ತ್ರಿಮೂರ್ತಿಗಳನ್ನೂ ಕಾಡಿದ ಬಿಸಿಲ ಬೇಗೆ
ದೇವರೇ ಆದ ಈ ಸೂರ್ಯ ದೇವಾನು ದೇವತೆಗಳನ್ನೂ ಕಾಡದೇ ಬಿಟ್ಟಿಲ್ಲ. ತ್ರಿಮೂರ್ತಿಗಳನ್ನೂ ಬಿಟ್ಟಿಲ್ಲ. ಏನು ತ್ರಿಮೂರ್ತಿಗಳೂ ಸೂರ್ಯತಾಪಕ್ಕೆ ಒಳಗಾದರೆ ಎಂಬ ಪ್ರಶ್ನೆ ಸಹಜ. ಹಾಗಿಲ್ಲದಿದ್ದರೆ. ಕೈಲಾಸನಾಥನಾದ ಪರಮೇಶ್ವರನು ತನ್ನ ತಲೆಯ ಮೇಲೆ ನೀರು ಅರ್ಥಾತ್ ಗಂಗೆಯನ್ನೇಕೆ ಧರಿಸುತ್ತಿದ್ದ? ಇನು ್ನ ಜಗತ್ ರಕ್ಷಕನಾದ ಶ್ರೀಮನ್ನಾರಾಯಣನಾದರೂ ಕ್ಷೀರ ಸಮುದ್ರದಲ್ಲೇ ಏಕೆ ವಾಸಿಸುತ್ತಿದ್ದ ? ಎಲ್ಲಕ್ಕಿಂತಲೂ ಮಿಗಿಲಾಗಿ ಸೃಷ್ಟಿಕರ್ತನಾದ ಬ್ರಹ್ಮನು ನೀರಿನಲ್ಲೇ ಹುಟ್ಟಿದ ಕಮಲವನ್ನೇಕೆ ಆಶ್ರಯಿಸುತ್ತಿದ್ದ. ಅಂದಮೇಲೆ ಬಿಸಿಲ ಬೇಗೆ ಇವರನ್ನೂ ಕಾಡಿದೇ ಎಂದೇ ಅರ್ಥ ಅಲ್ಲವೇ.
ತ್ರಿಮೂರ್ತಿಗಳನ್ನೇ ಬಿಡದ ಸೂರ್ಯ ಸಾಮಾನ್ಯರಾದ ನಮ್ಮನ್ನು ಬಿಟ್ಟಾನೆ. ಅದಕ್ಕೆ ನಾವೂ ತ್ರಿಮೂರ್ತಿಗಳಂತೆ ಜಲದಾಶ್ರಯ ಬಯಸಬೇಕಷ್ಟೇ. ಶಿಶಿರದ ಕೊರೆತ ಎಳ್ಳಮಾವಾಸ್ಯೆಗೆ ಎಳ್ಳಿನಷ್ಟು, ಮಕರ ಸಂಕ್ರಾಂತಿಗೆ ಶಂಖದಷ್ಟು ಕಡಿಮೆಯಾಗಿ ಶಿವರಾತ್ರಿಗೆ ಶಿವಶಿವ ಎಂದು ಹೊರಟು ಹೋಗುತ್ತಿದ್ದಂತೆ ಬಿಸಿಲ ಝಳ ತಾನಾಗೇ ಏರುತ್ತಲೇ ಸಾಗುತ್ತದೆ. ಅಬ್ಬಾ ಈ ವರ್ಷ ಅದೇನು ಚಳಿಯಪ್ಪ ನಡುಗಿಸಿಬಿಟ್ಟಿತು ಎನ್ನುತ್ತಿದ್ದ ಜನ ಊಶ್ ಅಪ್ಪಾ ಈ ಸೆಕೆ ತಡೆಯಲಾಗದು. ಅದೇನು ಬಿಸಿಲು ಅದೇನು ಧಗೆ ಎಂದು ರಾಗ ಎಳೆಯದೇ ಇರರು.
ಚಳಿಗಾಲದಲ್ಲಿ ಸ್ವೆಟರ್ ಧರಿಸಿ, ಕಂಬಳಿ ಹೊದ್ದಾದರೂ ನಿದ್ದೆ ಹೋಗಬಹುದು. ಈ ಸೆಕೆ ತಡೆಯುವುದು ಹೇಗೆ. ಫ್ಯಾನ್ ಹಾಕಿದರೂ ಬಿಸಿಗಾಳಿ. ಹೊರಗಿನಿಂದ ಬಂದರಂತೂ ಮುಗಿದೇ ಹೋಯಿತು. ಅದೇನು ಬಿಸಿಲು!
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications