ಭಾರತ ವಿರುದ್ಧದ ಒಂದು ದಿನದ ಪಂದ್ಯಕ್ಕೆಆಸ್ಟ್ರೇಲಿಯಾ ತಂಡ ಪ್ರಕಟ
ಸಿಡ್ನಿ : ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮಾರ್ಚ್ 25ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಸೀಮಿತ ಓವರುಗಳ ಒಂದು ದಿನದ ಪಂದ್ಯಕ್ಕೆ 14 ಮಂದಿ ಸಂಭವನೀಯರ ತಂಡವನ್ನು ಪ್ರಕಟಿಸಿದೆ. ವೆಸ್ಟ್ ಇಂಡೀಸ್, ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ತ್ರಿಕೋಣ ಸರಣಿಯಲ್ಲಿದ್ದ ತಂಡವನ್ನೇ ಈ ಪಂದ್ಯಕ್ಕೂ ಉಳಿಸಿಕೊಳ್ಳಲಾಗಿದ್ದು, ಏಕೈಕ ಬದಲಾವಣೆ ಎಂದರೆ, ಗಾಯಗೊಂಡಿದ್ದ ವೇಗದ ಬೌಲರ್ ಗಿಲಿಪ್ಸಿ ತಂಡವನ್ನು ಸೇರಿದ್ದಾರೆ.
ಸಂಭವನೀಯ 14 ಆಟಗಾರರ ಪೈಕಿ 9 ಮಂದಿ ಈಗಾಗಲೇ ಭಾರತ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದವರಾಗಿದ್ದಾರೆ. ಇನ್ನುಳಿದ ಐವರನ್ನು ಆಸ್ಟ್ರೇಲಿಯಾ ತನ್ನ ಯಶಸ್ಸಿನ ಕಾರ್ಯತಂತ್ರದ ರೀತ್ಯ ಆಯ್ಕೆ ಮಾಡಿದೆ. ಏಕ ದಿನದ ಪಂದ್ಯದ ಸ್ಪೆಷಲಿಸ್ಟ್‌ಗಳೆಂದೇ ಖ್ಯಾತರಾಗಿರುವ ಮೈಕೆಲ್ ಬೆವನ್, ಇಯಾನ್ ಹಾರ್ವೆ, ಡೆರೆನ್ ಲೇಮನ್, ಅ್ಯಂಡ್ರೂ ಸಿಮಂಡ್ಸ್ ಈ ಮಾಸಾಂತ್ಯದಲ್ಲಿ ಭಾರತಕ್ಕೆ ಆಗಮಿಸುತ್ತಿದ್ದು, ತಂಡವನ್ನು ಸೇರಿಕೊಳ್ಳಲಿದ್ದಾರೆ.
ಅಂತೆಯೇ ಮೈಕೆಲ್ ಸ್ಲೇಟರ್, ಜಸ್ಟಿನ್ ಲ್ಯಾಂಗರ್, ಕಾಲಿನ್ ಮಿಲ್ಲರ್, ಮೈಕಲ್ ಕಾಸ್ಪ್ರೋವಿಚ್ ಮತ್ತು ಮ್ಯಾಥ್ಯು ಹೆಡನ್ ಅವರು ಅಂತಿಮ ಟೆಸ್ಟ್ ಪಂದ್ಯದ ನಂತರ ಸ್ವದೇಶಕ್ಕೆ ಮರಳಲಿದ್ದಾರೆ.
ತಂಡ ಇಂತಿದೆ : ಸ್ಟೀವ್ ವಾ (ನಾಯಕ), ಆ್ಯಡಂ ಗಿಲ್‌ಕ್ರಿಸ್ಟ್, ಮೈಕೆಲ್ ಬೆವನ್, ನಾದನ್ ಬ್ರಾಕೆನ್, ಡೇಮಿಯನ್ ಫ್ಲೆಮಿಂಗ್, ಜೇಸೆನ್ ಗಿಲಿಪ್ಸಿ, ಇಯಾನ್ ಹಾರ್ವೆ, ಡೆರೆನ್ ಲೇಮನ್, ಡೇಮಿಯನ್ ಮಾರ್ಟಿನ್, ಗ್ಲೆನ್ ಮೆಕ್‌ಗ್ರಾಥ್, ರಿಕಿ ಪಾಂಟಿಂಗ್, ಆ್ಯಂಡ್ರೂ ಸಿಮಂಡ್ಸ್, ಶೇನ್ ವಾರ್ನೆ, ಮಾರ್ಕ್ ವಾ.
(ರಾಯಿಟರ್ಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications