Get Updates
Get notified of breaking news, exclusive insights, and must-see stories!

ಇನ್ನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಲು ಭಾರತದ ಹೋರಾಟ

ಕೋಲ್ಕತಾ: ಆಸ್ಟ್ರೇಲಿಯಾ ನಿರೀಕ್ಷೆಯಂತೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಭಾರತ ಫಾಲೋಆನ್‌ ತಪ್ಪಿಸಿಕೊಳ್ಳುವಲ್ಲಿ ವಿಫಲವಾಗಿದೆ. ದಿನದ ವಿಶೇಷ ವಿ.ವಿ.ಎಸ್‌. ಲಕ್ಷ್ಮಣ್‌ ಅವರ ಅರ್ಧ ಶತಕ. ಇದೊಂದೇ ಭಾರತ ಕ್ರಿಕೆಟ್‌ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ತಂದ ವಿಷಯ.

ಫಾಲೋಆನ್‌ ದವಡೆಯಿಂದ ಭಾರತವನ್ನು ಪಾರುಮಾಡಲು ಲಕ್ಷ್ಮಣ್‌ ನಡೆಸಿದ ಪ್ರಯತ್ನವೆಲ್ಲವೂ ವಿಫಲವಾಯಿತು. ಮಂಗಳವಾರ ಬೆಳಗ್ಗೆ ಬಹುಬೇಗನೇ ವೆಂಕಟಪತಿ ರಾಜು ಅವರ ವಿಕೆಟ್‌ ಕಳೆದುಕೊಂಡಾಗಲೇ ಭಾರತ ಫಾಲೋಆನ್‌ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬುದು ವೇದ್ಯವಾಯಿತು. ಆದರೆ, ಲಕ್ಷ್ಮಣ್‌ ಆಕರ್ಷಕ ಬೌಂಡರಿಗಳನ್ನು ಬಾರಿಸಿ ಕೊಂಚ ಆಸೆ ಹುಟ್ಟಿಸಿದರು. ಅಂತಿಮವಾಗಿ ಲಕ್ಷ್ಮಣ್‌ ಔಟಾಗುವ ಮೂಲಕ ಭಾರತದ ಹೋರಾಟಕ್ಕೆ ತೆರೆಬಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 171 ರನ್‌ ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು.

ಆನಂತರ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ದೊರಕಿತು. ಭೋಜನ ವಿರಾಮಕ್ಕೆ ಭಾರತ ವಿಕೆಟ್‌ ನಷ್ಟವಿಲ್ಲದೆ 45ರನ್‌ ಮಾಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಕೆಟ್ಟ ಹೊಡೆತ ಬಾರಿಸಿ ಔಟಾಗಿದ್ದ ಶಡಗೋಪನ್‌ ರಮೇಶ್‌ ಎರಡನೇ ಇನ್ನಿಂಗ್ಸ್‌ನಲ್ಲಿ 33 ಚೆಂಡುಗಳನ್ನು ಎದುರಿಸಿ 30 ರನ್‌ ಗಳಿಸಿದ್ದರು. ದಾಸ್‌ ಎದುರಿಸಿದ 39 ಚೆಂಡುಗಳಿಂದ 14 ರನ್‌ ಮಾಡಿ ಆಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+