Get Updates
Get notified of breaking news, exclusive insights, and must-see stories!

ಪಿ. ಗೋಪಿಚಂದ್‌ಗೆ ಆಲ್‌ ಇಂಗ್ಲೆಂಡ್‌ ಬ್ಯಾಂಡ್ಮಿಂಟನ್‌ ಪ್ರಶಸ್ತಿ

ಬರ್ಮಿಂಗ್‌ಹ್ಯಾಮ್‌ : ಭಾರತದ ಬ್ಯಾಂಡ್ಮಿಟನ್‌ ಕ್ಷೇತ್ರದಲ್ಲಿ ಮಿನುಗುತ್ತಿರುವ ಬೆಂಗಳೂರಿಗ ಪಿ. ಗೋಪಿಚಂದ್‌ ಇಲ್ಲಿ ನಡೆದ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಪ್ರಶಸ್ತಿ ಪಡೆದ್ದಾರೆ. ಫೈನಲ್‌ನಲ್ಲಿ ಗೋಪಿಚಂದ್‌ ಭಾನುವಾರ Chen Hong ಅವರನ್ನು 15-12, 15-6ರ ನೇರ ಸೆಟ್‌ಗಳಲ್ಲಿ ಮಣಿಸಿ ಈ ಪ್ರಶಸ್ತಿ ಗೆದ್ದರು.

ಗೋಪಿಚಂದ್‌ ಅವರು ಶುಕ್ರವಾರ ನಡೆದ ಪಂದ್ಯದಲ್ಲಿ ಬೋಸೆನ್‌ ಅವರನ್ನು 15-11, 15-7ರ ನೇರ ಸೆಟ್‌ಗಳಲ್ಲಿ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ವಿಶ್ವದ ನಂಬರ್‌ ಒನ್‌ ಆಟಗಾರ ಡೆನ್ಮಾರ್ಕ್‌ನ ಪೀಟರ್‌ ಗೇಡ್‌ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿ ಫೈನಲ್‌ ಪ್ರವೇಶಿಸಿದರು.

ಬ್ಯಾಂಡ್ಮಿಂಟನ್‌ ರಂಗದಲ್ಲಿ ಹಲವು ವರ್ಷಗಳಿಂದ ಗೋಪಿಚಂದ್‌ ಅವರು ಸೆಣಸುತ್ತಿದ್ದರೂ ಇಷ್ಟು ಎತ್ತರಕ್ಕೆ ಎಂದೂ ತಲುಪಿರಲಿಲ್ಲ. 1992ರಲ್ಲಿ ಓಲಿಂಪಿಕ್‌ಗೆ ಬ್ಯಾಂಡ್ಮಿಂಟನ್‌ ಪ್ರವೇಶ ಪಡೆದ ನಂತರ ಚಿನ್ನದ ಪದಕ ಗಳಿಸಿದ ಮೂವರೂ ಆಟಗಾರರನ್ನು ಸೋಲಿಸಿದ್ದು ಗೋಪಿಚಂದ್‌ ಅವರ ಹೆಗ್ಗಳಿಕೆ.

ಆಲ್‌ ಇಂಗ್ಲೆಂಡ್‌ ಬ್ಯಾಂಡ್ಮಿಂಟನ್‌ ಪ್ರಶಸ್ತಿಯನ್ನು ಈ ಮೊದಲು ಗೆದ್ದಿರುವ ಏಕೈಕ ಭಾರತೀಯ ಪ್ರಕಾಶ್‌ ಪಡುಕೋಣೆ ಮಾತ್ರ. 27 ವರ್ಷದ ಗೋಪಿಚಂದ್‌ 1992ರ ಚಿನ್ನದ ಪದಕ ವಿಜೇತ ಇಂಡೋನೇಷಿಯಾದ ಆಲೆನ್‌ ಬುಡಿ ಕುಸುಮ, 1996ರ ಅಟ್ಲಾಂಟಾ ಒಲಿಂಪಿಕ್ಸ್‌ನ ಪದಕ ವಿಜೇತ ಡೆನ್ಮಾರ್ಕ್‌ನ ಪೌಲ್‌ ಎರಿಕ್‌ ಹೊಯರ್‌ ಲಾರ್ಸನ್‌ ಅವರನ್ನೂ ಸೋಲಿಸಿದ್ದರು.

(ರಾಯಿಟರ್ಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+