿಕ ತಂತ್ರಜ್ಞಾನದ ಬಗ್ಗೆ ಸೂಕ್ತ ತಿಳಿವಳಿಕೆ ಮೂಡಿಸಿ, ಸಂಶೋಧನೆಗಳಿಗಿರುವ ಎಡರುಗಳನ್ನು ನಿವಾರಿಸಿದಲ್ಲಿ ಮಾತ್ರ ನಮ್ಮ ದೇಶದ ಭವಿತವ್ಯ ಉತ್ತಮವಾಗಲಿದೆ ಎಂದು ಮಜುಂದಾರ್ ವಿವರಿಸಿದರು.
(ಯುಎನ್‌ಐ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications