ಆಲ್ ಇಂಗ್ಲೆಂಡ್ ಬ್ಯಾಂಡ್ಮಿಂಟನ್ ಸೆಮಿಫೈನಲ್ಗೆ ಗೋಪಿಚಂದ್
ಬರ್ಮಿಂಗ್ಹ್ಯಾಮ್ : ಭಾರತದ ಬ್ಯಾಂಡ್ಮಿಟನ್ ಕ್ಷೇತ್ರದಲ್ಲಿ ಮಿನುಗುತ್ತಿರುವ ಬೆಂಗಳೂರಿಗ ಪಿ. ಗೋಪಿಚಂದ್ ಇಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಡೆನ್ಮಾರ್ಕ್ನ ಆ್ಯಂಡ್ರೆಸ್ ಬೋಸೆನ್ ಅವರನ್ನು ಪರಾಭವಗೊಳಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಗೋಪಿಚಂದ್ ಅವರು ಶುಕ್ರವಾರ ನಡೆದ ಪಂದ್ಯದಲ್ಲಿ ಬೋಸೆನ್ ಅವರನ್ನು 15-11, 15-7ರ ನೇರ ಸೆಟ್ಗಳಲ್ಲಿ ಮಣಿಸಿದರು. ಈ ಚಾಂಪಿಯನ್ಷಿಪ್ನಲ್ಲಿ ಗೋಪಿಚಂದ್ ಅವರು, ಒಲಿಂಪಿಕ್ ಪ್ರಶಸ್ತಿ ವಿಜೇತ ಜಿ ಕ್ಷಿನ್ಪೆಂಗ್ ಅವರನ್ನು 15-3, 15-9ರಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದರು.
ಬ್ಯಾಂಡ್ಮಿಂಟನ್ ರಂಗದಲ್ಲಿ ಹಲವು ವರ್ಷಗಳಿಂದ ಗೋಪಿಚಂದ್ ಅವರು ಸೆಣಸುತ್ತಿದ್ದರೂ ಇಷ್ಟು ಎತ್ತರಕ್ಕೆ ಎಂದೂ ತಲುಪಿರಲಿಲ್ಲ. 1992ರಲ್ಲಿ ಓಲಿಂಪಿಕ್ಗೆ ಬ್ಯಾಂಡ್ಮಿಂಟನ್ ಪ್ರವೇಶ ಪಡೆದ ನಂತರ ಚಿನ್ನದ ಪದಕ ಗಳಿಸಿದ ಮೂವರೂ ಆಟಗಾರರನ್ನು ಸೋಲಿಸಿದ್ದು ಗೋಪಿಚಂದ್ ಅವರ ಹೆಗ್ಗಳಿಕೆ.
ಆಲ್ ಇಂಗ್ಲೆಂಡ್ ಬ್ಯಾಂಡ್ಮಿಂಟನ್ ಪ್ರಶಸ್ತಿಯನ್ನು ಈಮೊದಲು ಗೆದ್ದಿರುವ ಏಕೈಕ ಭಾರತೀಯ ಪ್ರಕಾಶ್ ಪಡುಕೋಣೆ ಮಾತ್ರ. ಈಗ ಸೆಮಿಫೈನಲ್ ತಲುಪಿರುವ ಗೋಪಿಚಂದ್ ಅವರಿಗೆ ಈ ಪ್ರಶಸ್ತಿ ಗೆಲ್ಲುವ ಅವಕಾಶ ಒದಗಿ ಬಂದಿದೆ.
27 ವರ್ಷದ ಗೋಪಿಚಂದ್ 1992ರ ಚಿನ್ನದ ಪದಕ ವಿಜೇತ ಇಂಡೋನೇಷಿಯಾದ ಆಲೆನ್ ಬುಡಿ ಕುಸುಮ, 1996ರ ಅಟ್ಲಾಂಟಾ ಒಲಿಂಪಿಕ್ಸ್ನ ಪದಕ ವಿಜೇತ ಡೆನ್ಮಾರ್ಕ್ನ ಪೌಲ್ ಎರಿಕ್ ಹೊಯರ್ ಲಾರ್ಸನ್ ಅವರನ್ನೂ ಸೋಲಿಸಿದ್ದರು. ಈಗ ಬೋಸೆನ್ ಅವರ ವಿರುದ್ಧ ಜಯ ಸಾಧಿಸಿರುವ ಗೋಪಿಚಂದ್ ವಿಶ್ವದ ನಂಬರ್ ಒನ್ ಆಟಗಾರ ಪೀಟರ್ ಗೇಡ್ ಅವರನ್ನು ಎದುರಿಸುವ ಸಾಧ್ಯತೆ ಇದೆ.
(ರಾಯಿಟರ್ಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications