ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಕೇವಲ ಅವರಿವರ ಬಗ್ಗೆ ಚಿಂತಿಸಿದರೆ ಸಾಲದು. ನಿಮ್ಮ ಬಗ್ಗೆಯೂ ಯೋಚಿಸಿ, ಹೇಳಿಕೆ ಮಾತಿಗೆ ಬೆಲೆಕೊಟ್ಟೀರಿ ಜೋಕೆ.ವೃಷಭ : ಇದು ಋತು ಪರಿವರ್ತನೆಯ ಕಾಲ. ನಿಮ್ಮ ಬದುಕಲ್ಲೂ ಪರಿವರ್ತನೆ ಕಾದಿದೆ. ಇಂದು ಕೈಗೊಳ್ಳುವ ನಿರ್ಧಾರದಿಂದ ಮುಂದೆ ದೊಡ್ಡ ಲಾಭ ಇದೆ.
ಮಿಥುನ : ಪ್ರಯಾಣ ಅನಿವಾರ್ಯ. ಮನೆಯಲ್ಲಿ ಕೊಂಚ ಕಿರಿಕಿರಿ. ಹಣ ಕಾಸಿನ ವ್ಯವಹಾರ ಈ ದಿನದ ಮಟ್ಟಿಗೆ ಬೇಡ. ದೇವರ ಪೂಜೆಯಿಂದ ಕಷ್ಟ ಪರಿಹಾರ.
ಕಟಕ : ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಹತ್ತು ಬಾರಿ ಯೋಚಿಸಿ. ದುಡುಕಿನ ನಿರ್ಧಾರದಿಂದ ಭಾರಿ ನಷ್ಟ ಆದೀತು. ಚೋರ ಭಯ ಇದೆ. ಎಚ್ಚರ.
ಸಿಂಹ : ಸುಖ, ಶಾಂತಿ, ನೆಮ್ಮದಿ ನಿಮ್ಮನ್ನು ಅರಸಿ ಬಂದಿದೆ. ಇಂದು ನೀವು ಮಣ್ಣು ಮುಟ್ಟಿದರೂ ಚಿನ್ನವಾಗುತ್ತದೆ. ಆದರೂ ಗುರು, ದೈವದ ಬಗ್ಗೆ ಗೌರವ ಇರಲಿ.
ಕನ್ಯಾ : ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಎಂಬಂತಿದೆ ನಿಮ್ಮ ಮನಸ್ಸು. ಎತ್ತೆತ್ತಲೋ ಸಾಗುತ್ತಿರುವ ಮನಸ್ಸಿಗೆ ಕಡಿವಾಣ ಹಾಕಿ.
ತುಲಾ : ಪ್ರೇಮ, ಪ್ರೀತಿಗೆ ಇದು ಕಾಲವೂ ಅಲ್ಲ. ಸೂಕ್ತ ವೇದಿಕೆಯೂ ಅಲ್ಲ. ಹತ್ತಾರು ಕಣ್ಣುಗಳು ನಿಮ್ಮನ್ನೇ ನೋಡುತ್ತಿವೆ. ಎಚ್ಚರ ತಪ್ಪಿದರೆ, ಕೆಟ್ಟ ಹೆಸರು ಶಾಶ್ವತ.
ವೃಶ್ಚಿಕ : ಗೆಳೆಯರೊಂದಿಗೆ ಶುಭದಿನ. ಪ್ರಯಾಣದಿಂದ ಧನಲಾಭ. ವ್ಯಾಪಾರ ವಹಿವಾಟಿನಲ್ಲಿ ಧನಾಗಮ. ಅಪರೂಪದ ವ್ಯಕ್ತಿಗಳ ಭೇಟಿ.
ಧನಸ್ಸು : ನಿಮ್ಮ ಅತ್ಮೀಯ ಸ್ನೇಹಿತರ ಅತಿರೇಕದ ವರ್ತನೆ ನೋಡಿಯೂ ಸುಮ್ಮನಿರುವುದು ಸರಿಯಲ್ಲ. ಲೋಕಕ್ಕಾದರೂ ಅಂಜಬೇಕಲ್ಲ. ಸಹವಾಸದಿಂದ ಸನ್ಯಾಸಿಯೂ ಕೆಟ್ಟಂತಾಗಬಾರದು ಹುಷಾರ್.
ಮಕರ : ಅವಿರತ ಶ್ರಮದಿಂದ ಬಳಲಿದ್ದೀರಿ. ಆರೋಗ್ಯದ ಕಡೆ ಗಮನ ನೀಡಿ. ವಿದ್ಯಾರ್ಥಿಗಳಿಗೆ ಶುಭದಿನ. ಮನೆಯಲ್ಲಿ ಮಂಗಳಕಾರ್ಯದ ಮಾತುಕತೆ.
ಕುಂಭ : ಯಾರು ಏನೋ ಎಂದರೆಂದು ನೀವೇಕೆ ತಲೆ ಕೆಡಿಸಿಕೊಳ್ಳುತ್ತೀರಿ. ನಿಮ್ಮ ಭವಿಷ್ಯ ಬರೆಯಲು ಯಾರಿಗೂ ಸಾಧ್ಯವಿಲ್ಲ. ಭಗವಂತನ ನಂಬಿದರೆ ಜಯ ಸಿಗದೇ ಹೋಗುವುದಿಲ್ಲ.
ಮೀನ : ಕೈಲಾಗದವರು ಮೈ ಪರಚಿಕೊಳ್ಳುತ್ತಾರೆ. ಪರಚಿಕೊಳ್ಳಲಿ ಬಿಡಿ. ನಿಮ್ಮ ಶ್ರದ್ಧೆ ಗೌರವ, ಕೀರ್ತಿ ತಂದುಕೊಡುತ್ತದೆ. ಕಾಯಕವೇ ಕೈಲಾಸ ಎಂದು ತಿಳಿದರೆ ಸಾಕು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications