Get Updates
Get notified of breaking news, exclusive insights, and must-see stories!

ಮಹಾರಾಷ್ಟ್ರ - ಕರ್ನಾಟಕ ಗಡಿ ವಿವಾದಮುಗಿದ ಅಧ್ಯಾಯ - ಹೆಗಡೆ

ಬೆಂಗಳೂರು : ಕೇಂದ್ರ ಸಚಿವ ಮನೋಹರ್‌ ಜೋಷಿ ಅವರು ಅನಗತ್ಯವಾಗಿ ಎಬ್ಬಿಸಿರುವ ಗಡಿ ವಿವಾದವನ್ನು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಖಂಡಿಸಿದ್ದಾರೆ. ಗಡಿ ವಿವಾದ ಸಂಬಂಧ ಪ್ರಧಾನ ಮಂತ್ರಿಗಳು ಕರೆಯುವ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಪಾಲ್ಗೊಳ್ಳಬಾರದು. ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ ಎಂದೂ ಅವರು ಬಣ್ಣಿಸಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್‌ ವರದಿಯೇ ಅಂತಿಮ. ಈ ಸಂಬಂಧ ಯಾರೇ ಸಭೆ ಕರೆದರೂ ಕೃಷ್ಣ ಅವರು ಬಹಿಷ್ಕರಿಸಬೇಕು ಎಂದು ಹೆಗಡೆ ಹೇಳಿದರು. ಸಾರ್ವತ್ರಿಕವಾಗಿ ಗಡಿ ವಿಷಯದಲ್ಲಿ ಹೇಳಿಕೆ ನೀಡದಂತೆ ಕೂಡ ಕೃಷ್ಣ ಅವರಿಗೆ ಸಲಹೆ ನೀಡಿದರು.

ಕರ್ನಾಟಕ ತನಗೆ ಅನ್ಯಾಯವಾಗಿದ್ದರೂ ಕೂಡ ಮಹಾಜನ್‌ ವರದಿಯನ್ನು ಒಪ್ಪಿದೆ. ತನ್ನ ಆ ಹಿಂದಿನ ನಿಲುವಿಗೇ ರಾಜ್ಯ ಬದ್ಧವಾಗಿರಬೇಕು ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ ನಗರದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ತಿಳಿಸಿದರು. ಬೆಳಗಾವಿಗೆ ಬಂದು ಸಲ್ಲದ ಹೇಳಿಕೆ ನೀಡಿ ಅನಗತ್ಯ ಗೊಂದಲ ಉಂಟು ಮಾಡಿರುವ ಕೇಂದ್ರ ಸಚಿವ ಮನೋಹರ ಜೋಷಿ ಅವರ ಈ ಅನುಚಿತ ವರ್ತನೆ ಖಂಡಿಸಿ ಉಭಯ ಸದನಗಳಲ್ಲೂ ಗೊತ್ತುವಳಿ ಅಂಗೀಕರಿಸಬೇಕು ಎಂಬ ಸಲಹೆಯನ್ನೂ ಅವರು ನೀಡಿದರು.

ಇಂತಹ ಪ್ರಚೋದನಕಾರಿ ಹೇಳಿಕೆಗಳು ರಾಜ್ಯಗಳ ನಡುವಿನ ಬಾಂಧವ್ಯ ಹಾಗೂ ಸಾಮರಸ್ಯವನ್ನು ಹಾಳುಮಾಡುತ್ತವೆ. ಇಂತಹ ಬೇಜವಾಬ್ದಾರಿ ಹಾಗೂ ಅಧಿಕ ಪ್ರಸಂಗಿತನದಿಂದ ವರ್ತಿಸುವವರು ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು ಎಂದೂ ಹೆಗಡೆ ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವಾರಾಧ್ಯ, ಕನ್ನಡ ಚಳವಳಿ ಕೇಂದ್ರ ಸಮಿತಿಯ ಜಿ. ನಾರಾಯಣ ಕುಮಾರ್‌, ಮಾಜಿ ಶಾಸಕ ಪ್ರಭಾಕರ ರೆಡ್ಡಿ ಮೊದಲಾದವರು ಹಾಜರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+